newsfirstkannada.com

ರೋಹಿತ್ ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಟಕ್ಕರ್.. ಹಾರ್ದಿಕ್​ ಹೆಸರು ಕೂಗ್ತಿದ್ದಂತೆ ವಿರಾಟ್ ಏನಂದ್ರು?

Share :

Published April 12, 2024 at 9:51am

    ಹಾರ್ದಿಕ್​ ಪಾಂಡ್ಯರನ್ನ ಟೀಕಿಸ್ತಿರುವ ರೋಹಿತ್ ಶರ್ಮಾ ಫ್ಯಾನ್ಸ್

    ಬೌಂಡರಿ ಲೈನ್​ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಏನಂದ್ರು?

    ಹಾರ್ದಿಕ್ ಬಗ್ಗೆ ಕರುಣೆ ತೋರಿಸಿದ ಆರ್​ಸಿಬಿಯ ಸ್ಟಾರ್ ಪ್ಲೇಯರ್

ರೋಹಿತ್ ಶರ್ಮಾ ಅಭಿಮಾನಿಗಳಿಂದ ಹಾರ್ದಿಕ್ ಪಾಂಡ್ಯರನ್ನ ಟೀಕೆ ಮಾಡುವುದು ಸ್ಟೇಡಿಯಂನಲ್ಲಿ ನಿರಂತರವಾಗಿ ನಡೆದಿದೆ. ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಪಂದ್ಯದಲ್ಲೂ ಇದು ಮತ್ತೆ ಮರುಕಳಿಸಿದೆ. ಆದರೆ ಇದಕ್ಕೆ ಒಪ್ಪದ ವಿರಾಟ್ ಕೊಹ್ಲಿ ಹಾಗೇ ಮಾಡಬೇಡಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹ ಮಾಡಿ ಎಂದು ಕೈ ಸನ್ನೆ ಮಾಡುವ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಬಂದಾಗ ಅಭಿಮಾನಿಗಳು ಹಾರ್ದಿಕ್.. ಹಾರ್ದಿಕ್ ಎಂದು ಕೂಗಲು ಆರಂಭಿಸಿದ್ದಾರೆ. ಈ ವೇಳೆ ಬೌಂಡರಿ ಲೈನ್​ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯವರು ಗ್ಯಾಲರಿಯಲ್ಲಿ ಕುಳಿತ್ತಿದ್ದ ಫ್ಯಾನ್ಸ್​ ಕಡೆ ಕೈ ಮಾಡಿ ಹಾಗೇ ಕೂಗಬೇಡಿ, ಚಪ್ಪಾಳೆ ತಟ್ಟಿ ಹಾರ್ದಿಕ್​ರನ್ನ ಪ್ರೋತ್ಸಾಹ ಮಾಡಿ. ಅವರೂ ಕೂಡ ನಮ್ಮ ಭಾರತ ತಂಡದ ಆಡಗಾರ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆ 3 ಕ್ಷೇತ್ರಗಳನ್ನ ಗೆದ್ದುಕೊಂಡು ಬರಲೇಬೇಕು.. ಕಾರಣ?

ಇದನ್ನೂ ಓದಿ: ಮುಂಗಾರುಗೆ ಮೊದಲೇ ಆರ್ಭಟಿಸ್ತಿರೋ ವರುಣ.. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ, ಸಿಡಿಲಿಗೆ ಇಬ್ಬರು ಬಲಿ 

ಇನ್ನು ವಿರಾಟ್ ಕೊಹ್ಲಿ ಹೀಗೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಅಲ್ಲದೇ ಆರ್​ಸಿಬಿ ವಿರುದ್ಧ ಒಳ್ಳೆಯ ಪ್ರದರ್ಶನ ಮಾಡಿದ ಹಾರ್ದಿಕ್ ಪಾಂಡ್ಯ ಕೇವಲ 6 ಎಸೆತದಲ್ಲಿ ಭರ್ಜರಿ 3 ಸಿಕ್ಸರ್ ಸಮೇತ 21 ರನ್​ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಮುಂಬೈ 2ನೇ ಗೆಲುವನ್ನು ಪಡೆದು ಸಂತಸ ವ್ಯಕ್ತಪಡಿಸಿದೆ. ಆರ್​ಸಿಬಿ 6 ಪಂದ್ಯದಲ್ಲಿ 1 ಅನ್ನು ಮಾತ್ರ ಗೆದ್ದು ಸಂಕಷ್ಟದಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್ ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಟಕ್ಕರ್.. ಹಾರ್ದಿಕ್​ ಹೆಸರು ಕೂಗ್ತಿದ್ದಂತೆ ವಿರಾಟ್ ಏನಂದ್ರು?

https://newsfirstlive.com/wp-content/uploads/2024/04/VIRAT_KOHLI_HARDHK.jpg

Load More