/newsfirstlive-kannada/media/post_attachments/wp-content/uploads/2025/05/JOB_BANK.jpg)
ಭಾರತದ ಪ್ರಮುಖ ಸಾರ್ವಜನಿಕ ಬ್ಯಾಂಕುಗಳಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಕೂಡ ಒಂದಾಗಿದೆ. ಇದೀಗ ಈ ಬ್ಯಾಂಕ್​ನಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಆನ್​ಲೈನ್​​ ಮೂಲಕ ಮಾತ್ರ ಉದ್ಯೋಗಾಕಾಂಕ್ಷಿಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.
ಈ ಉದ್ಯೋಗಗಳಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಬ್ಯಾಂಕ್ ತನ್ನ ವೆಬ್​ಸೈಟ್​ನಲ್ಲಿ ಬಿಡುಗಡೆ ಮಾಡಿದೆ. ಇವು ಯಾವ ಹುದ್ದೆಗಳು, ಎಷ್ಟು ಕೆಲಸಗಳು ಖಾಲಿ ಇವೆ, ಅರ್ಜಿ ಶುಲ್ಕ ಎಷ್ಟು, ಶೈಕ್ಷಣಿಕ ಅರ್ಹತೆ, ಯಾವ ವಯಸ್ಸಿನವರು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಇತ್ಯಾದಿ ಎಲ್ಲ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರವಿದೆ. ಗಮನಿಸಿ.
ಉದ್ಯೋಗದ ಹೆಸರು-
ತಜ್ಞ ಅಧಿಕಾರಿ (Specialist Officer)
ಸಹಾಯಕ ವ್ಯವಸ್ಥಾಪಕ (IT)- 250
ಸಹಾಯಕ ವ್ಯವಸ್ಥಾಪಕ (Credit Officer)- 250
ಒಟ್ಟು ಉದ್ಯೋಗಗಳು- 500
ಮಾಸಿಕ ವೇತನ ಎಷ್ಟು?
48,480 ರೂಪಾಯಿಗಳು
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು- 1,180 ರೂ.
ಎಸ್​​ಸಿ, ಎಸ್​​​​ಟಿ ಅಭ್ಯರ್ಥಿಗಳು- 177 ರೂ.
ವಿದ್ಯಾರ್ಹತೆ
ಬಿಇ, ಬಿಟೆಕ್​, ಎಂಸಿಎ, ಎಂಎಸ್​​ಸಿ, ಎಂಎಸ್, ಎಂಟೆಕ್, ಸಿಎ, ಸಿಎಂಎ, ಸಿಎಸ್, ಎಂಬಿಎ, ಎಂಎಂಎಸ್, ಪಿಜಿಡಿಎಂ, ಪಿಜಿಡಿಬಿಎಂ,
ವಯಸ್ಸಿನ ಮಿತಿ?
22 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶ
ವಯೋಮಿತಿ ಸಡಿಲಿಕೆ ಎಲ್ಲ ವರ್ಗಕ್ಕೂ ಇದೆ
ಆಯ್ಕೆ ಪ್ರಕ್ರಿಯೆ ಹೇಗಿದೆ?
ಆನ್​ಲೈನ್ ಪರೀಕ್ಷೆ
ಗುಂಪು ಚರ್ಚೆ ಅಥವಾ ವೈಯಕ್ತಿಕ ಸಂದರ್ಶನ
ಪ್ರಮುಖವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20 ಮೇ 2025
ಅರ್ಜಿ ಸಲ್ಲಿಕೆಗೆ- https://ibpsonline.ibps.in/ubisoapr25/index.php
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ