/newsfirstlive-kannada/media/post_attachments/wp-content/uploads/2024/06/HD-Kumaraswamy-Darshan.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣ ರಾಜಕೀಯ ವಲಯದಲ್ಲೂ ಸಾಕಷ್ಟು ಸದ್ದು ಮಾಡಿದೆ. ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರೋ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಇತಿಹಾಸದಲ್ಲಿ ಈ ರೀತಿಯ ಘಟನೆ ಎಂದೂ ನೋಡಿಲ್ಲ. ಈ ಸರ್ಕಾರಕ್ಕೆ ಗೌರವ ಇದ್ದರೆ ಆಡಳಿತ ಸರಿಪಡಿಸಿಕೊಳ್ಳಲಿ ಎಂದು ಎಚ್ಚರಿಸಿದ್ದಾರೆ.
ನಟ ದರ್ಶನ್ ಕೇಸ್ ಒಂದರ ಬಗ್ಗೆ ನಾನು ಚರ್ಚೆ ಮಾಡಲ್ಲ. ರಾಜ್ಯದಲ್ಲಿ ಅದೇ ರೀತಿಯ ಹಲವು ಘಟನೆಗಳು ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಪ್ರತಿದಿನ ಮಾನವ ಜೀವನದ ಬಗ್ಗೆ ಜೀವ ತೆಗೆಯೋದ್ರಲ್ಲಿ ಭಯವೇ ಹೊರಟು ಹೋಗಿದೆ. ಅದಕ್ಕೆ ಕಾರಣವೇ ಈ ಸರ್ಕಾರದ ಆಡಳಿತ ಎಂದು ಗುಡುಗಿದ್ದಾರೆ.
ದರ್ಶನ್ ಅವರ ಒಂದು ಘಟನೆಯನ್ನು ಯಾಕೆ ಮಾತಾಡಬೇಕು. ರಾಜ್ಯದಲ್ಲಿ ಒಂದಿಲ್ಲೊಂದು ಕೊಲೆ ಘಟನೆಗಳು ನಡೆಯುತ್ತಿವೆ. ವೈಯಕ್ತಿಕ ಕಾರಣ ಇರಬಹುದು. ಆ ಕಾರಣದಿಂದ ಕೊಲೆ ಮಾಡೋದು ಎಷ್ಟು ಸುಲಭವಾಗಿದೆ ರಾಜ್ಯದಲ್ಲಿ. ಮೊದಲು ಈ ರೀತಿ ಇತ್ತಾ? ಇದಕ್ಕೆ ಕಾರಣವೇ ಈ ಸರ್ಕಾರದ ನಡೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: ದರ್ಶನ್ ಅರೆಸ್ಟ್ ಕೇಸ್.. ಪೊಲೀಸರಿಗೆ ಶರಣಾದ ದಿನವೇ ತಂದೆಗೆ ಹೃದಯಾಘಾತ; ಅಮಾಯಕರ ಮನೆಯಲ್ಲಿ ಆಕ್ರಂದನ
ಇನ್ನು ಪೊಲೀಸ್ ಅಧಿಕಾರಿಗಳು ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ನೇಮಕವಾಗಲು ಹಣ ಕೊಟ್ಟಿ ಬಂದಿರೋದು ಸಂಪಾದನೆ ಮಾಡೋಕೆ ಹೀಗೆ ಮಾಡ್ತಿದ್ದಾರೆ. ಆಡಳಿತ ಸಂಪೂರ್ಣ ಕುಸಿದಿದೆ. ಪೊಲೀಸ್ ಸ್ಟೇಷನ್‌ಗೆ ಶಾಮಿಯಾನ ಹಾಕೋ ಘಟನೆ ಇತಿಹಾದಲ್ಲಿ ಆಗಿರಲಿಲ್ಲ. ಯಥಾ ರಾಜಾ ತಥಾ ಪ್ರಜೆ ರೀತಿ ಈ ಸರ್ಕಾರದ ನಡವಳಿಕೆ ಆಗಿದೆ. ಈ ಸರ್ಕಾರಕ್ಕೆ ಏನಾದ್ರು ಕಿಂಚಿತ್ತೂ ಗೌರವ ಇದ್ದರೆ ಆಡಳಿತ ಸರಿಪಡಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ