ರಾಜ್ಯದ ರೈತರಿಗೆ ಸಿಹಿ ಸುದ್ದಿ.. ಕೇಂದ್ರ ಸಚಿವರ ಭೇಟಿ ಬೆನ್ನಲ್ಲೇ ಬೊಮ್ಮಾಯಿ ಮಹತ್ವದ ಮಾಹಿತಿ..!

author-image
Ganesh
Updated On
ಈಶ್ವರಪ್ಪಗೆ ನನ್ನ ಮೇಲೆ ಬೇಸರ ಇಲ್ಲ ಎಂದು ಭಾವಿಸಿದ್ದೇನೆ; ಕಾಂತೇಶ್​​ಗೆ ಟಿಕೆಟ್ ಮಿಸ್​ ಆಗಿದ್ಕೆ ಬೊಮ್ಮಾಯಿ ಹೇಳಿದ್ದೇನು?
Advertisment
  • ರಾಜ್ಯದಲ್ಲಿ ಯೂರಿಯಾ ಬರ.. ಕೆಂಡದಂತಾದ ರೈತ!
  • ರಸಗೊಬ್ಬರಕ್ಕಾಗಿ ಜೋಶಿ ಕೇಂದ್ರ ಸಚಿವರ ಮೊರೆ
  • ಭೇಟಿ ಬಳಿಕ ಬಸವರಾಜ್ ಬೊಮ್ಮಾಯಿ ಏನಂದ್ರು..?

ರೈತ ಬಿತ್ತಿದ ಬೆಳೆಗೆ ಗೊಬ್ಬರದ ಅಭಾವ ಕಾಣಿಸಿದೆ. ಊರೂರಲ್ಲೂ ಯೂರಿಯಾ ಉರಿ ಹೊತ್ತಿಕೊಳ್ಳುವ ಭೀತಿ ಸೃಷ್ಟಿಯಾಗಿದೆ. ರಾತ್ರಿಯಿಡಿ ಪಾಳಿ ಹಚ್ಚಿದ್ರೂ ಮಿಡಿ ಮಾವಿನಷ್ಟು ಗೊಬ್ಬರ ಸಿಗ್ತಿಲ್ಲ. ಇದೀಗ ರಸಗೊಬ್ಬರ ನೀಡುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ರಸಗೊಬ್ಬರ ಸಚಿವರ ಭೇಟಿ ಮಾಡಿ ಯೂರಿಯಾ ಬರ ನೀಗಿಸುವಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ ರೈತರ ಹೋರಾಟ ಮುಂದುವರಿದಿದೆ..

ನೇಗಿಲ ಕುಳದೊಳು ಅಡಗಿದೆ ಕರ್ಮ.. ನೇಗಿಲ ಮೇಲೆಯೇ ನಿಂತಿದೆ ಧರ್ಮ.. ನೆತ್ತಿಯ ಮೇಲೆ ಬಿಸಿಲು-ಮಳೆ-ಗಾಳಿ ಎನ್ನದೇ, ಮಣ್ಣಿನ ಮೈಗೆ ಹಸಿರು ಹೊದಿಸಲು, ಹಿಡಿ ಗೊಬ್ಬರಕ್ಕಾಗಿ ಬೊಗಸೆ ಕಣ್ಣುಗಳು ಕಾದು ನಿಂತಿವೆ.. ಅತ್ತ ಭೂಮಿ ಬಿಕ್ಕುತ್ತಿದ್ರೆ, ಇತ್ತ ಇಡೀ ದಿನವೇ ಕಾದಿದ್ರೂ ಯೂರಿಯಾ ಗೊಬ್ಬರ ಸಿಗದೇ ರೈತ ಕಂಗಾಲಾಗಿದ್ದಾನೆ.

ಇದನ್ನೂ ಓದಿ: ದರ್ಶನ್ ಫ್ಯಾನ್ಸ್​​ ವಿರುದ್ಧ ಕಮಿಷನರ್​​ಗೆ ದೂರು ಕೊಟ್ಟ ರಮ್ಯಾ.. ವಿಜಯಲಕ್ಷ್ಮಿ, ರಕ್ಷಿತಾ ಪೋಸ್ಟ್​ ಬಗ್ಗೆ ನಟಿ ಏನಂದ್ರು?

publive-image

ರಾಜ್ಯದಲ್ಲಿ ಯೂರಿಯಾ ಬರ.. ಕೆಂಡದಂತಾದ ರೈತ!

ಈ ಬಾರಿ ಮುಂಗಾರು ಹದವಾಗಿ ಹುಯ್ದಿದೆ. ವರುಣನ ಕೃಪೆಗೆ ತಿಂಗಳಲ್ಲೆ ಕೆರೆಕಟ್ಟೆಗಳು ತುಂಬಿ, ಭೂಮಿಗೆ ಆ ಭಗವಂತ ಜೀವ ತುಂಬಿದ್ದಾನೆ. ಬೀಜ, ರಸಗೊಬ್ಬರ ದರದ ಏರಿಕೆಯ ನಡುವೆಯೂ, ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಆತಂಕಕ್ಕೆ ಬಿದ್ದಿದ್ದಾರೆ. ಮೊಳಕೆಯೊಡೆದ ಬಿತ್ತಿದ ಬೀಜಕ್ಕೆ, ಯೂರಿಯಾ ಅಭಾವ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಇದ್ರ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದ ಬಿಜೆಪಿ ಸಂಸದರ ನಿಯೋಗ, ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆ.ಪಿ.ನಡ್ಡಾರನ್ನ ಭೇಟಿ ಮಾಡಿತ್ತು. ಈ ವೇಳೆ ಅಗತ್ಯ ಯೂರಿಯಾ ಗೊಬ್ಬರವನ್ನ ಕರ್ನಾಟಕಕ್ಕೆ ಸರಬರಾಜು ಮಾಡುವಂತೆ ಬಿಜೆಪಿ ಸಂಸದರ ನಿಯೋಗ ಮನವಿ ಮಾಡ್ತು.

ಇದನ್ನೂ ಓದಿ: ಭಾರತದಲ್ಲೇ ಮೊಟ್ಟ ಮೊದಲ ಕೇಸ್​; ಮಹಿಳೆಯ ಗರ್ಭಕೋಶದ ಬದಲಿಗೆ ಲಿವರ್​ನಲ್ಲಿ ಬೆಳೆಯುತ್ತಿರೋ ಭ್ರೂಣ!

ಯೂರಿಯಾಗೆ ಮನವಿ

ಕೇಂದ್ರದಿಂದ ಕರ್ನಾಟಕಕ್ಕೆ 1 ಲಕ್ಷದ 65 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನ ಸರಬರಾಜು ಮಾಡಲಾಗಿದೆ. ಸರಬರಾಜು ಆಗಿರುವ ಯೂರಿಯಾವನ್ನ ಸಂಗ್ರಹ ರಾಜ್ಯ ಸರ್ಕಾರ ಸಂಗ್ರಹ ಮಾಡಿದೆ. ಈಗಾಗಲೇ ರೈತರಿಗೆ ಬೇಕಾದ ಯೂರಿಯಾವನ್ನ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ನೀಡಿದೆ. ಆದ್ರೀಗ ಮತ್ತಷ್ಟು ಯೂರಿಯಾದ ಬೇಡಿಕೆ ಹೆಚ್ಚಾಗಿದೆ ಅಂತ ಬಿಜೆಪಿ ಸಂಸದರ ನಿಯೋಗ ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆ.ಪಿ ನಡ್ಡಾರಿಗೆ ಮನವರಿಕೆ ಮಾಡಿದೆ. ಅಗತ್ಯ ಯೂರಿಯಾವನ್ನ ಕರ್ನಾಟಕಕ್ಕೆ ಸರಬರಾಜು ಮಾಡುವಂತೆ ಮನವಿ ಮಾಡಿದೆ.

1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕೊಡಲು ಕೇಂದ್ರ ಒಪ್ಪಿದೆ

ಬಿಜೆಪಿ ಸಂಸದರ ನಿಯೋಗ ಜೆ.ಪಿ. ನಡ್ಡಾರನ್ನ ಭೇಟಿ ಮಾಡಿದ ಬಳಿಕ ರೈತರಿಗೆ ಸಿಹಿಸುದ್ದಿ ನೀಡಿದೆ. ರಾಜ್ಯಕ್ಕೆ ಅಗತ್ಯವಾದ ಯೂರಿಯಾವನ್ನ ಕೇಂದ್ರ ಸರ್ಕಾರ ನೀಡಲು ಒಪ್ಪಿದೆ ಎಂಬ ಮಾಹಿತಿಯನ್ನ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 1 ಲಕ್ಷದ 35 ಸಾವಿರ ಮೆಟ್ರಿಕ್ ಟನ್ ಯೂರಿಯಾ ನೀಡಲು ಕೇಂದ್ರ ಒಪ್ಪಿದೆ ಅಂತ ಬೊಮ್ಮಾಯಿ ತಿಳಿಸಿದ್ದಾರೆ. ಇತ್ತ ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಯೂರಿಯಾ ಸಿಕ್ತಿಲ್ಲ ಅಂತ ಮಾಜಿ ಸಚಿವ ಬಿ. ಶ್ರೀರಾಮುಲು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ಅನ್ನದಾತರ ಬೆಳೆಗೆ ಸರಿಯಾದ ಗೊಬ್ಬರದ ಅವಶ್ಯಕತೆ ಇದೆ. ಹೀಗಾಗಿ ರೈತರು ಯೂರಿಯಾಗಾಗಿ ಕಿಚ್ಚು ಹೊತ್ತಿಸುವ ನಿರ್ಧಾರಕ್ಕೆ ಕೈಹಾಕಿದ್ದಾರೆ. ಕೊಪ್ಪಳದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಯೂರಿಯಾ ಗೊಬ್ಬರಕ್ಕೆ ಆಗ್ರಹಿಸಿ ಆಗಸ್ಟ್ 1ರಂದು ಬಂದ್‌ಗೆ ಕರೆ ನೀಡಲಾಗಿದೆ. ಅಷ್ಟರಲ್ಲಿ ಕೇಂದ್ರ ಸರ್ಕಾರ ಯೂರಿಯಾವನ್ನ ಪೂರೈಕೆ ಮಾಡಿದ್ರೆ ರೈತರ ಕಿಚ್ಚು ಶಮನ ಆಗ್ಬಹುದೇನೋ?

ಇದನ್ನೂ ಓದಿ: ಅಪಾಯದ ಸೂಚನೆ ನೀಡ್ತಿವೆ ರಾಜ್ಯದ ನದಿಗಳು.. KRS, ಕಬಿನಿ ಸೇರಿ ವಿವಿಧ ಡ್ಯಾಮ್​​ಗಳಿಂದ ಭಾರೀ ನೀರು ರಿಲೀಸ್​..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment