ಕಾಂಗ್ರೆಸ್‌ಗೆ ಕೌಂಟರ್‌ ಕೊಡಲು ರಿವರ್ಸ್‌ ಆಪರೇಷನ್‌?; ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಶೋಭಾ ಕರಂದ್ಲಾಜೆ ಆಫರ್‌

author-image
admin
Updated On
ಕಾಂಗ್ರೆಸ್‌ಗೆ ಕೌಂಟರ್‌ ಕೊಡಲು ರಿವರ್ಸ್‌ ಆಪರೇಷನ್‌?; ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಶೋಭಾ ಕರಂದ್ಲಾಜೆ ಆಫರ್‌
Advertisment
  • ಬಿಜೆಪಿ ಪಕ್ಷಕ್ಕೆ ಹೋಗಿದ್ದವರು ಕಾಂಗ್ರೆಸ್‌ ಪಕ್ಷಕ್ಕೆ ವಾಪಸ್ ಆಗ್ತಾರಾ?
  • ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋದವರು ಮರಳಿ ಗೂಡಿಗೆ ಬರ್ತಾರಾ?
  • ಲೋಕಸಭಾ ಎಲೆಕ್ಷನ್ ದೃಷ್ಟಿಯಿಂದ ಬಿಜೆಪಿಯಿಂದ ಕೌಂಟರ್ ಪ್ಲಾನ್

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿಗೆ ಹೋಗಿದ್ದವರು ಕಾಂಗ್ರೆಸ್‌ ಪಕ್ಷಕ್ಕೆ ವಾಪಸ್ ಆಗ್ತಾರೆ ಅನ್ನೋ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕರು ಕೆಲ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕ ಸಮರಕ್ಕೂ ಮುನ್ನ ಆಪರೇಷನ್ ಹಸ್ತದ ಸುಳಿವು ಸಿಕ್ತಿದ್ದಂತೆ ಬಿಜೆಪಿ ನಾಯಕರು ಅಲರ್ಟ್‌ ಆಗಿದ್ದಾರೆ. ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೋಗದಂತೆ ತಡೆಯಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪಕ್ಷ ಬಿಟ್ಟು ಹೋದವರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದಾರೆ.

[caption id="attachment_14019" align="aligncenter" width="800"]publive-image ಚಿಕ್ಕಮಗಳೂರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಟಿ[/caption]

ಕಾಂಗ್ರೆಸ್‌ಗೆ ಕೌಂಟರ್‌ ಕೊಡಲು ಬಿಜೆಪಿಯಿಂದ ಘಟಾನುಘಟಿ ನಾಯಕರನ್ನು ಸೆಳೆಯುವ ತಂತ್ರಗಾರಿಕೆ ಆರಂಭವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿಗೆ ಪರೋಕ್ಷ ಆಹ್ವಾನ ಕೊಟ್ಟಿದ್ದಾರೆ. ಬಿಜೆಪಿ ಬಿಟ್ಟೋದವರು ಮತ್ತೆ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ. ಮೋದಿಗಾಗಿ ಯಾರು ಬೇಕಾದರೂ ಬಿಜೆಪಿಗೆ ಬರಬಹುದು. ಮೋದಿಗಾಗಿ, ದೇಶಕ್ಕಾಗಿ, ಮುಂದಿನ ಪೀಳಿಗೆಗಾಗಿ ಅವರು ಬಿಜೆಪಿ ಬರಲಿ ಎಂದಿದ್ದಾರೆ.

ಇದನ್ನೂ ಓದಿ: ಸುಮಲತಾ ಅಂಬರೀಶ್​ಗೆ ಕಾಂಗ್ರೆಸ್​ನಿಂದ ಬಿಗ್​ ಆಫರ್​​? ಈ ಬಗ್ಗೆ ಮಂಡ್ಯ ಸಂಸದೆ ಏನಂದ್ರು?

ಚಿಕ್ಕಮಗಳೂರಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು ಪ್ರಧಾನಿ ಮೋದಿಗಾಗಿ, ಯಾರೇ ಪಕ್ಷ ಬಿಟ್ಟು ಹೋದವರು ವಾಪಸ್ ಬಂದ್ರೆ ಸ್ವಾಗತವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷ ಬಿಟ್ಟು ಹೋದವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಹುಡುಕಿದರೂ ಯಾವುದೇ ಪ್ರಬಲ ವಿರೋಧ ಪಕ್ಷಗಳಿಲ್ಲ. ಮೋದಿಯಂತಹ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಯಾರೇ ಪಾರ್ಟಿ ಬಿಟ್ಟು ಹೋದರೂ ವಾಪಸ್ ಬರಲು ವಿನಂತಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಶಾಸಕರು, ಮುಖಂಡರು ಪಕ್ಷ ಸೇರಿದ್ದರು. ಅವರಿಗೆ ಬಿಜೆಪಿ ಅತ್ಯಂತ ಗೌರವದಿಂದ ನಡೆದುಕೊಂಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಅವರಿಗೆ ದೊಡ್ಡ, ದೊಡ್ಡ ಖಾತೆ ಕೊಟ್ಟಿತ್ತು. ಅವರನ್ನ ದೊಡ್ಡ-ದೊಡ್ಡ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡಿದೆ. ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ ಅವರನ್ನ ತೊಡಗಿಸಿಕೊಳ್ಳಲಾಗಿತ್ತು. ಇವತ್ತು ಸರ್ಕಾರ ಇಲ್ಲ, ಬಿಜೆಪಿ ಸೋತಿದೆ. ಆ ಸೋಲಿನಲ್ಲಿ ಎಲ್ಲರ ಪಾಲೂ ಇದೆ. ಮತ್ತೆ ಬಿಜೆಪಿಯನ್ನ ಕಟ್ಟಬೇಕು. ಅಧಿಕಾರಕ್ಕಾಗಿ ಬಂದ್ರು, ಅಧಿಕಾರ ಇಲ್ಲದಾಗ ಹೋದ್ರು ಎಂಬ ಕೆಟ್ಟ ಹೆಸರನ್ನ ಯಾರೂ ತೆಗೆದುಕೊಳ್ಳಲ್ಲ ಅನ್ನೋ ವಿಶ್ವಾಸವಿದೆ. ಅಧಿಕಾರ ಇದ್ದಾಗ ಎಲ್ಲಾ ಅನುಭವಿಸಿದ್ದೇವೆ. ಈಗ ಬಿಜೆಪಿಯನ್ನ ಗಟ್ಟಿ ಮಾಡಬೇಕಿದೆ. ಪಕ್ಷ ಬಿಟ್ಟು ಹೋದವರನ್ನ ಮತ್ತೆ ಜೊತೆಗೆ ಸೇರಿಸಿಕೊಂಡು ಬಿಜೆಪಿಯನ್ನ ಗಟ್ಟಿ ಮಾಡಬೇಕು ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಈ ಮೂಲಕ ಲೋಕಸಭಾ ಎಲೆಕ್ಷನ್ ದೃಷ್ಟಿಯಿಂದ ಕೌಂಟರ್ ಆಪರೇಷನ್​ಗೆ ಮುಂದಾಗಿದ್ಯಾ ಕಮಲಪಾಳಯ ಅನ್ನೋ ಚರ್ಚೆಗಳು ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment