ವಿಶ್ವದಲ್ಲೇ ಟಾಪ್ 10 ಅತ್ಯಂತ ಅಸಂತುಷ್ಟ ರಾಷ್ಟ್ರಗಳು ಯಾವುವು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

author-image
Gopal Kulkarni
Updated On
ವಿಶ್ವದಲ್ಲೇ ಟಾಪ್ 10 ಅತ್ಯಂತ ಅಸಂತುಷ್ಟ ರಾಷ್ಟ್ರಗಳು ಯಾವುವು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
Advertisment
  • ವಿಶ್ವದಲ್ಲಿ ಸಂತೋಷ ಕಾಣದೇ ಬದುಕುತ್ತಿರುವ ರಾಷ್ಟ್ರಗಳು ಯಾವುವು?
  • ಆರ್ಥಿಕ ಸಂಕಷ್ಟು, ನಾಗರಿಕ ಸಂಘರ್ಷ ಈ ದೇಶಗಳನ್ನು ನುಂಗಿದ್ದು ಹೇಗೆ?
  • ಅಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಒಂದು ದೇಶ ಅಂದ್ರೆ ಅದು ಆ ದೇಶ ಪ್ರಜೆಗಳ ಸುಖ, ಸಮೃದ್ಧಿ ಸಂತೋಷ ಹಾಗೂ ಸುರಕ್ಷತಾ ಭಾವದ ಮೇಲೆ ಅದರ ಪ್ರಾಮುಖ್ಯತೆ ನಿಲ್ಲುತ್ತದೆ. ಕಾನೂನು ಸುವ್ಯವಸ್ಥೆಯಿಂದ ಹಿಡಿದು ಸುಭದ್ರ ಸರ್ಕಾರದವರೆಗೂ ಆ ದೇಶದ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ಅಂಶಗಳು. ಒಂದು ದೇಶ ಎಷ್ಟು ಖುಷಿಯಾಗಿದೆ ಅಥವಾ ಅಲ್ಲಿಯ ಜನರು ಎಷ್ಟು ಸಂತುಷ್ಟದಿಂದ ಇದ್ದಾರೆ ಎಂಬುದನ್ನು ಆ ದೇಶದ ಪರಂಪರೆ, ಸಂಸ್ಕೃತಿ ರಾಜಕೀಯ ಹಾಗೂ ವಿದೇಶಗಳಲ್ಲಿ ಆ ದೇಶದ ಬಗ್ಗೆ ಇರುವ ಅಭಿಪ್ರಾಯವು ಪ್ರತಿನಿಧಿಸುತ್ತದೆ. ಅದೇ ರೀತಿ ಅಸಂತುಷ್ಟ ರಾಷ್ಟ್ರಗಳು ಹೇಗಿವೆ ಎಂಬುದದನ್ನು ಕೂಡ ಇಂತಹುದೇ ಕೆಲವು ವಿಷಯಗಳು ಪ್ರಾಮುಖ್ಯತೆ ಪಡೆಯುತ್ತವೆ. ಈ ಜಗತ್ತಿನಲ್ಲಿ ಅತ್ಯಂತ ಅಸುಂತಷ್ಟದಿಂದ. ಸಂತೋವನ್ನ ಕಾಣದ ರಾಷ್ಟ್ರಗಳು ಯಾವುವು ಅಂತ ನೋಡುವುದಾದ್ರೆ

ಇದನ್ನೂ ಓದಿ:ಕಾಂಗ್ರೆಸ್‌ನಂತೆಯೇ ಬಿಜೆಪಿಯಿಂದಲೂ ‘ಗ್ಯಾರಂಟಿ’ ಮಾದರಿ ಯೋಜನೆಗಳ ಘೋಷಣೆ; ಏನವು?

1 ಅಪ್ಘಾನಿಸ್ತಾನ: ಒಂದು ಕಾಲದಲ್ಲಿ ಭಾರತದ ಭೂಭಾಗವೇ ಆಗಿದ್ದ ಗಾಂಧಾರ ಎಂದು ಕರೆಸಿಕೊಳ್ಳುತ್ತಿದ್ದ ಇಂದಿನ ಅಫ್ಘಾನಿಸ್ತಾನ ಜಗತ್ತಿನ ಅತ್ಯಂತ ಅಸುಂತುಷ್ಟ ರಾಷ್ಟ್ರಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಸುತ್ತಲೂ ಬೆಟ್ಟಗುಡ್ಡಗಳು, ಸುಂದರ ಪರಿಸರ ಎಲ್ಲವೂ ಇದ್ದು ಏನೂ ಇಲ್ಲದಂತೆ ಬದುಕುತ್ತಿದೆ ಈ ದೇಶ. ದಶಕಗಳ ಸಂಘರ್ಷಗಳು, ಭಯೋತ್ಪಾದನ, ವಿಪರೀತ ಮೂಲಭಭೂತವಾದ ಈ ದೇಶವನ್ನು ಈ ಸ್ಥಿತಿಗೆ ತಂದಿಟ್ಟಿದೆ.

2. ಲೆಬನಾನ್; ಇದು ಕೂಡ ಒಂದು ಅದ್ಭುತ ದೇಶ ಮೆಡಿಟೇರಿಯನ್ ಸಮುದ್ರಕ್ಕೆ ಅಂಟಿಕೊಂಡಿರುವ ಈ ದೇಶ ಹಲವಾರು ವರ್ಷಗಳಿಂದ ಕಂಡ ರಾಜಕೀಯ ಅಸ್ಥಿರತೆ, ಬಂಡಾಯ ನಿರಂತರ ಯುದ್ಧಗಳು. ಆರ್ಥಿಕ ಪರಿಸ್ಥಿತಿಯಿಂದ ಮೇಲೇಳಲಾಗದ ಕರ್ಮ ಇವೆಲ್ಲವೂ ಈ ದೇಶವನ್ನು ಹೈರಾಣು ಮಾಡಿ ಹಾಕಿವೆ.

3. ಲೆಸೆಥೋ: ಇದನ್ನು ಮೌಂಟೇನ್ ಕಿಂಗ್​ಡಮ್​ ಎಂದಲೇ ಕರೆಯುತ್ತಾರೆ. ಇಲ್ಲಿಯ ಪ್ರಕೃತಿ ಸೌಂದರ್ಯ ಹಾಗೂ ಪ್ರವಾಸಿ ತಾಣಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದ್ರೆ ಅನೇಕ ರೀತಿಯ ಆರ್ಥಿಕ ಹೊಡೆತ ಈ ದೇಶವನ್ನು ಹೈರಾಣು ಮಾಡಿ ಹಾಕಿದೆ. ಕಿತ್ತು ತಿನ್ನುವ ಬಡತನ ಈ ದೇಶದ ಜನರನ್ನು ಇಂದಿಗೂ ಕೂಡ ಅಸಂತುಷ್ಟರನ್ನಾಗಿ ಇಟ್ಟಿದೆ.

ಇದನ್ನೂ ಓದಿ:VIDEO: ಕಣ್ ಕಣ್ಣ ಸಲಿಗೆ.. ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದವಳ ಕಣ್ಣಿಗೆ ಕಳೆದು ಹೋದ ಜನರು!

4. ಸಿಯೆರಾ ಲಿಯೋನ್: ಇದು ಪಶ್ಚಿಮ ಆಫ್ರಿಕಾದ ಒಂದು ದೇಶ. ಅತ್ಯಂತ ಪ್ರಸಿದ್ಧ ಬೀಚ್​ಗಳಿಗೆನೇ ಇದು ಹೆಸರು ವಾಸಿ. ಇಲ್ಲಿಯ ನಿರಂತರ ನಾಗರಿ ಸಂಘರ್ಷ ಈ ದೇಶವನ್ನು ಅಕ್ಷರಶಃ ನುಂಗಿ ಹಾಕಿದೆ. ವಿಶ್ವದ ಅತ್ಯಂತ ಅಸಂತೋಷದಿಂದ ವಾಸಿಸುವ ಜನರು ಈ ದೇಶದಲ್ಲಿದ್ದಾರೆ. ಅಸಂತುಷ್ಟ ರಾಷ್ಟ್ರಗಳಲ್ಲಿ ಇದು 4ನೇ ಸ್ಥಾನದಲ್ಲಿದೆ

5. ಕಾಂಗೋ: ಕಾಂಗೋ ದೇಶವೂ ಕೂಡ ಉಳೀದ ದೇಶಗಳಂತೆ ನಾಗರಿಕ ಸಂಘರ್ಷ ಹಾಗೂ ಬಡತನದಿಂದಲೇ ನಲುಗಿ ಹೋಗಿದೆ. ಈ ದೇಶದ ನೈಸರ್ಗಿಕ ಸೌಂದರ್ಯವೇ ಒಂದು ಅದ್ಭುತ. ಬಹುದೊಡ್ಡ ಪ್ರವಾಸಿ ತಾಣವಾಗಿ ಮೆರೆಯಬೇಕಿದ್ದ ಈ ದೇಶ ನೂರಾರು ಸಂಘರ್ಷ ಹಾಗೂ ವಿಪರೀತ ಬಡತನದಿಂದ ಕನಲಿ ಹೋಗಿದೆ.

ಇನ್ನು 6ನೇ ಸ್ಥಾನದಲ್ಲಿ ಜಿಂಬಾಬ್ವೆ ಇದೆ. ಜಿಂಬಾಬ್ವೆಯಲ್ಲಿ ವಿಕ್ಟೋರಿಯಾ ಫಾಲ್ಸ್​ನಂತಹ ಜಗತ್ತಿನ ಅದ್ಭುತ ಜಲಪಾತವನ್ನು ಹೊಂದಿರುವ ಈ ದೇಶ ಆರ್ಥಿಕತೆಯ ಹೊಡೆತದಿಂದ ನಲುಗಿ ಹೋಗಿದೆ. ಇದರಂತೆಯೇ ಬೂಟ್ಸ್​ವ್ಯಾನ್, ಮಲಾವಿ ಈಶ್ವತಿನಿ ಮತ್ತು ಜಾಂಬಿಯಾ ದೇಶಗಳು ವಿಶ್ವದಲ್ಲಿ ಅತ್ಯಂತ ಅಸಂತುಷ್ಟ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲಿ ಗುರುತಿಸಿಕೊಂಡಿವೆ. ಇನ್ನು ನಮ್ಮ ಭಾರತ 143 ದೇಶಗಳಲ್ಲಿ 126ನೇ ಸ್ಥಾನದಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment