Advertisment

1,000ಕ್ಕೂ ಹೆಚ್ಚು ಉದ್ಯೋಗಗಳ ನೇಮಕಾತಿ.. ಕರ್ನಾಟಕದ ಬ್ರ್ಯಾಂಚ್​ಗಳಲ್ಲೂ 300 ಹುದ್ದೆಗಳು

author-image
Bheemappa
Updated On
ESIC ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ.. ಸ್ಯಾಲರಿ ಮಾತ್ರ ಲಕ್ಷ ಲಕ್ಷ ರೂಪಾಯಿ
Advertisment
  • ಅ. 23ರಂದು ನೋಟಿಫಿಕೇಶನ್ ಅನ್ನು ರಿಲೀಸ್ ಮಾಡಲಾಗಿದೆ
  • ಈ ಹುದ್ದೆಯ ಹೆಸರೇನು, ಒಟ್ಟು ಎಷ್ಟು ಉದ್ಯೋಗಗಳು ಖಾಲಿ ಇವೆ
  • ಆನ್‌ಲೈನ್ ನೋಂದಣಿ, ಕೊನೆ ದಿನಾಂಕ ಇತ್ಯಾದಿ ಮಾಹಿತಿ ಇಲ್ಲಿದೆ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ನೇಮಕಾತಿ ಮಾಡುತ್ತಿದೆ. ಈ ಸಂಬಂಧ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದ್ದು ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಅಕ್ಟೋಬರ್ 23 ರಂದು ಬ್ಯಾಂಕ್ ನೋಟಿಫಿಕೇಶನ್ ಅನ್ನು ರಿಲೀಸ್ ಮಾಡಿ ಎಲ್ಲ ಮಾಹಿತಿ ನೀಡಿತ್ತು. ಆದರೆ ಇದೀಗ ಅಧಿಕೃತವಾಗಿ ಉದ್ಯೋಗಗಳನ್ನ ತುಂಬಲು ಅರ್ಜಿಗಳನ್ನು ಆಹ್ವಾನ ಮಾಡಿದೆ.

Advertisment

ಇದನ್ನೂ ಓದಿ: ಸ್ಪೋರ್ಟ್ಸ್​ ಕೋಟಾದಡಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಹುಬ್ಬಳ್ಳಿ, ಮೈಸೂರು, ಬೆಂಗಳೂರಲ್ಲಿ ಕೆಲಸ

ಕರ್ನಾಟಕದಲ್ಲೂ ಯುಬಿಐ ಬ್ರ್ಯಾಂಚ್​ಗಳಿದ್ದು ಇಲ್ಲಿಯು ಹುದ್ದೆಗಳನ್ನು ತುಂಬಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 300 ಉದ್ಯೋಗಗಳು ಖಾಲಿ ಇವೆ. ಇವುಗಳಲ್ಲಿ ಎಸ್​ಸಿ 45, ಎಸ್​ಟಿ 22, ಒಬಿಸಿ 81, ಎಡಬ್ಲುಎಸ್​ 30, ಯುಆರ್ 122 ಉದ್ಯೋಗಗಳು ಮೀಸಲಿವೆ.

ದೇಶದ ವಿವಿಧ ಭಾಗಗಳಲ್ಲಿರುವ ಯುಬಿಐ ಬ್ರ್ಯಾಂಚ್​ಗಳಿದ್ದು ಅಲ್ಲಿರುವಂತ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆ ಇದಾಗಿದ್ದು ಆನ್​​ಲೈನ್​ ಅಪ್ಲಿಕೇಶನ್ ಪ್ರಕ್ರಿಯೆ ಆರಂಭಿಸಿದೆ. ಆನ್‌ಲೈನ್ ನೋಂದಣಿ, ಕೊನೆ ದಿನಾಂಕ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಯಾವ ರೀತಿ ನಡೆಯುತ್ತದೆ, ಸಂಬಳ, ಅರ್ಜಿ ಶುಲ್ಕ ಇತ್ಯಾದಿಗಳನ್ನು ಈ ಕೆಳಗೆ ವಿವರಿಸಲಾಗಿದೆ.

Advertisment

ತಿಂಗಳ ಸ್ಯಾಲರಿ- 48,480 ರೂ.ಗಳು

ಹುದ್ದೆಯ ಹೆಸರು ಏನು?

ಲೋಕಲ್ ಬ್ಯಾಂಕ್ ಆಫೀಸರ್ (ಎಲ್​ಬಿಒ)

ಇದನ್ನೂ ಓದಿ:ಓದಲು ಹೋಗಿ ಪ್ರೀತಿ ಬಲೆಗೆ ಬಿದ್ದ ಯುವಕ.. ಭಾರತೀಯ ಸಂಪ್ರದಾಯದಂತೆ ಫಾರಿನ್​ ಗರ್ಲ್​ ಜೊತೆ ಮದುವೆ

publive-image

ಒಟ್ಟು ಹುದ್ದೆಗಳು

  • ಎಸ್​ಸಿ- 224
  • ಎಸ್​​​ಟಿ- 109
  • ಒಬಿಸಿ- 404
  • ಇಡಬ್ಲುಎಸ್- 150
  • ಯುಆರ್- 613

ಒಟ್ಟು ಹುದ್ದೆಗಳು- 1,500

ವಿದ್ಯಾರ್ಹತೆ- ಯಾವುದಾದರೂ ಪದವಿ ಪೂರ್ಣಗೊಳಿಸಿರಬೇಕು

ವಯಸ್ಸಿನ ಮಿತಿ- 20 ವರ್ಷದಿಂದ 30

ಅರ್ಜಿ ಶುಲ್ಕ ಎಷ್ಟಿದೆ..?

  • ಜನರಲ್​, ಇಡಬ್ಲುಎಸ್, ಒಬಿಸಿ- 850 ರೂ.ಗಳು
  • ಎಸ್​ಸಿ, ಎಸ್​​​ಟಿ, ವಿಶೇಷ ಚೇತನರು- 175 ರೂ.ಗಳು

ಹೇಗೆ ಆಯ್ಕೆ ಮಾಡಲಾಗುತ್ತದೆ?

  • ಲಿಖಿತ ಪರೀಕ್ಷೆ (ಆನ್​ಲೈನ್)
  • ಗ್ರೂಪ್ ಡಿಸ್ಕಷನ್
  • ಸಂದರ್ಶನ
  • ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್​​​ಪಿಟಿ)
  • ದಾಖಲಾತಿ ಪರಿಶೀಲನೆ
Advertisment

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- ನವೆಂಬರ್- 13

ನವೆಂಬರ್ 28ರ ಒಳಗೆ ಅರ್ಜಿ ಪ್ರಿಂಟ್ ತೆಗೆದುಕೊಳ್ಳಬೇಕು

ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್- https://ibpsonline.ibps.in/ubilbooct24/

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment