/newsfirstlive-kannada/media/post_attachments/wp-content/uploads/2025/06/RCB_HD_KUMARASWAMY.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಿದ್ಧವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಟ್ರೋಫಿಗಾಗಿ ದೊಡ್ಡ ಕಾದಟ ನಡೆಯಲಿದೆ. 18 ವರ್ಷಗಳಿಂದ ಕಪ್ ಗೆಲ್ಲದ ಆರ್‌ಸಿಬಿ ಈ ಸಲ ಟ್ರೋಫಿಗೆ ಮುತ್ತಿಡಲಿ ಎಂದು ಕೋಟ್ಯಂತರ ಅಭಿಮಾನಿಗಳ ಆಸೆ ಆಗಿದೆ. ಅದರಂತೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರು ಆದ ಹೆಚ್.ಡಿ ಕುಮಾರಸ್ವಾಮಿ ಕೂಡ ಆರ್ಸಿಬಿಗೆ ಶುಭ ಹಾರೈಸಿದ್ದಾರೆ.
ಆರ್‌ಸಿಬಿ ತಂಡದ ಫೈನಲ್ನಲ್ಲಿ ಗೆದ್ದು ಬರಲಿ ಎಂದು ಮಾತನಾಡಿರುವ ಕೇಂದ್ರದ ಭಾರೀ ಕೈಗಾರಿಕೆಗಳು ಮತ್ತು ಉಕ್ಕು ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು, ಹಲವಾರು ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ಗೆ ಬಂದಿದೆ. ಎಲ್ಲರಲ್ಲೂ ದೊಡ್ಡಮಟ್ಟದ ನಿರೀಕ್ಷೆ ಇದ್ದು ಫೈನಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಪ್ರಶಸ್ತಿ ಪಡೆಯಲಿ. ತಂಡದಲ್ಲಿ ಎಲ್ಲರು ಅತ್ಯುತ್ತಮ ಪ್ರದರ್ಶನ ನೀಡಲಿ. ಫೈನಲ್ನಲ್ಲಿ ಕಪ್ ಪಡೆಯುವಂತಹ ಎಲ್ಲ ಆಟಗಾರರ ಶ್ರಮದಿಂದ ಯಶಸ್ಸು ಕಾಣಲಿ ಎಂದು ನಾನು ಕೂಡ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮ್ಯಾಕ್ಸ್ವೆಲ್ ಬೆನ್ನಲ್ಲೇ ಕ್ರಿಕೆಟ್ಗೆ ಹೆನ್ರಿಚ್ ಕ್ಲಾಸೆನ್ ಗುಡ್ಬೈ.. ನಿವೃತ್ತಿಗೆ ವಿಕೆಟ್ ಕೀಪರ್ ಕೊಟ್ಟ ಕಾರಣ?
ಈ ಬಗ್ಗೆ ತಮ್ಮ ಪಕ್ಷದ ಎಕ್ಸ್ ಖಾತೆಯಲ್ಲಿ ವಿಡಿಯೋ ಸಮೇತ ಹೆಚ್.ಡಿ ಕುಮಾರಸ್ವಾಮಿ ಅವರು ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲಲಿ. ನಾಯಕ ರಜತ್ ಪಾಟಿದಾರ್ ಹಾಗೂ ವಿರಾಟ್ ಕೊಹ್ಲಿ ಸೇರಿ ಎಲ್ಲರು ಉತ್ತಮವಾಗಿ ಆಡಲಿ. ಐಪಿಎಲ್ ಫೈನಲ್ ತಲುಪಿರುವ ಆರ್‌ಸಿಬಿ ತಂಡ ಗೆದ್ದು ಬರಲಿ ಎಂದು ಬರೆಯಲಾಗಿದೆ.
ಇನ್ನು ಪಂಜಾಬ್ ಹಾಗೂ ಆರ್‌ಸಿಬಿ ನಡುವಿನ ಫೈನಲ್ ಪಂದ್ಯ ಇಂದು ಸಂಜೆ 7:30ಕ್ಕೆ ನಡೆಯಲಿದೆ. ಫೈನಲ್ ಪಂದ್ಯವಾಗಿದ್ದರಿಂದ ಈಗಾಗಲೇ ಟಿಕೆಟ್ಗಳೆಲ್ಲಾ ಸೋಲ್ಡ್ ಔಟ್ ಆಗಿವೆ. ದುಬಾರಿ ಬೆಲೆಗಳಲ್ಲಿ ಐಪಿಎಲ್ ಟಿಕೆಟ್ ಮಾರಾಟ ಆಗಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವುದರಿಂದ ನರೇಂದ್ರ ಮೋದಿ ಸ್ಟೇಡಿಯಂ ಎಲ್ಲ ಭರ್ತಿಯಾಗಲಿದೆ. 1,30,000 ಜನ ಒಂದೇ ಬಾರಿಗೆ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಣೆ ಮಾಡಲಿದ್ದಾರೆ.
ಹಲವಾರು ವರ್ಷಗಳ ಬಳಿಕ ನಮ್ಮ ಆರ್‌ಸಿಬಿ ತಂಡ ಪೈನಲ್ಸ್ ತಲುಪಿದ್ದು, ಎಲ್ಲರ ನಿರಿಕ್ಷೇಯಂತೆ ಈ ಬಾರಿ ಪ್ರಶಸ್ತಿಯನ್ನು ಪಡೆಯಲಿ ಎಂದು ಶುಭ ಹಾರೈಸುವೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.@hd_kumaraswamy@RCBTweets#HDKumaraswamy#RCB#RCBTeam#RCBMatch#RCBFinalsMatch#IPL2025#newsfirslivepic.twitter.com/wWfppFVpSS
— NewsFirst Kannada (@NewsFirstKan)
ಹಲವಾರು ವರ್ಷಗಳ ಬಳಿಕ ನಮ್ಮ ಆರ್‌ಸಿಬಿ ತಂಡ ಪೈನಲ್ಸ್ ತಲುಪಿದ್ದು, ಎಲ್ಲರ ನಿರಿಕ್ಷೇಯಂತೆ ಈ ಬಾರಿ ಪ್ರಶಸ್ತಿಯನ್ನು ಪಡೆಯಲಿ ಎಂದು ಶುಭ ಹಾರೈಸುವೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.@hd_kumaraswamy@RCBTweets#HDKumaraswamy#RCB#RCBTeam#RCBMatch#RCBFinalsMatch#IPL2025#newsfirslivepic.twitter.com/wWfppFVpSS
— NewsFirst Kannada (@NewsFirstKan) June 2, 2025
">June 2, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ