ಬೇಸಿಗೆ ಕಾಲ ಶುರು; ಮನೆಯಿಂದ ಹೊರಗೆ ಹೋಗುವ ಮುನ್ನ ಹುಷಾರ್​​; ಕೇಂದ್ರದಿಂದ ಎಚ್ಚರಿಕೆ!

author-image
Ganesh Nachikethu
Updated On
ಅಬ್ಬಬ್ಬಾ.. 3 ವಾರದಲ್ಲಿ ಬೆಂಗಳೂರಿನ 7,324 ಮಂದಿಗೆ ಅತಿಸಾರ ಸಮಸ್ಯೆ; ಮುನ್ನೆಚ್ಚರಿಕಗಳೇನು?
Advertisment
  • ಚಳಿಗಾಲ ಮುಗಿಯುತ್ತಿದ್ದಂತೆಯೇ ಬೇಸಿಗೆ ಕಾಲ ಶುರು
  • ಬಿಸಿಲಿನಿಂದ ನಿಮ್ಮನ್ನು ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ
  • ಮನೆಯಿಂದ ಹೊರಗೆ ಹೋಗುವ ಮುನ್ನ ಹುಷಾರ್..!

ದೆಹಲಿ: ಬೇಸಿಗೆ ಕಾಲ ಶುರುವಾಗುತ್ತಿದೆ. ಧಗೆಯಿಂದ ಬಚಾವ್​​ ಆಗಲು ಜನ ಫ್ಯಾನ್​ಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಒಣ ಹವೆ ಆರಂಭವಾಗಿದೆ. ಬಿಸಿಲಿನಲ್ಲಿ ಮನೆಯಿಂದ ಹೊರಗೆ ಹೋಗೋದ್ರಿಂದ ಅನೇಕರು ನಿರ್ಜಲೀಕರಣಕ್ಕೆ ಬಲಿ ಆಗ್ತಾರೆ. ದೇಶದಲ್ಲಿ ಬಿಸಿಗಾಳಿ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ವಿಶೇಷ ಮಾರ್ಗಸೂಚಿ ಹೊರಡಿಸಿದೆ.

ಮಾರ್ಗ ಸೂಚಿಯಲ್ಲಿ ಏನಿದೆ?

ಶಾಖದ ಅಲೆಯಿಂದ ಸುರಕ್ಷಿತವಾಗಿರೋದು ಮುಖ್ಯ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಶಾಖದಿಂದ ನರಗಳ ಸಮಸ್ಯೆ ಉಂಟಾಗುತ್ತದೆ. ದೇಹವನ್ನು ತಂಪಾಗಿರಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮನ್ನು ಹೈಡ್ರೀಕರಿಸಿ, ಅದಕ್ಕೆ ಸಾಧ್ಯವಾದಷ್ಟು ನೀರು ಕುಡಿಯಿರಿ. ನೀವು ಫಿಟ್ ಆಗಿರಬೇಕು ಅಂದರೂ ನೀರು ಕುಡಿಯಿರಿ. ಹತ್ತಿ ಬಟ್ಟೆಗಳನ್ನು ಧರಿಸೋದು ಉತ್ತಮ. ಮನೆಯಲ್ಲಿ ಅಥವಾ ತಂಪಾದ ಸ್ಥಳಗಳಲ್ಲಿ ಇರಿ. ಈ ಅವಧಿಯಲ್ಲಿ ಒಬ್ಬ ವ್ಯಕ್ತಿಯು ಪ್ರಜ್ಞಾಹೀನನಾಗಿದ್ದರೆ ತಕ್ಷಣವೇ ಅವನಿಗೆ ಕುಡಿಯಲು ನೀರನ್ನು ನೀಡಬೇಡಿ ಎಂದು ಸಲಹೆ ನೀಡಿದೆ.

ತಜ್ಞರು ಏನು ಹೇಳುತ್ತಾರೆ?

ಆರೋಗ್ಯ ತಜ್ಞರ ಪ್ರಕಾರ.. ಒಬ್ಬ ವ್ಯಕ್ತಿಯು ಬಿಸಿಲಿನಲ್ಲಿ ಪ್ರಜ್ಞಾಹೀನನಾಗಿದ್ದರೆ ಅವನಿಗೆ ನೀರು ನೀಡುವ ತಪ್ಪನ್ನು ಮಾಡಬಾರದು. ಏಕೆಂದರೆ ಆತ ನೀರು ಕುಡಿಯಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾನೆ. ಈ ಸಂದರ್ಭದಲ್ಲಿ ನೀರು ಹೊಟ್ಟೆಗೆ ಬದಲಾಗಿ ಶ್ವಾಸಕೋಶಕ್ಕೆ ಹೋಗಬಹುದು. ಇದು ಉಸಿರಾಟದಲ್ಲಿ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ.

ಒಂದು ವೇಳೆ ನೀರು ಶ್ವಾಸಕೋಶಕ್ಕೆ ಹೋದರೆ ನ್ಯುಮೋನಿಯಾಗೆ ಬಲಿಯಾಗಬಹುದು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ, ನೀರಿನಂತಹ ದ್ರವವನ್ನು ತಪ್ಪಾಗಿ ನೀಡಲಾಗುತ್ತದೆ. ಇದರಿಂದ ರಕ್ತದಲ್ಲಿನ ಎಲೆಕ್ಟ್ರೋಲೈಟ್‌ಗಳ ಬ್ಯಾಲೆನ್ಸ್ ಕಷ್ಟವಾಗುತ್ತದೆ. ನಂತರ ಹೃದಯ ಸಂಬಂಧಿ ಸಮಸ್ಯೆಗಳು ಶುರುವಾಗುತ್ತವೆ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: ಬೆಳಗ್ಗೆ ತಿಂಡಿ ತಿನ್ನೋದು ಮರೆಯುತ್ತಿದ್ದೀರಾ? ಹಾಗಾದ್ರೆ ಸಕ್ಕರೆ ಕಾಯಿಲೆ ಬರೋದು ಗ್ಯಾರಂಟಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment