/newsfirstlive-kannada/media/post_attachments/wp-content/uploads/2025/04/MODI_1.jpg)
ದೇಶದಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿಲ್ಲದ ಕಾರಣ ದಿನೇ ದಿನೇ ನಿರುದ್ಯೋಗ ಹೆಚ್ಚಾಗುತ್ತಿದೆ ಅಂತ ಸಾಕಷ್ಟು ಮಂದಿ ನೋವು ತೋಡಿಕೊಳ್ಳುತ್ತಿದ್ದಾರೆ. ಇಂಜಿನಿಯರಿಂಗ್ ಮುಗಿಸಿದವರಿಗೂ ಉದ್ಯೋಗ ಸಿಗುತ್ತಿಲ್ಲ. ಕಂಪ್ಯೂಟರ್ ಸೈನ್ಸ್, ಎಂಬಿಎ ಪದವಿ ಪಡೆದವರು ಈಗ ನಿರುದ್ಯೋಗಿಗಳು. ದೇಶದಲ್ಲಿ ಉದ್ಯೋಗ ರಂಗದಲ್ಲಿ ಹೊಸ ನೇಮಕಾತಿಗಳು ನಡೆಯುತ್ತಿಲ್ಲ. ಹೀಗೆ ನಿರುದ್ಯೋಗದಿಂದ ನೊಂದವರಿಗೆ ರಿಲೀಫ್ ನೀಡುವ ನಿರ್ಧಾರವನ್ನ ಪ್ರಧಾನಿ ಮೋದಿ ಅಧ್ಯಕ್ಷತೆಯ ಕ್ಯಾಬಿನೆಟ್ ಸಭೆಯಲ್ಲಿ ಕೈಗೊಳ್ಳಲಾಗಿದೆ.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉದ್ಯೋಗ ಸೃಷ್ಟಿ ಮಾಡುವವರಿಗೆ ಇನ್ಸೇಂಟೀವ್ ನೀಡಿಕೆಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಮಂಗಳವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರದ ಕ್ಯಾಬಿನೆಟ್ನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಉದ್ಯೋಗ ಲಿಂಕ್ಡ್ ಪೋತ್ಸಾಹಧನ ಯೋಜನೆ ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಎಂಪ್ಲಾಯಮೆಂಟ್ ಲಿಂಕ್ಡ್ ಇನ್ಸೇಂಟೀವ್ ಯೋಜನೆಗೆ ಒಂದು ಲಕ್ಷ ಕೋಟಿ ರೂಪಾಯಿ ಹಂಚಿಕೆಗೆ ಕೇಂದ್ರದ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ.
2 ಕಂತುಗಳಲ್ಲಿ 15 ಸಾವಿರ ರೂಪಾಯಿ
ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಯೋಜನೆ ಜಾರಿಯಾಗಿದೆ. ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಉದ್ಯೋಗ ಲಿಂಕ್ಡ್ ಪೋತ್ಸಾಹಧನ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಯಡಿ 3.5 ಕೋಟಿ ಉದ್ಯೋಗ ಸೃಷ್ಟಿಯ ಗುರಿ ಹಾಕಿಕೊಳ್ಳಲಾಗಿದೆ. ಮೊದಲ ಬಾರಿ ಉದ್ಯೋಗಕ್ಕೆ ಸೇರ್ಪಡೆಯಾದವರಿಗೆ 15 ಸಾವಿರ ರೂಪಾಯಿ 2 ಕಂತುಗಳಲ್ಲಿ ನೀಡಲಾಗುತ್ತೆ. ಇನ್ನೂ ಉದ್ಯೋಗದಾತರಿಗೂ ಪ್ರತಿ ಉದ್ಯೋಗ ಸೃಷ್ಟಿಗೂ ಪ್ರತಿ ತಿಂಗಳು 3 ಸಾವಿರ ನೀಡಲಾಗುತ್ತೆ.
ಹೆಚ್ಚುವರಿ ಪ್ರತಿಯೊಂದು ಉದ್ಯೋಗ ಸೃಷ್ಟಿಗೆ ಪ್ರತಿ ತಿಂಗಳು 2 ವರ್ಷದವರೆಗೂ 3 ಸಾವಿರ ನೀಡಲಾಗುತ್ತೆ. ಇನ್ನೂ ಮ್ಯಾನ್ಯುಫ್ಯಾಕ್ಚರಿಂಗ್ ವಲಯಕ್ಕೆ 3, 4ನೇ ವರ್ಷಕ್ಕೂ ಇನ್ಸೇಂಟೀವ್ ನೀಡಲಾಗುತ್ತೆ. ನಮ್ಮ ದೇಶದಲ್ಲಿ ಇದುವರೆಗೂ ಪ್ರೊಡಕ್ಷನ್ ಲಿಂಕ್ಡ್ ಇನ್ಸೇಂಟೀವ್ ಯೋಜನೆ ಜಾರಿಯಲ್ಲಿತ್ತು. ಈಗ ಉದ್ಯೋಗ ಲಿಂಕ್ಡ್ ಇನ್ಸೇಂಟೀವ್ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಹೊಸ ಪಕ್ಷ ಸ್ಥಾಪನೆಗೆ ಭಾರೀ ವಿರೋಧ.. ಡೊನಾಲ್ಡ್ ಟ್ರಂಪ್ vs ಎಲಾನ್ ಮಸ್ಕ್!
1 ಲಕ್ಷ ಕೋಟಿ ರೂಪಾಯಿ ಕಾರ್ಪಸ್ ನಿಧಿ
ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಮತ್ತೊಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಿಸರ್ಚ್ ಡೆವಲಪ್ ಮೆಂಟ್ ಅಂಡ್ ಇನ್ನೋವೇಶನ್ ಸ್ಕೀಮ್ ಜಾರಿಗೆ ಕೇಂದ್ರದ ಕ್ಯಾಬಿನೆಟ್ ಇವತ್ತು (ಜುಲೈ 1) ಒಪ್ಪಿಗೆ ನೀಡಿದೆ. ಈ ಸ್ಕೀಮ್ ಜಾರಿಗೆ 1 ಲಕ್ಷ ಕೋಟಿ ರೂಪಾಯಿ ಕಾರ್ಪಸ್ ನಿಧಿ ನೀಡಲಾಗುತ್ತಿದೆ. ಹೊಸದಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಖಾಸಗಿ ಸಂಸ್ಥೆಗಳ ಸಂಶೋಧನೆಗೆ ಉತ್ತೇಜನ ನೀಡಲಾಗುತ್ತಿದೆ. ಅಭಿವೃದ್ಧಿ, ನಾವಿನ್ಯತೆಯ ಚಟುವಟಿಕೆ ಹೆಚ್ಚಿಸಲು ಉತ್ತೇಜನ ನೀಡಲಾಗುತ್ತೆ. ಡೀಪ್ ಟೆಕ್ ಫಂಡ್ ಅಫ್ ಫಂಡ್ಸ್ ಸ್ಥಾಪನೆಗೆ ಅನುಕೂಲ ಮಾಡಿಕೊಡುವುದು ಈ ಸ್ಕೀಮ್ ಉದ್ದೇಶ.
ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಆಡಳಿತ ಮಂಡಳಿಯಿಂದ ಸಮಗ್ರ ಕಾರ್ಯತಂತ್ರದ ನಿರ್ದೇಶನ ನೀಡಲಾಗುತ್ತೆ. ಇದು ಖಾಸಗಿ ವಲಯಕ್ಕೆ ದೀರ್ಘಾವಧಿಯಲ್ಲಿ, ಕೈಗೆಟುಕುವ ದರದಲ್ಲಿ ಹಣಕಾಸು ಒದಗಿಸುವ ರಿಸರ್ಚ್ ಡೆವಲಪ್ಮೆಂಟ್ ಇನ್ನೋವೇಶನ್ ಯೋಜನೆಯಾಗಿದೆ. ಸ್ಟಾರ್ಟ್ ಅಪ್ಗಳ ವಿಷಯದಲ್ಲಿ ಈಕ್ವಿಟಿ ರೂಪದಲ್ಲಿ ಹಣಕಾಸು ಒದಗಿಸಬಹುದು. ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ