ಅತಿ ಕಡಿಮೆ ನಿರುದ್ಯೋಗ ಪ್ರಮಾಣ ಹೊಂದಿದ ರಾಜ್ಯ ಯಾವುದು?
2023ರ ಜುಲೈನಿಂದ 2024ರ ಜೂನ್ವರೆಗೆ ಸಮೀಕ್ಷೆ ನಡೆಸಲಾಗಿದೆ
ಕರ್ನಾಟಕ ನಿರುದ್ಯೋಗ ಪ್ರಮಾಣದಲ್ಲಿ ಎಷ್ಟನೇ ಸ್ಥಾನದಲ್ಲಿ ಇದೆ..?
ನವದೆಹಲಿ: ಇಡೀ ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳದಲ್ಲಿ ಅತ್ಯಧಿಕ ನಿರುದ್ಯೋಗ ಪ್ರಮಾಣ ಇದೆ ಎಂದು ಕೇಂದ್ರ ಸರ್ಕಾರದ ಪೀರಿಯಡಿಕ್ ಲೇಬರ್ ಪೋರ್ಸ್ ಸರ್ವೇ ತಿಳಿಸಿದೆ.
ದೇಶದಲ್ಲಿ ಕೇರಳ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಎಂಬ ಖ್ಯಾತಿ ಪಡೆದಿದೆ. ವಿದ್ಯಾವಂತರೇ ಹೆಚ್ಚಾಗಿರುವ ರಾಜ್ಯದಲ್ಲಿ ಶೇ.29.9 ರಷ್ಟು ನಿರುದ್ಯೋಗ ಪ್ರಮಾಣವಿದ್ದು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚಿನ ನಿರುದ್ಯೋಗ ಪ್ರಮಾಣ ಕೇರಳದಲ್ಲಿದೆ. ಕಾಂಗ್ರೆಸ್, ಎಡಪಕ್ಷಗಳು ನಿರಂತರವಾಗಿ ಆಡಳಿತ ನಡೆಸುತ್ತಿರುವ ಕೇರಳದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಕೇರಳದಲ್ಲಿ ಶೇ.47 ರಷ್ಟು ಮಹಿಳೆಯರು, ಶೇ.19.3ರಷ್ಟು ಪುರುಷರು ನಿರುದ್ಯೋಗಿಗಳು ಆಗಿದ್ದಾರೆ. 2023ರ ಜುಲೈ ನಿಂದ 2024ರ ಜೂನ್ವರೆಗೆ ಕೇಂದ್ರ ಸರ್ಕಾರ ನಡೆಸಿದ ಪೀರಿಯಡಿಕ್ ಲೇಬರ್ ಪೋರ್ಸ್ ಸರ್ವೇಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಇದನ್ನೂ ಓದಿ: SSLC, ITI ಅಭ್ಯರ್ಥಿಗಳಿಗೆ 3 ಸಾವಿರಕ್ಕೂ ಅಧಿಕ ಜಾಬ್ಗಳು.. ಪರೀಕ್ಷೆ ಇಲ್ಲ, ಮೆರಿಟ್ನಲ್ಲಿ ಆಯ್ಕೆ ಮಾತ್ರ!
ಮಧ್ಯಪ್ರದೇಶ, ಗುಜರಾತ್ನಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇದ್ದು ಉದ್ಯೋಗಸ್ಥರು ಹೆಚ್ಚಿಗಿದ್ದಾರೆ. ದೇಶದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ನಗರ ಪ್ರದೇಶಗಳಲ್ಲಿ ಹೆಚ್ಚಿನ ನಿರುದ್ಯೋಗ ಇದೆ. ನಗರ ಪ್ರದೇಶಗಳಲ್ಲಿ ಶೇ.14ರಷ್ಟು, ಗ್ರಾಮೀಣಾ ಪ್ರದೇಶಗಳಲ್ಲಿ ಶೇ.8ರಷ್ಟು ನಿರುದ್ಯೋಗವಿದೆ. ದೇಶ ಆರ್ಥಿಕವಾಗಿ ಪ್ರಬಲವಾಗುತ್ತಿದ್ದರೂ ನಿರುದ್ಯೋಗ ಹೆಚ್ಚುತ್ತಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲೆನೋವಾಗಿದ್ದು ಉದ್ಯೋಗ ನಿರ್ಮಾಣಕ್ಕೆ ಏನೇ ಕ್ರಮ ಕೈಗೊಂಡರು ಪ್ರಯೋಜನಾವಾಗುತ್ತಿಲ್ಲ. ನಿರುದ್ಯೋಗ ಸಮಸ್ಯೆ ನಿವಾರಿಸಲು ಆಗದೇ ಕೇಂದ್ರ, ರಾಜ್ಯ ಸರ್ಕಾರಗಳು ಪರದಾಡುತ್ತಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕದ ರೆವಿನ್ಯೂ ಇಲಾಖೆಯಲ್ಲಿ ಬೃಹತ್ ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ಕೊನೆ ದಿನಾಂಕ?
ರಾಜ್ಯಗಳಲ್ಲಿ ನಿರುದ್ಯೋಗ ಎಷ್ಟಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ