/newsfirstlive-kannada/media/post_attachments/wp-content/uploads/2024/12/JOBS_BO_BANK.jpg)
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 1961ರ ಕಾಯ್ದೆ ಪ್ರಕಾರ ಅಪ್ರೆಂಟೀಸ್ ಉದ್ಯೋಗಗಳನ್ನು ಆಹ್ವಾನ ಮಾಡಿದೆ. ಬ್ಯಾಂಕ್​ನಿಂದಲೇ ಬದುಕು ಆರಂಭಿಸಬೇಕು ಎನ್ನುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಅಂತಿಮ ಗಡುವು ಈಗಾಗಲೇ ಮುಗಿದಿದೆ. ಆದರೆ ಇದೀಗ ಬ್ಯಾಂಕ್ ದಿನಾಂಕವನ್ನು ವಿಸ್ತರಣೆ ಮಾಡಿದೆ.
ಮಾರ್ಚ್ 12ರ ವರೆಗೆ ದಿನಾಂಕವನ್ನು ಬ್ಯಾಂಕ್ ವಿಸ್ತರಣೆ ಮಾಡಿದ್ದು ಅರ್ಜಿ ಸಲ್ಲಿಕೆ ಮಾಡದೇ ಇರುವ ಅಭ್ಯರ್ಥಿಗಳು ಕೂಡಲೇ ಅಪ್ಲೇ ಮಾಡಬಹುದು. ಆನ್​ಲೈನ್ ಮೂಲಕ​ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಸತಿ ಬದಲಿಗೆ ಸ್ಟೇಫಂಡ್ ನೀಡುತ್ತದೆ.
ಇದನ್ನೂ ಓದಿ: CDSCO; ಉದ್ಯೋಗದಲ್ಲಿ ಅನುಭವ ಇರುವವರಿಗೆ ಇಲ್ಲಿದೆ ಕೆಲಸ.. ಆರಂಭದಲ್ಲೇ ಸಂಬಳ 67,700 ರೂ
/newsfirstlive-kannada/media/post_attachments/wp-content/uploads/2024/12/JOBS_CWC_1.jpg)
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಜೊತೆಗೆ ಸ್ಟೇಫಂಡ್ ನೀಡುತ್ತದೆ. ಇದು ಹೊಸದಾಗಿ ಕೆಲಸಕ್ಕೆ ಸೇರುವ ಅಭ್ಯರ್ಥಿಗಳಿಗೆ ಉತ್ತಮವಾದ ಅವಕಾಶವಾಗಿದೆ. ಹೀಗಾಗಿ ಪದವಿ ಮುಗಿಸಿದ ಪ್ರತಿ ಅಭ್ಯರ್ಥಿಗಳು ಈ ಉದ್ಯೋಗಕ್ಕೆ ಪ್ರಯತ್ನ ಮಾಡಬಹುದು. ಇನ್ನೊಂದು ವಿಶೇಷ ಎಂದರೆ 2 ಸಾವಿರಕ್ಕೂ ಅಧಿಕ ಉದ್ಯೋಗಗಳಲ್ಲಿ ಕರ್ನಾಟಕಕ್ಕೂ 305 ಉದ್ಯೋಗಗಳು ಮೀಸಲಿವೆ. ಕನ್ನಡಿಗರಿಗೂ ಅವಕಾಶ ಇದೆ.
ಇನ್ನು ಈ ಕೆಲಸಗಳಿಗೆ ಸಂಬಂಧಿಸಿದ ಅರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಆಯ್ಕೆಯ ಮಾಡನದಂಡಗಳು, ಪ್ರಮುಖ ದಿನಾಂಕ, ಅರ್ಜಿ ಪ್ರಕ್ರಿಯೆಯ, ಪರೀಕ್ಷೆಗಳ ಬಗ್ಗೆ ಮಾಹಿತಿ ಸಂಪೂರ್ಣವಾಗಿ ಇಲ್ಲಿ ವಿವರಿಸಲಾಗಿದೆ. ಆಸಕ್ತರು ಒಮ್ಮೆ ಈ ಲಿಂಕ್​ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ- ಮಾರ್ಚ್​- 12
ನ್ಯೂಸ್​ಫಸ್ಟ್​ ಲಿಂಕ್- https://newsfirstlive.com/union-bank-of-india-apprentice-recruitment-2025-notification-out/
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us