newsfirstkannada.com

‘ಲೋಕ’ ಸಮರಕ್ಕೂ ಮುನ್ನ ಮೋದಿ ಲೆಕ್ಕಕ್ಕೆ ದಿನಾಂಕ ಫಿಕ್ಸ್; ಎಲೆಕ್ಷನ್ ಬಜೆಟ್ ಮೇಲೆ ಭಾರೀ ನಿರೀಕ್ಷೆ

Share :

Published January 12, 2024 at 10:33am

Update January 12, 2024 at 10:37am

    2ನೇ ಅವಧಿಯ ಕೊನೆ ಬಜೆಟ್​ ಮಂಡಿಸಲಿರೋ ಕೇಂದ್ರ ಸರ್ಕಾರ

    ಎಷ್ಟು ದಿನಗಳ ಕಾಲ ಸಂಸತ್​​ ಬಜೆಟ್​​ ಅಧಿವೇಶನ ನಡೆಯಲಿದೆ.?

    ಸರ್ಕಾರದ 5 ವರ್ಷದ ಸಾಧನೆ ಕುರಿತು ಮಾತಾಡಲಿರೋ ರಾಷ್ಟ್ರಪತಿ

ನವದೆಹಲಿ: 2024ರ ಲೋಕಸಭಾ ಎಲೆಕ್ಷನ್​ ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದ್ದು ಇದಕ್ಕೆ ಚುನಾವಣಾ ಆಯೋಗ ಮತದಾನದ ದಿನಾಂಕ ಘೋಷಣೆ ಮಾಡಬೇಕಿದೆ. ಸದ್ಯ ಈ ಎಲೆಕ್ಷನ್​ ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಯವ್ಯಯ ಮಂಡನೆ ಮಾಡಲಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ 2ನೇ ಅವಧಿಯ ಕೊನೆಯ ಬಜೆಟ್​ ಮಂಡಿಸಲು ಸಿದ್ಧವಾಗಿದ್ದು, ಜನವರಿ 31ರಿಂದ ಫೆಬ್ರವರಿ 9ರವರೆಗೆ ಸಂಸತ್​​ ಬಜೆಟ್​​ ಅಧಿವೇಶನ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮ ಜನವರಿ 31ರಂದು ಸರ್ಕಾರದ 5 ವರ್ಷಗಳ ಸಾಧನೆ ಕುರಿತು ಜಂಟಿ ಸದನದಲ್ಲಿ ಮಾತನಾಡುವ ಮೂಲಕ ಅಧಿವೇಶನ ಆರಂಭಗೊಳ್ಳಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್​ ಅವರು ಫೆಬ್ರವರಿ 1ರಂದು ಪ್ರಸಕ್ತ ಸಾಲಿನ ಬಜೆಟ್​​ ಮಂಡಿಸಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾಗದ ರಹಿತ ಬಜೆಟ್​​ ಮಂಡಿಸಲಾಗುತ್ತಿದ್ದು, ಈ ಬಾರಿಯು ಪೇಪರ್​​ ಲೆಸ್​​ ಬಜೆಟ್​ ಅನ್ನು ಮಂಡಿಸಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚುನಾವಣಾ ಪೂರ್ವ ಬಜೆಟ್‌ನಲ್ಲಿ ದೇಶದ 5 ಪ್ರಮುಖ ವಿಭಾಗಗಳಾದ ಮಹಿಳೆಯರು, ಬಡವರು, ಯುವಕರು, ರೈತರು ಮತ್ತು ಬುಡಕಟ್ಟು ಜನಾಂಗದ ಕಲ್ಯಾಣ ಯೋಜನೆಗಳ ಮೇಲೆ ಕೇಂದ್ರೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ 3ನೇ ಅವಧಿಗೆ ಎನ್​​ಡಿಎ ಮೈತ್ರಿಕೂಡ ಅಧಿಕಾರದ ಗದ್ದುಗೆ ಏರುವ ಪ್ರಯತ್ನದಲ್ಲಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಸಮರಕ್ಕೂ ಮುನ್ನ ಮೋದಿ ಲೆಕ್ಕಕ್ಕೆ ದಿನಾಂಕ ಫಿಕ್ಸ್; ಎಲೆಕ್ಷನ್ ಬಜೆಟ್ ಮೇಲೆ ಭಾರೀ ನಿರೀಕ್ಷೆ

https://newsfirstlive.com/wp-content/uploads/2024/01/PM_MODI_NIRMALA.jpg

Load More