newsfirstkannada.com

VIDEO: ಪ್ರದೀಪ್ ಈಶ್ವರ್‌ ಸೂಪರ್ 60 ಸಕ್ಸಸ್‌; ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆದ SSLC ವಿದ್ಯಾರ್ಥಿಗಳು

Share :

Published May 9, 2024 at 2:46pm

  ಇಂದು ರಾಜ್ಯಾದ್ಯಂತ ಪ್ರಕಟವಾಯ್ತು ಎಸ್​ಎಸ್​​ಎಲ್​ಸಿ ಫಲಿತಾಂಶ

  ಶಾಸಕ ಪ್ರದೀಪ್ ಈಶ್ವರ್ ಆರಂಭಿಸಿರುವ ಸೂಪರ್‌ 60 ಯಶಸ್ವಿ

  ಆನಂದ್ ಕುಮಾರ್ ಸೂಪರ್ 30 ಕಾರ್ಯಕ್ರಮದಿಂದ ಪ್ರೇರಣೆ

ಚಿಕ್ಕಬಳ್ಳಾಪುರ: ಇಂದು ರಾಜ್ಯಾದ್ಯಂತ ಎಸ್​ಎಸ್​​ಎಲ್​ಸಿ ಫಲಿತಾಂಶ ಪ್ರಕಟವಾಗಿದೆ. ಅದೇಷ್ಟೋ ವಿದ್ಯಾರ್ಥಿಗಳ ಕನಸ್ಸು ಇಂದು ನನಸಾಗಿದೆ. ಅದರಲ್ಲೂ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶುರು ಮಾಡಿದ ಸೂಪರ್‌ 60 ಶೈಕ್ಷಣಿಕ ಕಾರ್ಯಕ್ರಮ ಕೊನೆಗೂ ಯಶಸ್ವಿಯಾಗಿದೆ.

ಇದನ್ನೂ ಓದಿ: ರೈತನ ಮಗ SSLCಯಲ್ಲಿ ರಾಜ್ಯಕ್ಕೇ ದ್ವಿತೀಯ.. ತಂದೆಗೆ ಖುಷಿಯೋ ಖುಷಿ

ಹೌದು, ಆರಂಭವಾದ ಮೊದಲ ವರ್ಷದಲ್ಲೇ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸೂಪರ್‌ 30ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಾಗಿತ್ತು. ಇದೀಗ ಸೂಪರ್ 60ಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅದರಲ್ಲೂ ಬಹುತೇಕ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್​ನಲ್ಲಿ ಪಾಸ್ ಆಗಿದ್ದಾರೆ. ಸರ್ಕಾರಿ ಶಾಲೆ ಮತ್ತು ಸರ್ಕಾರಿ ಏಡೆಡ್ ಶಾಲೆಗಳಿಂದ ಒಟ್ಟು 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸೂಪರ್ 60ನಲ್ಲಿ ತರಬೇತಿ ನೀಡಲಾಗಿತ್ತು. ಅದರಲ್ಲಿ ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಟ್ರೈನಿಂಗ್ ಸಹ ನೀಡಲಾಗಿತ್ತು.

ಬೆಂಗಳೂರಿನಲ್ಲಿ 1 ರಿಂದ 2 ತಿಂಗಳ ಕಾಲ ನುರಿತ ತಜ್ಞರಿಂದ ತರಬೇತಿ ಕೊಡಿಸಲಾಗಿತ್ತು. ಈ ತರಬೇತಿಯನ್ನು ನೀಡಲು ಸೂಪರ್ 60 ಎಂಬ ಶೈಕ್ಷಣಿಕ ಕಾರ್ಯಕ್ರಮ ಶಾಸಕ ಪ್ರದೀಪ್ ಈಶ್ವರ್ ಅವರು ಆರಂಭಿಸಿದ್ದರು. ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸದ್ಯ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರದ‌ ಜೂನಿಯರ್ ಕಾಲೇಜು ಆವರಣದಲ್ಲಿ ಸೇರಿಕೊಂಡು ಶಾಸಕ ಪ್ರದೀಪ್ ಈಶ್ವರ್​ಗೆ ಹೂವಿನ ಸುರಿಮಳೆ ಗೈದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪ್ರದೀಪ್ ಈಶ್ವರ್‌ ಸೂಪರ್ 60 ಸಕ್ಸಸ್‌; ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆದ SSLC ವಿದ್ಯಾರ್ಥಿಗಳು

https://newsfirstlive.com/wp-content/uploads/2024/05/pradeep3.jpg

Load More