/newsfirstlive-kannada/media/post_attachments/wp-content/uploads/2025/04/laxmi-nivasa2-1.jpg)
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರ ವೀಕ್ಷಕರಿಗೆ ತುಂಬಾನೇ ಹತ್ತಿರವಾಗಿದೆ. ಅದರಲ್ಲೂ ಜಯಂತ್ ಹಾಗೂ ಜಾಹ್ನವಿ ಬದುಕಿನಲ್ಲಿ ನಡೆಯುತ್ತಿರೋ ಹೊಸ ಹೊಸ ತಿರುವುಗಳು ವೀಕ್ಷಕರಲ್ಲಿ ಮತ್ತಷ್ಟೂ ಕುತೂಹಲ ಮೂಡಿಸುತ್ತಿದೆ.
ಇದನ್ನೂ ಓದಿ:ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್ಬಾಸ್ ಖ್ಯಾತಿಯ ಭವ್ಯಾ ಗೌಡ; ಯಾವ ಸೀರಿಯಲ್?
ಸೈಕೋ ಜಯಂತ್ನಿಂದ ಪಾರಾಗಲು ಚಿನ್ನುಮರಿ ಜಾನೂ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದನ್ನೂ ನೋಡಿದ ಜಯಂತ್ ಶತ ಪ್ರಯತ್ನವನ್ನು ಮಾಡಿದ್ರೂ ಜಾನು ಪತ್ತೆಯಾಗಿರಲಿಲ್ಲ. ಹೀಗೆ ಸಪ್ಪೆ ಮೋರೆ ಹಾಕಿಕೊಂಡು ಮರಳಿ ಜಾಹ್ನವಿ ಮನೆಗೆ ಆಗಮಿಸಿದ ಜಯಂತ್ನ ಮಾತು ಕೇಳಿ ಇಡೀ ಮನೆ ಶಾಕ್ಗೆ ಒಳಗಾಗಿದೆ.
ದಂಪತಿಯಾಗಿ ಶ್ರೀಲಂಕಾಗೆ ಹೋಗಿದ್ದ ಇಬ್ಬರಲ್ಲಿ ಜಾನೂ ಸಾವನ್ನಪ್ಪಿರೋ ವಿಷ್ಯ ಕೇಳಿ ಇಡೀ ಮನೆ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಆದ್ರೆ ಇದರ ಮಧ್ಯೆ ಲಕ್ಷ್ಮೀ ನಿವಾಸ ಸೀರಿಯಲ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಮುದ್ರದಲ್ಲಿ ಹಾರಿದ್ದ ಜಾಹ್ನವಿ ದಡದಲ್ಲಿ ಪತ್ತೆಯಾಗಿದ್ದಾಳೆ. ಆದ್ರೆ ಆಕೆಯನ್ನು ನೋಡುತ್ತಿದ್ದಂತೆ ಸ್ಥಳೀಯರು ಪೋಲಿಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಅಷ್ಟರಲ್ಲೇ ಎಚ್ಚರಗೊಂಡ ಜಾನೂ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.
ಪೊಲೀಸರ ಕೈಗೆ ನಾನು ಸಿಕ್ಕರೆ ಮತ್ತೆ ಜಯಂತ್ಗೆ ಕೈಯಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತೇನೆ ಅಂತ ಅಲ್ಲಿಂದ ಒಂದೇ ಸಮನೆ ಓಡಿ ಹೋಗುತ್ತಾಳೆ. ಆದರೆ ಕಾಕತಾಳೀಯ ಎಂಬಂತೆ ವಿಶ್ವನ ತಂದೆಯ ಕಾರಿನ ಡಿಕ್ಕಿ ಓಡಿ ಹೋಗಿ ಕುಳಿತುಕೊಂಡಿದ್ದಾಳೆ ಜಾಹ್ನವಿ. ಹೀಗಾಗಿ ವೀಕ್ಷಕರು ಮುಂದೆ ಜಾನೂ ಯಾರ ಮನೆ ಸೇರಲಿದ್ದಾಳೆ? ವಿಶ್ವನನ್ನೇ ಮದುವೆ ಆಗ್ತಾಳಾ? ಅಥವಾ ಮತ್ತೆ ಸೈಕೋ ಜಯಂತ್ನ ಪಾಲಾಗುತ್ತಾಳಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ