2025 ಬಜೆಟ್​​! ಯಾವ ವಸ್ತುಗಳು ದುಬಾರಿ? ಯಾವೆಲ್ಲ ವಸ್ತುಗಳ ಬೆಲೆ ಕಡಿಮೆ..? Check full list

author-image
Ganesh
Updated On
2025 ಬಜೆಟ್​​! ಯಾವ ವಸ್ತುಗಳು ದುಬಾರಿ? ಯಾವೆಲ್ಲ ವಸ್ತುಗಳ ಬೆಲೆ ಕಡಿಮೆ..? Check full list
Advertisment
  • ಸಂಸತ್​​ನಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
  • ಯುವಕರು, ಮಹಿಳೆಯರನ್ನು ಹೆಚ್ಚು ಕೇಂದ್ರಿಕರಿಸಿದ ಬಜೆಟ್
  • ಬಡವರು, ಮಧ್ಯಮವರ್ಗದವರು, ರೈತರಿಗೆ ವಿಶೇಷ ಉಡುಗೊರೆ

ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು 2025ರ ಸಾಲಿನ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಯುವಕರು, ಮಹಿಳೆಯರನ್ನು ಹೆಚ್ಚು ಕೇಂದ್ರಿಕರಿಸಿದೆ. ಬಡವರು, ಮಧ್ಯಮವರ್ಗದವರು, ರೈತರಿಗೆ ಬಜೆಟ್​ನಲ್ಲಿ ವಿಶೇಷ ಉಡುಗೊರೆಯನ್ನು ನೀಡಲಾಗಿದೆ.

ಜೊತೆಗೆ ಹಣ ದುಬ್ಬರ ಮತ್ತು ತೆರಿಗೆ ವಿಷಯದಲ್ಲಿ ಬಿಗ್ ರಿಲೀಫ್ ನೀಡಲು ಮುಂದಾಗಿದೆ. ಬಜೆಟ್​ಗೂ ಮುನ್ನವೇ ವಾಣಿಜ್ಯ ಸಿಲಿಂಡರ್​ಗಳ ಬೆಲೆಯಲ್ಲಿ ಕಡಿಮೆ ಮಾಡಲಾಗಿದೆ. ಇನ್ನು ಬಜೆಟ್ ಮಂಡನೆ ವೇಳೆ ಅನೇಕ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಅನೇಕ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ಔಷಧಿಗಳು, ಎಲೆಕ್ಟ್ರಿಕ್ ವಾಹನಗಳು ಕಡಿಮೆ ಬೆಲೆಗೆ ಸಿಗಲಿವೆ.

ಇದನ್ನೂ ಓದಿ: ಚಿನ್ನಾಭರಣ ಕೊಳ್ಳುವವರಿಗೆ ಶಾಕಿಂಗ್ ನ್ಯೂಸ್.. ಬಜೆಟ್ 2025 ಬೆನ್ನಲ್ಲೇ ಬಂಗಾರದ ಬೆಲೆ ಏರಿಕೆ?

ಯಾವುದೆಲ್ಲ ಅಗ್ಗ..?

  • ಎಲೆಕ್ಟ್ರಾನಿಕ್ಸ್
  •  ಒಟ್ಟು 56 ಔಷಧಿಗಳು
  •  36 ಜೀವ ಉಳಿಸುವ ಔಷಧಿಗಳು
  •  ಕ್ಯಾನ್ಸರ್ ಔಷಧಿಗಳು
  •  ಮೊಬೈಲ್ ಫೋನ್​ಗಳು
  •  ಎಲೆಕ್ಟ್ರಿಕ್ ಕಾರು
  •  ಮೊಬೈಲ್ ಬ್ಯಾಟರಿ
  •  ಫಿಶ್ ಪೇಸ್ಟ್​ ( Fish Paste)
  • ಚರ್ಮದಿಂದ ಮಾಡಿದ ವಸ್ತುಗಳು
  •  ಲೆದರ್ ಬೆಲ್ಟ್
  •  ಲೆದರ್ ಶೂ
  •  ಲೆದರ್ ಜಾಕೆಟ್ಸ್
  •  ಮರೈನ್ ಪ್ರಾಡೆಕ್ಟ್​
  •  ಎಲ್​ಇಡಿ ಟಿವಿಗಳು
  •  ಕೊಬಾಲ್ಟ್ ಪೌಡರ್
  •  ಸ್ಕ್ರಾಪ್ ಆಫ್ ಲಿಥಿಯಮ್
  •  ಜಿಂಕ್ ( Zinc)

ಯಾವುದೆಲ್ಲ ದುಬಾರಿ

  • ಫ್ಲಾಟ್​ ಪ್ಯಾನಲ್ ಡಿಸ್​​ಪ್ಲೆ (flat-panel displays: 10% to 20%)
  •  ಟಿವಿ ಡಿಸ್​ಪ್ಲೆ
  •  ಬಟ್ಟೆಗಳು (Knitted fabrics)
  •  ಟೆಕ್ ಮತ್ತು ಉತ್ಪಾದನಾ ವಲಯ ದುಬಾರಿ
  •  ಆಮದು ಮತ್ತು ರಫ್ತು ವ್ಯವಹಾರ ಹೊಂದಿರುವ ಕೆಲವು ಕೈಗಾರಿಕೆಗಳ ಮೇಲೆ ಪರಿಣಾಮ

ಗಂಭೀರ ಕಾಯಿಲೆಗೆ ಬಳಸುವ ಒಟ್ಟು 56 ಔಷಧಿಗಳ ಮೇಲಿನ ಕಸ್ಟಮ್ ಸುಂಕವನ್ನು ತೆಗೆಯಲಾಗಿದೆ. ಎಲೆಕ್ಟ್ರಾನಿಕ್ ಕಸ್ಟಮ್​ ಸುಂಕವು ಶೇಕಡಾ 5 ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ 12 ಲಕ್ಷವರೆಗೆ ವಿನಾಯಿತಿ.. ಜನರಿಗೆ ಏನು ಲಾಭ..? ಹೂಡಿಕೆ ತಜ್ಞರು ಹೇಳೋದು ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment