ಕೋಟಿ, ಕೋಟಿ ಸಾಲ ಮಾಡಿದ್ರಾ ಕರಿಮಣಿ ನಿರ್ದೇಶಕ; ವಿನೋದ್ ದೋಂಡಳೆ ಸಾವಿಗೆ ಅಸಲಿ ಕಾರಣವೇನು?

author-image
Veena Gangani
Updated On
ಕರಿಮಣಿ ನಿರ್ದೇಶಕ​ನ ಸಾವಿಗೆ ತುಂಬಾ ಜನ ಕಾರಣರಾಗಿದ್ದಾರೆ; ಪಿ.ಶೇಷಾದ್ರಿ ಶಾಕಿಂಗ್​ ಹೇಳಿಕೆ
Advertisment
  • ಇಡೀ ಇಂಡಸ್ಟ್ರಿಯಲ್ಲೇ ಸಖತ್​ ಫೇಮಸ್ ಆಗಿತ್ತು ವಿನೋದ್ ಮತ್ತು ನರಹರಿ ಜೋಡಿ
  • ವೃದ್ಧಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಸೀರಿಯಲ್​ ನಿರ್ಮಾಣ ಮಾಡಿದ್ದ ನಿರ್ದೇಶಕ
  • ಮುಂದಿನ ವಾರದಿಂದ ಶುರುವಾಗಬೇಕಿದ್ದ ಕೊನೆಯ ಹಂತದ ಸಿನಿಮಾ ಶೂಟಿಂಗ್​

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೋಂಡಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವಿನೋದ್ ದೋಂಡಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರೋ ನಿರ್ದೇಶಕ ವಿನೋದ್ ದೋಂಡಳೆ ಅವರು ವೃದ್ಧಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದರು.

publive-image

ಇದನ್ನೂ ಓದಿ:ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಟಿ.ಎನ್ ಸೀತಾರಾಮ್ ಸಂತಾಪ; ಹೇಳಿದ್ದೇನು?

ವಿನೋದ್ ಮತ್ತು ನರಹರಿ ಜೋಡಿ ಸೀರಿಯಲ್ ಇಂಡಸ್ಟ್ರಿಯಲ್ಲಿ ಫೇಮಸ್ ಆಗಿತ್ತು. ವಿನೋದ್ ಅವರು ಡೈರೆಕ್ಷನ್ ಮತ್ತು ಕಂಟೆಂಟ್ ನೋಡಿಕೊಳ್ತಿದ್ದರು. ನರಹರಿ ಪ್ರೊಡಕ್ಷನ್ ಬಗ್ಗೆ ಗಮನ ಹರಿಸುತ್ತಿದ್ದರು. ನರಹರಿ ಪ್ರೊಡಕ್ಷನ್ ಹಾಗೂ ವಿನೋದ್ ದೋಂಡಳೆ ಇಬ್ಬರು ಸೇರಿ ವೃದ್ಧಿ ಕ್ರಿಯೇಷನ್ಸ್ ಶುರು ಮಾಡಿದ್ದರು. ಇದೇ ವೃದ್ಧಿ ಕ್ರಿಯೇಷನ್ಸ್ ಅಡಿಯಲ್ಲಿ ಹಲವು ಸೀರಿಯಲ್ ಗಳನ್ನ ನಿರ್ಮಾಣ ಮಾಡಿದ್ದರು. ಅದರಲ್ಲೂ ವೃದ್ಧಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿದ್ದ ನನ್ನರಸಿ ರಾಧೆ ಸೀರಿಯಲ್​ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿಸಿಕೊಂಡಿದೆ.

publive-image

ಹಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ವಿನೋದ್​ ದೋಂಡಳೆ ಸಾವಿನ ಸುದ್ದಿ ಕೇಳಿ ಕಿರುತೆರೆ ಕಲಾವಿದರು ಆಘಾತಕ್ಕೆ ಒಳಗಾಗಿದ್ದಾರೆ. ಜನಪ್ರಿಯ ಧಾರಾವಾಹಿಗಳಾದ ನನ್ನರಸಿ ರಾಧೆ, ಕರಿಮಣಿ, ಮೌನರಾಗ ಸೇರಿದಂತೆ ಹಲವು ಸೀರಿಯಲ್​ಗಳನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುವ ಶಾಂತಂ ಪಾಪಂ ಎಪಿಸೋಡ್​ಗಳನ್ನು ಕೂಡ ನಿರ್ದೇಶನ ಮಾಡಿದ್ದಾರೆ.

publive-image

ಸ್ಯಾಂಡಲ್​ವುಡ್​ ನಟ ನಿನಾಸಂ ಅಭಿನಯದ ‘ಅಶೋಕ ಬ್ಲೇಡ್’ ಸಿನಿಮಾದ ಕೊನೆಯ ಹಂತದ ಶೂಟಿಂಗ್​ ಮುಂದಿನ ವಾರದಿಂದ ಶುರು ಮಾಡಬೇಕಿತ್ತಂತೆ. ಹೀಗಾಗಿ ನಿನ್ನೆ ಸಂಜೆಯಷ್ಟೇ ನಿನಾಸಂ ಸತೀಶ್ ಮತ್ತು ಚಿತ್ರತಂಡದ ಜೊತೆ ನಿರ್ದೇಶಕ ವಿನೋದ್ ದೋಂಡಳೆ ಮಾತಾಡಿ ಮನೆಗೆ ಬಂದಿದ್ದರಂತೆ. ಆದರೆ ಇಂದು ನಾಗರಬಾವಿಯಲ್ಲಿರೋ ಮನೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿನೋದ್ ಅವರು ಪ್ರೊಡಕ್ಷನ್​ಗಾಗಿ ಸುಮಾರು ಎರಡು ಕೋಟಿಗೂ ಅಧಿಕ ಮೊತ್ತದ ಹಣ ಸಾಲ ಮಾಡಿಕೊಂಡಿದ್ದರಂತೆ. ಸಾಲ ಬಾಧೆ ತಾಳಲಾರದೆ ವಿನೋದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ನಿರ್ದೇಶಕ ವಿನೋದ್ ಸಾವಿಗೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment