/newsfirstlive-kannada/media/post_attachments/wp-content/uploads/2024/08/NARENDRA-MODI-2.jpg)
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಮಹತ್ವದ ಈ ಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಮಂತ್ರಿಮಂಡಲ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಅಂತೆಯೇ ಸಂಸತ್ನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ‘One Nation, One Election’ ಬಿಲ್ ಮಂಡಿಸಿ ಅಂಗೀಕಾರ ಪಡೆಯುವ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರ ಇದೆ.
ಏನಿದು ಒಂದು ರಾಷ್ಟ್ರ ಒಂದು ಚುನಾವಣೆ..?
ಲೋಕಸಭೆಗೆ ಹಾಗೂ ಎಲ್ಲಾ ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದೇ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಪ್ರಮುಖ ಉದ್ದೇಶ. ಈ ಹಿಂದೆ ಇದರ ಸಾಧಕ-ಬಾಧಕಗಳ ತಿಳಿದುಕೊಳ್ಳಲು ಕೇಂದ್ರ ಸರ್ಕಾರ ಸಮಿತಿ ರಚಿಸಿತ್ತು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿ, ಅದರ ವರದಿ ಸರ್ಕಾರದ ಕೈ ಸೇರಿದೆ. ಕೋವಿಂದ್ ಸಮಿತಿಯು ಒಂದು ದೇಶ, ಒಂದು ಚುನಾವಣೆಗೆ ಒಂದಷ್ಟು ಶಿಫಾರಸು ಮಾಡಿದೆ.
ಇದನ್ನೂ ಓದಿ:ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಡ್ರೋನ್ ಪ್ರತಾಪ್.. ಕಾರಣವೇನು?
ಸಂಸತ್ನಲ್ಲಿ ಮಂಡನೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಒಂದಷ್ಟು ಸವಾಲುಗಳು ಎದುರಾಗಲಿವೆ. ಕೋವಿಂದ್ ಸಮಿತಿ ನೀಡಿರುವ ಶಿಫಾರಸು ಕಾರ್ಯಗತಗೊಳಿಸುವುದು ಅಷ್ಟು ಸುಲಭವಿಲ್ಲ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಅಲ್ಲದೇ ರಾಜಕೀಯ ಒಮ್ಮತವೂ ಅಗತ್ಯವಾಗಿದೆ.
ವಿರೋಧ ಯಾಕೆ..?
ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಹಲವು ಸವಾಲುಗಳು ಇವೆ. ಇದು ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸಬಹುದು ಅನ್ನೋದು ಹಲವರ ಅಭಿಪ್ರಾಯ. ಭಾರತಂಥ ಬೃಹತ್ ಜನಸಂಖ್ಯೆಯುಳ್ಳ ದೇಶಕ್ಕೆ ಇದು ಕಾರ್ಯಸಾಧುವಲ್ಲ ಎಂದು ವಿಪಕ್ಷಗಳು ಹೇಳಿವೆ. ರಾಜಕೀಯ ಕಾರಣಗಳಿಂದ ವಿಧಾನಸಭೆಯನ್ನು ವಿಸರ್ಜಿಸಿದರೂ ಮುಂದಿನ ಅವಧಿಯವರೆಗೆ ಚುನಾವಣೆಗೆ ಕಾಯಬೇಕಾದ ಪ್ರಸಂಗ ಬರಲಿದೆ. ಇದರಿಂದ ಒಕ್ಕೂಟದ ವ್ಯವಸ್ಥೆಗೆ ಪೆಟ್ಟು ಬೀಳಲಿದೆ ಅನ್ನೋದು ವಿಪಕ್ಷಗಳ ವಾದವಾಗಿದೆ.
ಇದನ್ನೂ ಓದಿ:ಡಿವೋರ್ಸ್ ಕೇಸ್ಗಳಲ್ಲಿ ಜೀವನಾಂಶ; ಪ್ರಮುಖ 8 ಅಂಶಗಳನ್ನು ಪರಿಗಣಿಸಲು ಸುಪ್ರೀಂ ನಿರ್ದೇಶನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ