ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!

author-image
Bheemappa
Updated On
SSLC, PUC ಆದವರಿಗೆ ಯುಸಿಐಎಲ್​​ನಲ್ಲಿ ಉದ್ಯೋಗ ಅವಕಾಶ.. ಈ ತಿಂಗಳ ಒಳಗೆ ಅರ್ಜಿ ಸಲ್ಲಿಸಿ
Advertisment
  • ಕೊನೆ ದಿನಾಂಕ, ಅರ್ಹತಾ ಮಾನದಂಡಗಳ ಮಾಹಿತಿ ಇಲ್ಲಿವೆ
  • ದೇಶದ್ಯಾಂತ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿರುವ ಬ್ಯಾಂಕ್
  • ಕರ್ನಾಟಕದಲ್ಲೂ ಉದ್ಯೋಗಗಳು ಖಾಲಿ ಇವೆ, ಅರ್ಜಿ ಸಲ್ಲಿಸಿ

ದೇಶದ ವಿವಿಧ ಭಾಗಗಳಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಬ್ರ್ಯಾಂಚ್​ಗಳಲ್ಲಿ ಇರುವಂತ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಆನ್​​ಲೈನ್ ಮೂಲಕ​ ಅಪ್ಲಿಕೇಶನ್ ಅನ್ನು ಆಹ್ವಾನ ಮಾಡಲಾಗಿದೆ. ಕರ್ನಾಟಕದಲ್ಲೂ ಈ ಬ್ಯಾಂಕ್​ನ ಬ್ರ್ಯಾಂಚ್​ಗಳಿದ್ದು ಇಲ್ಲಿಯು ಉದ್ಯೋಗಗಳು ಖಾಲಿ ಇವೆ. ಹೀಗಾಗಿ ಕರ್ನಾಟಕದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

ವಿವಿಧ ಪ್ರದೇಶ ಬಿಟ್ಟು ಕರ್ನಾಕದಲ್ಲಿ ಮಾತ್ರ 300 ಉದ್ಯೋಗಗಳು ಖಾಲಿ ಇವೆ. ಎಸ್​ಸಿ 45, ಎಸ್​ಟಿ 22, ಒಬಿಸಿ 81, ಎಡಬ್ಲುಎಸ್​ 30, ಯುಆರ್ 122 ಉದ್ಯೋಗಗಳು ಮೀಸಲು ಇವೆ. ಅ.23 ರಂದು ಬ್ಯಾಂಕ್ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಆನ್‌ಲೈನ್ ನೋಂದಣಿ, ಕೊನೆ ದಿನಾಂಕ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಹೇಗೆಲ್ಲಾ ಇರಲಿದೆ ಎಂಬುದು ಇಲ್ಲಿದೆ.

ಉದ್ಯೋಗದ ಹೆಸರು ಹಾಗೂ ಎಷ್ಟು ಇವೆ?

ಲೋಕಲ್ ಬ್ಯಾಂಕ್ ಆಫೀಸರ್ (ಎಲ್​ಬಿಒ)
ಒಟ್ಟು ಹುದ್ದೆಗಳು- 1,500

ಅರ್ಜಿಗೆ ಪಾವತಿಸಬೇಕಾದ ಶುಲ್ಕ?

ಜನರಲ್​, ಇಡಬ್ಲುಎಸ್, ಒಬಿಸಿ- 850 ರೂ.ಗಳು
ಎಸ್​ಸಿ, ಎಸ್​​​ಟಿ, ಅಂಗ ವಿಕಲರು- 175 ರೂ.ಗಳು

ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಭಾಗದವರಿಗೆ ಉದ್ಯೋಗಾವಕಾಶ.. ಅರ್ಜಿ ಆಹ್ವಾನಿಸಿದ ಕರ್ನಾಟಕ ಲೋಕಾಯುಕ್ತ

publive-image

ವಯೋಮಿತಿ- 20- 30 ವರ್ಷ

ಶೈಕ್ಷಣಿಕ ಅರ್ಹತೆ ಏನು ಕೇಳಿದ್ದಾರೆ?

ಯಾವುದೇ ವಿಷಯದಲ್ಲಿ ಪದವಿ

ಹೇಗೆ ಆಯ್ಕೆ ಮಾಡಲಾಗುತ್ತದೆ?

  • ಲಿಖಿತ ಪರೀಕ್ಷೆ (ಆನ್​ಲೈನ್)
  • ಗುಂಪು ಚರ್ಚೆ
  • ಇಂಟರ್​ವ್ಯೂವ್
  • ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್​​​ಪಿಟಿ)
  • ದಾಖಲಾತಿ ಪರಿಶೀಲನೆ

ಪ್ರಮುಖ ದಿನಾಂಕ-
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 13 ನವೆಂಬರ್ 2024
ನ. 28ರ ಒಳಗೆ ಅರ್ಜಿ ಪ್ರಿಂಟ್ ತೆಗೆದುಕೊಳ್ಳಬೇಕು
ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್-https://ibpsonline.ibps.in/ubilbooct24/

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment