newsfirstkannada.com

ಟಿ20 ವಿಶ್ವಕಪ್​​ನಲ್ಲಿ ಅಚ್ಚರಿ ಫಲಿತಾಂಶಗಳು.. ದೊಡ್ಡ ದೊಡ್ಡ ತಂಡಗಳಿಗೆ ಶಾಕ್ ಮೇಲೆ ಶಾಕ್..!

Share :

Published June 11, 2024 at 9:06am

    ಕ್ರಿಕೆಟ್ ಶಿಶುಗಳ ಅಘಾತಕ್ಕೆ ಬಲಾಡ್ಯರ ಗರ್ವಭಂಗ

    ಪಾಕಿಸ್ತಾನಕ್ಕೆ ಅಮೆರಿಕಾ ಸೋಲಿನ ಮರ್ಮಾಘಾತ

    ನ್ಯೂಜಿಲೆಂಡ್​ಗೆ ಅಘಾತ ನೀಡಿದ ಅಫ್ಘಾನಿಸ್ತಾನ..!

ಈ ಬಾರಿಯ 2024ರ ಟಿ20 ವಿಶ್ವಕಪ್​ ಅಚ್ಚರಿ ಫಲಿತಾಂಶಗಳ ಮೆಗಾ ಮೇಳವಾಗಿದೆ. ಮೊನ್ನೆಯ ಪಂದ್ಯದಲ್ಲಿ ಸ್ವಲ್ಪ ಯಾಮಾರಿದ್ರೂ ಟೀಮ್​ ಇಂಡಿಯಾ ಪಾಕ್​ ವಿರುದ್ಧ ಸೋಲಿನ ಮುಖಭಂಗಕ್ಕೆ ಗುರಿಯಾಗಬೇಕಿತ್ತು. ಚುಟುಕು ವಿಶ್ವಕಪ್​ ಸಮರದಲ್ಲಿ ಟ್ವಿಸ್ಟ್​ ಅಂಡ್ ಟರ್ನ್​​ಗಳ ಭರಪೂರವೇ ಫ್ಯಾನ್ಸ್​ಗೆ ಸಿಗ್ತಿದೆ. ಬಲಿಷ್ಠ ತಂಡಗಳಿಗೆ ಕ್ರಿಕೆಟ್​ ಶಿಶುಗಳು ಶಾಕ್​ ಕೊಟ್ಟಿವೆ. ಕ್ರಿಕೆಟ್ ಶಿಶುಗಳ ಏಟಿಗೆ ಬಲಾಢ್ಯರ ಗರ್ವಭಂಗವಾಗಿದೆ.

ಪಾಕಿಸ್ತಾನಕ್ಕೆ ಅಮೆರಿಕಾ ಸೋಲಿನ ಆಘಾತ..!
ಮ್ಯಾಚ್​ ನಂಬರ್​ 11 ಪಾಕಿಸ್ತಾನ್​ ವರ್ಸಸ್​ ಅಮೆರಿಕಾ.. ಈ ಪಂದ್ಯದಲ್ಲಿ ಪಾಕ್​ ಗೆದ್ದೇ ಗೆಲ್ಲುತ್ತೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಗೆಲ್ಲೋ ಅತಿ ಉತ್ಸಾಹದಲ್ಲಿದ್ದ ಪಾಕ್​​, ಅಮೆರಿಕಾದ ಸಂಘಟಿತ ಆಟಕ್ಕೆ ಪಂಚ್ಚರ್ ಆಯ್ತು. 160 ರನ್​ಗಳ ಟಾರ್ಗೆಟ್​ ಬೆನ್ನಟ್ಟಿ ಪಂದ್ಯವನ್ನ ಟೈ ಮಾಡಿಕೊಂಡ ಅಮೆರಿಕಾ, ಸೂಪರ್​ ಓವರ್​ನಲ್ಲಿ ಸೂಪರ್ ಗೆಲುವು ದಾಖಲಿಸಿತು. ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡ ಅಮೆರಿಕಾ, ಸೂಪರ್-8 ಎಂಟ್ರಿಯ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ:ಮಗನ ಎದೆಗೆ ಚೂರಿ ಇರಿದು ಬರ್ಬರವಾಗಿ ಸಾಯಿಸಿದ ಅಪ್ಪ.. ಕಾರಣ ರಿವೀಲ್..!

ನ್ಯೂಜಿಲೆಂಡ್​ಗೆ ಆಘಾತ ನೀಡಿದ ಅಫ್ಘಾನಿಸ್ತಾನ
ನ್ಯೂಜಿಲೆಂಡ್ ವರ್ಸಸ್​ ಅಫ್ಘಾನಿಸ್ತಾನ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನ್, 20 ಓವರ್​ಗಳಲ್ಲಿ 159 ರನ್​ ಕಲೆಹಾಕಿತ್ತು. ಟಿ20 ಸ್ಪೆಷಲಿಸ್ಟ್​ಗಳ ದಂಡನ್ನೇ ಹೊಂದಿದ್ದ ಕಿವೀಸ್​​, ಸುಲಭ ಜಯದ ನಿರೀಕ್ಷೆಯಲ್ಲಿತ್ತು. ಅಫ್ಘಾನ್​​​​​ ಬೌಲರ್​ಗಳ ದಾಳಿ ಪತರಗುಟ್ಟಿದ ನ್ಯೂಜಿಲೆಂಡ್, ಜಸ್ಟ್​ 75 ರನ್​​​ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಅಫ್ಘಾನ್, ಮೊಟ್ಟ ಮೊದಲ ಗೆಲುವು ದಾಖಲಿಸಿದ ಸಾಧನೆ ಮಾಡ್ತು.

ಶ್ರೀಲಂಕಾಗೆ ಬಾಂಗ್ಲಾ ಚಮಕ್​
ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ. 2023ರ ಏಕದಿನ ವಿಶ್ವಕಪ್​ನಿಂದ ಇವರಿಬ್ಬರ ನಡುವಿನ ರೈವಲ್ರಿ ನೆಕ್ಸ್ಟ್​ ಲೆವೆಲ್​. ಇದೇ ಜಿದ್ದು ಟಿ20 ವಿಶ್ವಕಪ್​ನಲ್ಲಿ ಮುಂದುವರಿದಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಲಂಕಾ, 124 ರನ್ ಕಲೆಹಾಕಿತ್ತು. ಈ ಟಾರ್ಗೆಟ್​ ಬೆನ್ನಟ್ಟಿದ್ದ ಬಾಂಗ್ಲಾ, ಸೋಲಿನ ಸುಳಿಯಲ್ಲಿತ್ತು. ಲಿಟನ್ ದಾಸ್, ತೌಹಿದ್, ಮೊಹಮ್ಮದುಲ್ಲಾ ಜವಾಬ್ದಾರಿಯುತ ಆಟದಿಂದ ಸೋಲೋಪ್ಪಿಕೊಳ್ಳುವಂತಾಯ್ತು.

ಐರ್ಲೆಂಡ್​​ ಎದುರು ಕೆನಡಾ ಕಮಾಲ್..!
ಐರ್ಲೆಂಡ್ ವರ್ಸಸ್ ಕೆನಡಾ ನಡುವಿನ ಪಂದ್ಯ, ಕ್ರಿಕೆಟ್ ಶಿಶುಗಳ ನಡುವಿನ ಕಾದಾಟ ಎಂದೇ ಬಿಂಬಿತವಾಗಿತ್ತು. ಕೆನಡಾ ಎದುರು ಐರ್ಲೆಂಡ್ ಸುಲಭವಾಗೇ ಗೆಲ್ಲೋ ಭರವಸೆಯಲ್ಲಿತ್ತು. ಐರ್ಲೆಂಡ್ ನಿರೀಕ್ಷೆ ತಲೆಕೆಳಗಾಯ್ತು. 137 ರನ್​​​ಗಳ ಟಾರ್ಗೆಟ್ ಬೆನ್ನಟ್ಟಿದ್ದ ಐರ್ಲೆಂಡ್, ಜಸ್ಟ್​ 125 ರನ್​ ಗಳಿಸಲಷ್ಟೇ ಶಕ್ತವಾಗಿ 12 ರನ್​​ಗಳ ಸೋಲು ಒಪ್ಪಿಕೊಳ್ತು. ಇದರೊಂದಿಗೆ ಕೆನಡಾ ಟಿ20 ವಿಶ್ವಕಪ್​​ನಲ್ಲಿ ಮೊದಲ ಗೆಲುವು ದಾಖಲಿಸಿದ ಹೆಗ್ಗಳಿಕೆಗೆ ಪಾತ್ರವಾಯ್ತು.

ಇದನ್ನೂ ಓದಿ:ಕೆನಡಾ.. ಪಾಕ್​ ಆಯ್ತು.. ಈಗ ಮಿಷನ್ INDIA.. ಇದು ಟೀಂ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆ..!

ಸೂಪರ್ ಓವರ್​ನಲ್ಲಿ ನಮೀಬಿಯಾಗೆ ಗೆಲುವು
ನಮೀಬಿಯಾ ಹಾಗೂ ಒಮನ್​ ನಡುವಿನ ಪಂದ್ಯವೂ ಸೂಪರ್ ಓವರ್​ನಲ್ಲಿ ಅಂತ್ಯವಾಯ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಓಮನ್, 109 ರನ್​ ಕಲೆಹಾಕಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ್ದ ನಮೀಬಿಯಾ ಪಂದ್ಯವನ್ನ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದ್ರೆ, ಸೂಪರ್ ಓವರ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ನಮೀಬಿಯಾ, 22 ರನ್​​ಗಳ ಟಾರ್ಗೆಟ್ ನೀಡ್ತು. ಈ ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾದ ಓಮನ್, 10 ರನ್​​ ಗಳಿಸಲಷ್ಟೇ ಶಕ್ತಚಾಗಿ ಸೋಲು ಒಪ್ಪಿಕೊಳ್ತು.

ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಜಸ್ಟ್​ ಮಿಸ್..!
ಪ್ರಸಕ್ತ ವಿಶ್ವಕಪ್​ನಲ್ಲೂ ಸೌತ್ ಆಫ್ರಿಕಾ ಹಾಗೂ ವೆಸ್ಟ್​ ಇಂಡೀಸ್​​ಗೆ ಶಾಕ್ ಕಾದಿತ್ತು. ಬಹುತೇಕ ಸೋಲಿನ ಸುಳಿಯಲ್ಲಿತ್ತು. ನೆದರ್ಲೆಂಡ್ಸ್​ ಎದುರು ಡೇವಿಡ್​​ ಮಿಲ್ಲರ್ ಕಟ್ಟಿದ ಹೋರಾಟದ ಇನ್ನಿಂಗ್ಸ್​ನ ಪ್ರತಿಫಲ ಗೆಲುವಿನ ದಡ ಸೇರಿತು. ಇಲ್ಲ ನೆದರ್ಲೆಂಡ್ಸ್ ಎದುರು ಮತ್ತೊಂದು ಹೀನಾಯ ಮುಖಭಂಗಕ್ಕೆ ಗುರಿಯಾಗಬೇಕಿತ್ತು.

ಇದನ್ನೂ ಓದಿ:ಮಳೆಯೋ ಮಳೆ.. ರಾಜ್ಯದ ಈ ಜಿಲ್ಲೆಗಳಿಗೆ ರೆಡ್​​ ಅಲರ್ಟ್​.. ಎಲ್ಲೆಲ್ಲಿ ಏನೆಲ್ಲ ಆಯ್ತು..?

ಸೌತ್ ಆಫ್ರಿಕಾ ಮಾತ್ರವೇ ಅಲ್ಲ. ವೆಸ್ಟ್​ ಇಂಡೀಸ್ ಕೂಡ ಪಪುವಾ ನ್ಯೂಗಿನಿಯಾ ಎದುರು ಸೋಲಿನ ದವಡೆಯಿಂದ ತಪ್ಪಿಸಿಕೊಂಡು ಗೆಲುವಿನ ದಡ ಸೇರಿದ್ದೇ ಆಗಿದೆ. ಒಟ್ನಲ್ಲಿ.. ಪ್ರಸಕ್ತ ಟಿ20 ವಿಶ್ವಕಪ್​​ನಲ್ಲಿ ಅಚ್ಚರಿ ಫಲಿತಾಂಶಗಳು ಮೆಗಾ ಟೂರ್ನಿಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ನೀಡ್ತಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲಾ ಅಚ್ಚರಿಗಳು ಕಾದಿವೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​​ನಲ್ಲಿ ಅಚ್ಚರಿ ಫಲಿತಾಂಶಗಳು.. ದೊಡ್ಡ ದೊಡ್ಡ ತಂಡಗಳಿಗೆ ಶಾಕ್ ಮೇಲೆ ಶಾಕ್..!

https://newsfirstlive.com/wp-content/uploads/2024/06/T20-World-cup-2.jpg

Load More