ಮೋದಿ 3.0 ಮೊದಲ ಬಜೆಟ್​ಗೆ ದಿನಗಣನೆ: ನಿರ್ಮಲಾ ಆಯವ್ಯಯದ ಮೇಲೆ ನಿರೀಕ್ಷೆಗಳ ಮಹಾಪೂರ: ಶ್ರೀಸಾಮಾನ್ಯ ಏನೆಲ್ಲಾ ಬಯಸುತ್ತಿದ್ದಾನೆ..?

author-image
Ganesh
Updated On
ಮೋದಿ 3.0 ಮೊದಲ ಬಜೆಟ್​ಗೆ ದಿನಗಣನೆ: ನಿರ್ಮಲಾ ಆಯವ್ಯಯದ ಮೇಲೆ ನಿರೀಕ್ಷೆಗಳ ಮಹಾಪೂರ: ಶ್ರೀಸಾಮಾನ್ಯ ಏನೆಲ್ಲಾ ಬಯಸುತ್ತಿದ್ದಾನೆ..?
Advertisment
  • ಮೋದಿ 3.O ಮೊದಲ ಬಜೆಟ್​ ಮೇಳೆ ನಿರೀಕ್ಷೆಗಳ ಮಹಾಪೂರ
  • ಈ ಬಾರಿ ಬಜೆಟ್​ನಲ್ಲಿ ಯಾರಿಗೆ ಸಿಹಿ, ಯಾರಿಗೆ ಕಹಿ ದಕ್ಕಲಿದೆ?
  • ತೆರಿಗೆದಾರರಿಗೆ ರಿಲೀಫ್? ಕೃಷಿ, ಉತ್ಪಾದನಾ ವಲಯಕ್ಕೆ ಬಂಪರ್?​

ನವದೆಹಲಿ: ಮೋದಿ ಸರ್ಕಾರದ ನೂತನ ಬಜೆಟ್​ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಇದೇ ವರ್ಷ ಫೆಬ್ರುವರಿ 1 ರಂದು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜುಲೈ 23 ರಂದು, ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ 7ನೇ ಬಜೆಟ್ ಆಗಿದ್ದು ನಿರೀಕ್ಷೆಗಳ ಮಹಾಪೂರವೇ ಬಜೆಟ್ ಮೇಲಿದೆ. ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಹಾಗೂ ಪ್ಯಾಲಸ್ತೇನ್ ಇತ್ತ ಯುರೋಪ್​ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಜಾರಿಯಲ್ಲಿದೆ. ಇಂತಹ ಯುದ್ಧ ಸಂದರ್ಭದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ದೊಡ್ಡ ಸವಾಲುಗಳು ಸದ್ಯ ಮೋದಿ ಸರ್ಕಾರದ ಮುಂದಿದೆ. ಈ ಬಾರಿ ಮೋದಿ ಸರ್ಕಾರ ಸ್ವಂತ ಬಲದಿಂದಲೇ ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾಬಲವನ್ನು ಈ ಬಾರಿಯ ಚುನಾವಾಣೆಯಲ್ಲಿ ಪಡೆಯದ ಕಾರಣ ಮಿತ್ರಪಕ್ಷಗಳೊಂದಿಗೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಿದೆ. ಹೀಗಾಗಿ ಮಿತ್ರಪಕ್ಷಗಳು ಕೂಡ ಹಲವು ಬೇಡಿಕೆಗಳನ್ನು ಮೋದಿ ಸರ್ಕಾರದ ಮುಂದಿಡಬಹುದು. ತಮ್ಮ ರಾಜ್ಯಕ್ಕಾಗಿ ವಿಶೇಷ ಪ್ಯಾಕೇಜ್​ಗೆ ಡಿಮ್ಯಾಂಡ್ ಮಾಡಬಹುದು. ಈ ಎಲ್ಲಾ ಸವಾಲುಗಳ ನಡುವೆ ಮೋದಿ ಸರ್ಕಾರದ ಈ ಬಾರಿಯ ಪೂರ್ಣಪ್ರಮಾಣದ ಬಜೆಟ್​ ಮೇಲೆ ಶ್ರೀಸಾಮಾನ್ಯರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ತೆರಿಗೆ ವಿನಾಯಿತಿಯಲ್ಲಿ ಬದಲವಾಣೆ ಬಯಸುತ್ತಿರುವ ಮಧ್ಯಮ ವರ್ಗದ ಕುಟುಂಬಗಳು

publive-image

ಬಜೆಟ್ ಅಂದ ತಕ್ಷಣ ಮಧ್ಯಮ ವರ್ಗದ ಜನರು ಆದಾಯ ತೆರಿಗೆಯಲ್ಲಿ ಈ ಬಾರಿ ಏನಾದರೂ ಬದಲಾಗಲಿದೆ ಅನ್ನೋ ನಿರೀಕ್ಷೆಯನ್ನೇ ಇಟ್ಟುಕೊಂಡಿರುತ್ತಾರೆ. ಕಳೆದ ಹಲವು ವರ್ಷಗಳಿಂದ ಮೋದಿ ಸರ್ಕಾರ ಆದಾಯ ತೆರಿಗೆಯಲ್ಲಿ ಅಂತಹ ಮಹತ್ತರ ಬದಲಾವಣೆಯನ್ನೇನು ಮಾಡಿಲ್ಲ. ಈ ಬಾರಿ ಶ್ರೀಸಾಮಾನ್ಯ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾನೆ. ಕಳೆದ ಕೆಲವು ವರ್ಷಗಳಿಂದ ಬೆಲೆ ಏರಿಕೆ ಅನ್ನೋದು ಮಧ್ಯಮ ವರ್ಗದ ಕುಟುಂಬಗಳನ್ನು ಹೈರಾಣು ಮಾಡಿ ಹಾಕಿದೆ. ಹೀಗಾಗಿ ಈ ಬಾರಿ ಆದಾಯ ತೆರಿಗೆಯ ಮಿತಿಯಲ್ಲಿ ಭಾರೀ ಬದಲಾವಣೆ ಆಗಬಹುದು ಎಂದು ನಿರೀಕ್ಷೆ ದುಪ್ಪಟ್ಟು ಇದೆ.

ಸದ್ಯ ವಾರ್ಷಿಕ 3 ಲಕ್ಷದವರೆಗೆ ಆದಾಯವಿರುವವರು ಸರ್ಕಾರಕ್ಕೆ ಯಾವುದೇ ಟ್ಯಾಕ್ಸ್ ಕಟ್ಟಬೇಕಿಲ್ಲ. ವಾರ್ಷಿಕ ₹3 ಲಕ್ಷದ ಮೇಲೆ ಹಾಗೂ ₹6 ಲಕ್ಷದವರೆಗೆ ಆದಾಯ ಇರುವವರು ಶೇಕಡಾ 5 ರಷ್ಟು ತೆರಿಗೆ ಕಟ್ಟಬೇಕು, ₹6 ಲಕ್ಷದ ಮೇಲೆ ಹಾಗೂ ₹9 ಲಕ್ಷದ ವರೆಗೆ ಆದಾಯ ಇರುವವರು ಶೇ. ₹10 ರಷ್ಟು, ₹9 ಲಕ್ಷದ ಮೇಲೆ ಹಾಗೂ ₹12 ಲಕ್ಷದವರೆಗೆ ಆದಾಯ ಇರುವವರು ಶೇ.15ರಷ್ಟು ಆದಾಯ ತೆರಿಗೆ ಸರ್ಕಾರಕ್ಕೆ ಸಲ್ಲಿಸಬೇಕು. ₹12 ಲಕ್ಷದ ಮೇಲೆ ಹಾಗೂ ₹15 ಲಕ್ಷದವರೆಗೆ ಆದಾಯ ಇರುವವರು ಶೇ.20 ರಷ್ಟು ಹಾಗೂ ₹15 ಲಕ್ಷದ ಮೇಲೆ ಆದಾಯ ಇರುವವರೆಲ್ಲಾ ಸುಮಾರು ಶೇ.30ರಷ್ಟು ತೆರಿಗೆ ಭರಿಸಬೇಕಾಗುತ್ತದೆ.

ಈ ಆದಾಯ ತೆರಿಗೆಯ ಮಿತಿಯನ್ನು ಈ ಬಾರಿ ಏರಿಸುವ ನಿರೀಕ್ಷೆಯಲ್ಲಿ ಭಾರತೀಯರು ಇದ್ದಾರೆ. ಸದ್ಯ ಸಂಪೂರ್ಣ ತೆರಿಗೆ ವಿನಾಯಿತಿ ಮಿತಿಯನ್ನು ₹3 ಲಕ್ಷದಿಂದ ₹5 ಇಲ್ಲವೇ ₹7 ಲಕ್ಷಕ್ಕೆ ಏರಿಸಬೇಕು ಎನ್ನುವ ಅಪೇಕ್ಷೆ ಸದ್ಯ ಶ್ರೀಸಾಮಾನ್ಯರದ್ದು. ಅದರಲ್ಲೂ ಸಂಬಳದಾರರು ಸೆಕ್ಷನ್ 80 ಸಿಯಲ್ಲಿ ಸಾಕಷ್ಟು ಪರಿಷ್ಕರಣೆ ಆಗಬೇಕು ಅನ್ನುವ ಅಪೇಕ್ಷೆ ಬಹಳ ವರ್ಷದ್ದು. 80ಸಿಯಲ್ಲಿ ಆಗುವ ತೆರಿಗೆ ಕಡಿತದ ಮಿತಿಯನ್ನು ಮತ್ತಷ್ಟು ವಿಸ್ತರಿಸಬೇಕು. ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತದ ಮಿತಿ 2014-15 ರಲ್ಲಿಯೇ ಕೊನೆಯದಾಗಿ ಬದಲಾವಣೆಯಾಗಿದ್ದು. ಅಲ್ಲಿಂದ ಇಲ್ಲಿಯವರೆಗೂ ತೆರಿಗೆಯಲ್ಲಿ ಯಾವುದೇ ರೀತಿಯ ವಿಸ್ತರಣೆ ಆಗಿಲ್ಲ. ಹೀಗಾಗಿ ಈ ಬಾರಿ 80ಸಿ ಅಡಿಯಲ್ಲಿ ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಯಲ್ಲಿ ಮಧ್ಯಮವರ್ಗದ ಕುಟುಂಬಗಳು ಇವೆ.

ಸ್ಯಾಲರಿ ಕ್ಲಾಸ್​ನವರ ಮತ್ತೊಂದು ಬೇಡಿಕೆ ಅಂದ್ರೆ ಸ್ಟಾಂಡರ್ಡ್ ಡಿಡಕ್ಷನ್​ ಮಿತಿಯನ್ನು ಕೂಡ ಹೆಚ್ಚಿಸಬೇಕು ಅನ್ನೋದು 2018ರಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಅಂದ್ರೆ ಒಟ್ಟು ಸಂಬಳದಲ್ಲಿ ಒಂದಿಷ್ಟು ಆದಾಯದ ಮೇಲೆ ತೆರಿಗೆ ಇರೋದಿಲ್ಲ. ಅಂದ್ರೆ 2018ರಲ್ಲಿ ₹3 ಲಕ್ಷದ ಮೇಲೆ ಇರುವ ಆದಾಯದ ಮೇಲೆ ಸ್ಟಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ ಸುಮಾರು ₹40 ಸಾವಿರ ಮಿತಿಯನ್ನು ನೀಡಲಾಗಿತ್ತು. ಅಂದ್ರೆ ಅಲ್ಲಿಗೆ ಮೂರು ಲಕ್ಷದ ಮೇಲೆ ಆರು ಲಕ್ಷದ ವರೆಗೆ ಆದಾಯದವರ ಒಟ್ಟು ಆದಾಯದಲ್ಲಿ 40 ಸಾವಿರ ರೂಪಾಯಿಯನ್ನು ಕಳೆದು ಉಳಿದ ಆದಾಯದ ಮೇಲೆ ತೆರಿಗೆ ನೀಡಬೇಕಾಗಿತ್ತು. ಅದು 2019ರಲ್ಲಿ 50 ಸಾವಿರಕ್ಕೆ ವಿಸ್ತರಣೆಯಾಯ್ತು. ಅದಾದ ಮೇಲೆ ಸ್ಟಾಂಡರ್ಡ್ ಡಿಡಕ್ಷನ್​​ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗೆ ಸ್ಯಾಲರಿ ಆದಾಯ ಆಧಾರಿತ ಮಧ್ಯಮ ವರ್ಗದ ಕುಟುಂಬಗಳು ಹಾಗೂ ವ್ಯಾಪಾರಿಗಳು ತೆರಿಗೆ ವಿನಾಯಿತಿಯಲ್ಲಿ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಈ ಬಾರಿ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಬಂಪರ್ ಆಫರ್​..?

publive-image
ಭಾರತದ ಒಟ್ಟು ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಪಾಲು ದೊಡ್ಡದಿದೆ. ದೇಶದ ಒಟ್ಟು ಜಿಡಿಪಿಯಲ್ಲಿ ಶೇಕಡಾ 14ರಷ್ಟು ಕೃಷಿ ಕ್ಷೇತ್ರದ ಪಾಲು ಇದೆ. ಹೀಗಾಗಿ ರೈತರು ಈ ಬಾರಿ ಮೋದಿ ಸರ್ಕಾರದ ಬಜೆಟ್ ಮೇಲೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. 2025ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಮೋದಿ ಸರ್ಕಾರ ಇಟ್ಟುಕೊಂಡಿದೆ. ಹೀಗಾಗಿ ಸಹಜವಾಗಿಯೇ ಕೃಷಿ ಕ್ಷೇತ್ರದಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಅದರಲ್ಲೂ ಸಣ್ಣ ಪ್ರಮಾಣದ ಭೂಮಿ ಹೊಂದಿರುವ ರೈತರು ಹೆಚ್ಚಿರುವ ಭಾರತದಂತ ದೇಶದಲ್ಲಿ ಮೂಲಭೂತ ಸೌಕರ್ಯಗಳ ಅವಶ್ಯಕತೆ ತುಂಬಾ ಇದೆ. ನೀರಾವರಿ ಸೌಕರ್ಯ, ಬೀಜ ಗೊಬ್ಬರದ ಬೆಲೆಗಳಲ್ಲಿ ಇಳಿಕೆ, ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೀಗೆ ಅನೇಕ ನಿರೀಕ್ಷೆಗಳ ಜೊತೆ ಜೊತೆಗೆ ಪ್ರತಿ ವರ್ಷ ಕೃಷಿ ಸಮ್ಮಾನ ಯೋಜನೆ ಅಡಿಯಲ್ಲಿ ಸಣ್ಣ ಪ್ರಮಾಣದ ಭೂಮಿ ಹೊಂದಿರುವ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ ಸಿಗುತ್ತಿದೆ. ಇದು ಈ ಬಾರಿ ಬಜೆಟ್​ನಲ್ಲಿ 8 ಸಾವಿರ ಮಾಡಲಿ ಅನ್ನುವ ನಿರೀಕ್ಷೆ ರೈತರದು. ಬೆಳೆ ನಷ್ಟ ಪರಿಹಾರದಲ್ಲಿಯೂ ವಿಶೇಷ ಕೊಡುಗೆ ಸಿಗುವ ನಿರೀಕ್ಷೆಯಿದೆ. ಅದರೊಂದಿಗೆ ಮನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರ ವೇತನವನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ಕಾರ್ಮಿಕರಿದ್ದಾರೆ. ಇನ್ನೂ ಪಿಎಂ ಆವಾಸ್ ಯೋಜನೆಯಲ್ಲಿ ಇನ್ನೂ ಹೆಚ್ಚು ಹೆಚ್ಚು ಫಲಾನುಭವಿಗಳಿಗೆ ಸೌಕರ್ಯ ಸಿಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: ನಾಪತ್ತೆಯಾದ ಮಗನನ್ನು ಹುಡುಕಿಕೊಡುವಂತೆ ಠಾಣೆ ಮೆಟ್ಟಿಲೇರಿದ ತಾಯಿ

ಉತ್ಪಾದನಾ ವಲಯಕ್ಕೆ ಈ ಬಾರಿ ಸಿಗಲಿದೆಯಾ ಮತ್ತಷ್ಟು ಬೂಸ್ಟ್

publive-image
ಉತ್ಪಾದನಾ ವಲಯದಲ್ಲಿಯೂ ಕೂಡ ಈ ಬಾರಿ ಬಜೆಟ್ ಮೇಲೆ ಬಹಳ ನಿರೀಕ್ಷೆಗಳು ಇವೆ. ಮೇಕ್​ ಇನ್ ಇಂಡಿಯಾ. ಆತ್ಮನಿರ್ಭರ್ ಭಾರತ ಎಂದು ಮೋದಿ ಸರ್ಕಾರ ಕಳೆದ 10 ವರ್ಷಗಳಿಂದ ಸ್ವಾವಲಂಬಿ ಉತ್ಪಾದನೆಯ ಬಗ್ಗೆ ಮಾತನಾಡುತ್ತಿದೆ. ಹೀಗಾಗಿ ಸ್ಥಳೀಯ ಉತ್ಪಾದನಾ ವಲಯಕ್ಕೆ ಹೆಚ್ಚು ಹೆಚ್ಚು ಶಕ್ತಿ ತುಂಬವ ಅನಿವಾರ್ಯತೆ ಮೋದಿ ಸರ್ಕಾರದ ಮೇಲಿದೆ. ಹೊಸ ಉತ್ಪಾದನಾ ಕಂಪನಿಗಳಿಗೆ ಕೊಂಚ ತೆರಿಗೆ ವಿನಾಯಿತಿ ಸಿಗುವ ನಿರೀಕ್ಷೆ ಸದ್ಯ ಉತ್ಪಾದನಾ ವಲಯದಲ್ಲಿದೆ.

ರಿಯಲ್ ಎಸ್ಟೇಟ್​ಗಳಿಗೆ ಸಿಗುತ್ತಾ ಕೊಂಚ ರಿಲೀಫ್​..?

publive-image

ಇದನ್ನೂ ಓದಿ:IT ಕಂಪನಿಗಳ ಉದ್ಯೋಗಿಗಳಿಗೆ ಬಿಗ್​ ಶಾಕ್​.. ಇನ್ಮುಂದೆ 14 ಗಂಟೆ ಕೆಲಸ ಮಾಡೋದು ಫಿಕ್ಸ್​?

ಸದ್ಯ ಭಾರತದಲ್ಲಿ ರಿಯಲ್ ಎಸ್ಟೇಟ್​ ಉದ್ಯಮ ಹೆಚ್ಚು ಕಡಿಮೆ ತ್ರಿಶಂಕು ಸ್ಥಿತಿಯಲ್ಲಿದೆ. ಕೋವಿಡ್ ಮಹಾಮಾರಿ ಆಕ್ರಮಣದ ಬಳಿಕ ಪಾತಾಳಕ್ಕೆ ಕುಸಿದಿದ್ದ ರಿಯಲ್ ಎಸ್ಟೇಟ್​ ವಲಯ ಈಗ ಕೊಂಚ ನಿಧಾನಕ್ಕೆ ಸುಧಾರಿಸಿಕೊಳ್ಳುತ್ತಿದೆ. ಸದ್ಯ ರಿಯಲ್ ಎಸ್ಟೇಟ್ ವಲಯವೂ ಕೂಡ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಮೊದಲ ಬಾರಿ ಮನೆ ಖರೀದಿದಾರರ ಮೇಲೆ ಇರುವ ತೆರಿಗೆ ಮಿತಿಯನ್ನು ₹5 ಲಕ್ಷದವರೆಗೆ ಹೆಚ್ಚಿಸಬೇಕು. ಸಿಮೆಂಟ್ ಮೇಲಿರುವ ಜಿಎಸ್​ಟಿ ದರದಲ್ಲಿ ಇಳಿಕೆ ಹಾಗೂ ಟಿಡಿಎಸ್​ ದರ ಶೇಕಡಾ 10 ರಿಂದ 2ಕ್ಕೆ ಇಳಿಸಬೇಕು ಅಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಸರ್ಕಾರದಿಂದ ಅಪೇಕ್ಷಿಸುತ್ತಿದ್ದಾರೆ.

ಅದೇ ರೀತಿ ಹವಾಮಾನದಲ್ಲಾಗುತ್ತಿರುವ ವಿಪರೀತ ಬದಲಾವಣೆ ನಿಯಂತ್ರಣದ ಬಗ್ಗೆ ಈ ಬಜೆಟ್​ನಲ್ಲಿ ಮೋದಿ ಸರ್ಕಾರ ಏನು ನಿರ್ಣಯ ತೆಗೆದುಕೊಳ್ಳಲಿದೆ ಅನ್ನೋ ನಿರೀಕ್ಷೆಗಳು ಕೂಡ ಇವೆ. ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಸಿಎನ್​ಜಿ ವಾಹನಗಳ ಖರೀದಿಗೆ ಉತ್ತೇಜನದಲ್ಲಿ ಯಾವ ಹೊಸ ಆಫರ್​ಗಳನ್ನು ಕೊಡಲಿದೆ ಅನ್ನೋದನ್ನ ನೋಡಬೇಕಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment