ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಗಳಿಗೆ ಆಹ್ವಾನ.. 2,691 ಹುದ್ದೆಗಳು

author-image
Bheemappa
Updated On
ಕೇಂದ್ರ ಸರ್ಕಾರದಿಂದ ಮಹತ್ವದ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅಬ್ಬಬ್ಬಾ! ಸಂಬಳ ಮಾತ್ರ ₹1.52 ಲಕ್ಷದಿಂದ ₹2.7 ಲಕ್ಷ
Advertisment
  • ಬ್ಯಾಂಕ್​ನಿಂದಲೇ ನಿಮ್ಮ ವೃತ್ತಿ ಜೀವನ ಆರಂಭಿಸಲು ಇದು ಚಾನ್ಸ್
  • ಈ ಕೋರ್ಸ್ ಮಾಡಿದವರೂ ಯಾರು ಬೇಕಾದರು ಇದಕ್ಕೆ ಅರ್ಹರು
  • ರಾಜ್ಯಕ್ಕೆ ಕೆಲಸಗಳನ್ನು ಮೀಸಲು ಇಟ್ಟಿರುವ ಯೂನಿಯನ್ ಬ್ಯಾಂಕ್

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಗಳಿಗಾಗಿ ಆನ್​ಲೈನ್​ ಅರ್ಜಿ ಆಹ್ವಾನ ಮಾಡಿದೆ. ಅಭ್ಯರ್ಥಿಗಳು ತಮ್ಮ ವೃತ್ತಿಯನ್ನು ಬ್ಯಾಂಕ್​ನಿಂದಲೇ ಆರಂಭಿಸಬೇಕು ಎಂದುಕೊಂಡಿದ್ದರೇ ಈ ಕೆಲಸಗಳಿಗೆ ಅಪ್ಲೇ ಮಾಡಬಹುದು. ಅಲ್ಲದೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉತ್ತಮ ಮಟ್ಟದ ಸಂಬಳ ಕೊಡುತ್ತದೆ. ಈ ಬ್ಯಾಂಕ್​ನಲ್ಲಿ ಅನುಭವ ಪಡೆದರೆ ಮುಂದಿನ ನಿಮ್ಮ ವೃತ್ತಿ ಜೀವನಕ್ಕೆ ಅನುಕೂಲವಾಗುತ್ತದೆ.

1961ರ ಕಾಯ್ದೆ ಪ್ರಕಾರ ಅಪ್ರೆಂಟೀಸ್ ಉದ್ಯೋಗಗಳನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆಹ್ವಾನ ಮಾಡಿದೆ. ಇದರಲ್ಲಿ ಹೊಸ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತದೆ. 2 ಸಾವಿರಕ್ಕೂ ಅಧಿಕ ಉದ್ಯೋಗಗಳಿದ್ದು ಇದರಲ್ಲಿ ಕರ್ನಾಟಕಕ್ಕೂ 305 ಉದ್ಯೋಗಗಳು ಇರುವುದು ವಿಶೇಷ. ಈ ಕೆಲಸಗಳಿಗೆ ಕನ್ನಡಿಗರು ಪ್ರಯತ್ನಿಸಬಹುದು.

ಇನ್ನು ಈ ಕೆಲಸಗಳಿಗೆ ಸಂಬಂಧಿಸಿದ ಅರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಆಯ್ಕೆಯ ಮಾಡನದಂಡಗಳು, ಪ್ರಮುಖ ದಿನಾಂಕ, ಅರ್ಜಿ ಪ್ರಕ್ರಿಯೆಯ, ಪರೀಕ್ಷೆಗಳ ಬಗ್ಗೆ ಮಾಹಿತಿ ಸಂಪೂರ್ಣವಾಗಿ ಇಲ್ಲಿ ವಿವರಿಸಲಾಗಿದೆ. ಆಸಕ್ತರು ಒಮ್ಮೆ ಗಮನಿಸಿ.

ಉದ್ಯೋಗದ ಹೆಸರು- ಅಪ್ರೆಂಟೀಸ್

ಒಟ್ಟು ಉದ್ಯೋಗಗಳು- 2,691 (ಆಯಾಯ ರಾಜ್ಯಗಳಿಗೆ ಉದ್ಯೋಗ ವಿಂಗಡಣೆ ಮಾಡಲಾಗಿದೆ)

ಕರ್ನಾಟಕಕ್ಕೆ ಇರುವ ಹುದ್ದೆಗಳು- 305

ಇದನ್ನೂ ಓದಿ:ಕರ್ನಾಟಕ ಹೈಕೋರ್ಟ್​ ಇಂದ ಮಹತ್ವದ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಆಯ್ಕೆ ಪ್ರಕ್ರಿಯೆ ಹೇಗಿದೆ?

publive-image

ಶೈಕ್ಷಣಿಕ ಅರ್ಹತೆ- ಯಾವುದೇ ಪದವಿ

ಮಾಸಿಕ ವೇತನ ಶ್ರೇಣಿ- 15,000 ರೂ.

ವಯಸ್ಸಿನ ಮಿತಿ ಎಷ್ಟು?
20 ರಿಂದ 28 ವರ್ಷದ ಒಳಗಿನ ಅಭ್ಯರ್ಥಿಗಳು
ಎಲ್ಲ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇದೆ

ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ?

  • ಆನ್‌ಲೈನ್ ಪರೀಕ್ಷೆ,
  • ಸ್ಥಳೀಯ ಭಾಷಾ ಪರೀಕ್ಷೆ,
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ ಎಷ್ಟು ಇರುತ್ತದೆ?

  • ಎಸ್​ಸಿ. ಎಸ್​​ಟಿ, ಮಹಿಳೆ- 600 ರೂಪಾಯಿ
  • ವಿಶೇಷ ಚೇತನರು- 400 ರೂಪಾಯಿ
  • ಜನರಲ್, ಒಬಿಸಿ, ಇತರೆ ಅಭ್ಯರ್ಥಿಗಳು- 800 ರೂ

ಪ್ರಮುಖ ದಿನಾಂಕಗಳು
ಅರ್ಜಿ ಆರಂಭದ ದಿನಾಂಕ- 19 ಫೆಬ್ರುವರಿ 2025
ಅರ್ಜಿ ಕೊನೆಯ ದಿನಾಂಕ- 5 ಮಾರ್ಚ್ 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment