ಲಿವೀಂಗ್ ಟುಗೇದರ್​​ನಲ್ಲಿದ್ದ ಗೆಳತಿಯ ಉಸಿರು ನಿಲ್ಲಿಸಿದ ಪಾರ್ಟ್ನರ್.. 2 ದಿನ ಮೃತದೇಹದ ಜೊತೆ ಕಳೆದ..!

author-image
Ganesh
Updated On
ಲಿವೀಂಗ್ ಟುಗೇದರ್​​ನಲ್ಲಿದ್ದ ಗೆಳತಿಯ ಉಸಿರು ನಿಲ್ಲಿಸಿದ ಪಾರ್ಟ್ನರ್.. 2 ದಿನ ಮೃತದೇಹದ ಜೊತೆ ಕಳೆದ..!
Advertisment
  • ಮಧ್ಯಪ್ರದೇಶದ ಭೋಪಾಲ್​ನಲ್ಲಿ ಭಯಾನಕ ಘಟನೆ
  • ಪ್ರೀತಿ-ಪ್ರೇಮದಲ್ಲಿ ಒಟ್ಟಿಗೆ ಇದ್ದವರಿಗೆ ಮಧ್ಯರಾತ್ರಿ ಆಗಿದ್ದೇನು?
  • ಪಾಪದ ಕೃತ್ಯಕ್ಕೆ ಕಾರಣವಾಯ್ತಾ ನಿರುದ್ಯೋಗ..?

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಲಿವೀಂಗ್ ಟುಗೆದರ್​ನಲ್ಲಿದ್ದ ಯುವತಿಯನ್ನು ಯುವಕ ಮುಗಿಸಿದ್ದಾನೆ. ಭೋಪಾಲ್‌ನ ಗಾಯತ್ರಿನಗರದ 29 ವರ್ಷದ ರಿತಿಕಾ ಸೇನ್‌, ತನ್ನ ಲಿವೀಂಗ್ ಟುಗೆದರ್ ಪಾರ್ಟನರ್‌ ಸಚಿನ್ ರಜಪೂತ್​ನಿಂದ ಪ್ರಾಣ ಕಳೆದುಕೊಂಡಿದ್ದಾಳೆ.

ಈ ಹತ್ಯೆಯ ಸುದ್ದಿಯಿಂದ ಭೋಪಾಲ್ ಜನರು ಶಾಕ್ ಗೊಳಗಾಗಿದ್ದಾರೆ. ರಿತಿಕಾ ಸೇನ್​ಳನ್ನು ಹತ್ಯೆ ಮಾಡಿದ ಬಳಿಕ ಆಕೆಯ ಶವವನ್ನು ಬ್ಲಾಂಕೆಟ್​ನಲ್ಲಿ ಸುತ್ತಿಟ್ಟು, ಶವದ ಜೊತೆ 2 ರಾತ್ರಿ ಕಳೆದಿದ್ದಾನೆ. ಏನೂ ಆಗಿಲ್ಲ ಎಂಬಂತೆ 2 ದಿನ ಕಳೆದಿದ್ದಾನೆ. ಜೂನ್‌ 27ರ ರಾತ್ರಿಯೇ ವಾಗ್ವಾದ ನಡೆದು ರಿತಿಕಾ ಸೇನ್​ಳ ಅಂತ್ಯವಾಗಿದೆ.

ಇದನ್ನೂ ಓದಿ: ಹಾಸನದ ಹರ್ಷಿತಾಗೆ ಶಿವಮೊಗ್ಗದಲ್ಲಿ ಹೃದಯಾಘಾತ.. ಒಂದೂವರೆ ತಿಂಗಳ ಹಸಿಗೂಸು ತಬ್ಬಲಿ

publive-image

ನಿರುದ್ಯೋಗಿಯಾಗಿದ್ದ ಸಚಿನ್ ರಜಪೂತ್‌, ಲಿವೀಂಗ್ ಟುಗೇದರ್ ಪಾರ್ಟನರ್ ರಿತಿಕಾ ಸೇನ್ ಬಗ್ಗೆ ಅಸೂಯೆ ಹೊಂದಿದ್ದ. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ರಿತಿಕಾ ಸೇನ್, ತನ್ನ ಬಾಸ್ ಜೊತೆ ಅಫೇರ್ ಹೊಂದಿರಬಹುದು ಎಂಬ ಶಂಕೆ ಸಚಿನ್ ರಜಪೂತ್‌ಗೆ ಇತ್ತು. ಈ ವಿಷಯದ ಬಗ್ಗೆ ವಾಗ್ವಾದ, ಜಗಳ ನಡೆಯುವಾಗ, ಕೋಪದಲ್ಲೇ ಸಚಿನ್ ರಜಪೂತ್‌, ರಿತಿಕಾ ಸೇನ್‌ಳ ಕುತ್ತಿಗೆ ಹಿಸುಕಿದ್ದಾನೆ.

ಬಳಿಕ ಅದೇ ಕೊಠಡಿಯಲ್ಲಿ 2 ದಿನ ಕಳೆದಿದ್ದಾನೆ. ಬಳಿಕ ಸಚಿನ್ ರಜಪೂತ್ ಮದ್ಯ ಸೇವನೆ ಮಾಡಿದ್ದಾನೆ. ಕಳೆದ ಭಾನುವಾರ ಅಸಲಿ ವಿಷಯವನ್ನು ಮದ್ಯ ಸೇವನೆಯ ಮತ್ತಿನಲ್ಲಿ ಸ್ನೇಹಿತ ಅನೂಜ್ ಮಿಸರೋಡ್‌ಗೆ ತಿಳಿಸಿದ್ದಾನೆ. ಮೊದಲ ಭಾರಿಗೆ ಹೇಳಿದಾಗ ಅನೂಜ್ ನಂಬಿಲ್ಲ. ಬಳಿಕ ಮಾರನೇ ದಿನವೂ ತಿಳಿಸಿದ್ದಾನೆ. ಸೋಮವಾರ ಸಂಜೆ, ಅನೂಜ್‌ ಪೊಲೀಸರಿಗೆ ತಿಳಿಸಿದ್ದಾನೆ. ಬಜಾರಿಯಾ ಪೊಲೀಸ್ ಠಾಣೆಯ ಪೊಲೀಸರು ಬಾಡಿಗೆ ಮನೆಗೆ ಹೋಗಿ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ರಿತಿಕಾ ಸೇನ್ ಶವ ಪತ್ತೆಯಾಗಿತ್ತು.

ಇದನ್ನೂ ಓದಿ: ​ಕ್ರಿಸ್​​ ಗೇಲ್ ಜೊತೆ ವಿಜಯ್ ಮಲ್ಯ, ಲಲಿತ್ ಮೋದಿ ಭರ್ಜರಿ ಪಾರ್ಟಿ..

ರಿತಿಕಾ ಸೇನ್- ಸಚಿನ್ ರಜಪೂತ್ ಕಳೆದ ಮೂರೂವರೆ ವರ್ಷಗಳಿಂದ ಲಿವೀಂಗ್ ಟುಗೇದರ್ ನಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಸಚಿನ್ ರಜಪೂತ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಜೂನ್ 27 ರಂದು ರಾತ್ರಿ ಸಚಿನ್- ರಿತಿಕಾ ಇಬ್ಬರು ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ಹೋದಾಗ ಸಚಿನ್ ಕುತ್ತಿಗೆ ಹಿಸುಕಿದ್ದಾನೆ. ಬಳಿಕ ಮೃತದೇಹವನ್ನು ಬ್ಲಾಂಕೆಟ್‌ನಲ್ಲಿ ಸುತ್ತಿಟ್ಟು, 2 ದಿನ ಕಳೆದಿದ್ದಾನೆ. ಇದು ಜೋಕ್ ಅಲ್ಲ ಎಂದು ಸ್ನೇಹಿತನಿಗೆ ಅರಿವಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಶಿಲ್ಪಾ ಕೌರವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಚಿನ್ ರಜಪೂತ್, ವಿಧಿಶಾ ಜಿಲ್ಲೆಯ ಸಿರೋಜ್ ನಿವಾಸಿ. 9 ತಿಂಗಳ ಹಿಂದೆ ಭೋಪಾಲ್​ನ ಗಾಯತ್ರಿನಗರದ ಬಾಡಿಗೆ ಮನೆಗೆ ಬಂದಿದ್ದರು. ರಿತಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಸಚಿನ್ ನಿರುದ್ಯೋಗಿಯಾಗಿ ಆಕೆಯ ಬಗ್ಗೆ ಅನುಮಾನಪಡುತ್ತಿದ್ದ. ಈಗ ಪೊಲೀಸರು ಸಚಿನ್ ರಜಪೂತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.

ಇದನ್ನೂ ಓದಿ: ಅಮ್ಮನ ವಿರುದ್ಧ ಸಾಕ್ಷಿ ಹೇಳಿದ ಮಗಳು.. ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment