Advertisment

ಬರೋಬ್ಬರಿ 155 ನಿಮಿಷ.. ಪ್ರಧಾನಿ ಮೋದಿ 3.O ಸಂಪುಟ ಸೇರಿದ ಒಟ್ಟು ಕೇಂದ್ರ ಸಚಿವರು ಎಷ್ಟು?

author-image
admin
Updated On
ಬರೋಬ್ಬರಿ 155 ನಿಮಿಷ.. ಪ್ರಧಾನಿ ಮೋದಿ 3.O ಸಂಪುಟ ಸೇರಿದ ಒಟ್ಟು ಕೇಂದ್ರ ಸಚಿವರು ಎಷ್ಟು?
Advertisment
  • ಸತತ 3ನೇ ಬಾರಿ ಭಾರತದ ಪ್ರಧಾನಿಯಾದ ದಾಖಲೆ ಬರೆದ ಮೋದಿ
  • 30 ಮಂದಿ ಮೋದಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕಾರ
  • ಅತ್ಯಂತ ಅನುಭವಿ ನಾಯಕರನ್ನೇ ಸಂಪುಟಕ್ಕೆ ಆಯ್ಕೆ ಮಾಡಿಕೊಂಡ ಮೋದಿ

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಮೋದಿ ಪದಗ್ರಹಣದ ಅದ್ಧೂರಿ ಸಮಾರಂಭ ನಡೀತು. ಮಾಜಿ ಪ್ರಧಾನಿ ಜವಹಾರ್ ಲಾಲ್‌ ನೆಹರು ಅವರನ್ನು ಹೊರೆತುಪಡಿಸಿ ಸತತ 3ನೇ ಬಾರಿ ಭಾರತದ ಪ್ರಧಾನಿಯಾದ ದಾಖಲೆಯನ್ನು ಮೋದಿ ಬರೆದಿದ್ದಾರೆ.

Advertisment

ರಾಷ್ಟ್ರಪತಿ ಭವನದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬರೋಬ್ಬರಿ 155 ನಿಮಿಷಗಳ ಕಾಲ ನಡೆಯಿತು. ಸಂಜೆ 7.15ಕ್ಕೆ ಆರಂಭವಾದ ಪದಗ್ರಹಣ ಕಾರ್ಯ ರಾತ್ರಿ 9.50ಕ್ಕೆ ಮುಕ್ತಾಯವಾಯಿತು.

publive-image

ನರೇಂದ್ರ ಮೋದಿ ಅವರ 3.O ಕ್ಯಾಬಿನೆಟ್‌ನಲ್ಲಿ ಪ್ರಧಾನಿ ಅವರನ್ನು ಸೇರಿ ಬರೋಬ್ಬರಿ 72 ಮಂದಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 71ರಲ್ಲಿ 30 ಮಂದಿ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. 5 ಮಂದಿ ರಾಜ್ಯ ಸ್ವತಂತ್ರ ಖಾತೆಯ ಕೇಂದ್ರ ಸಚಿವರಾಗಿದ್ರೆ, 36 ಮಂದಿ ರಾಜ್ಯ ಖಾತೆಯ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ.

publive-image

ಪ್ರಧಾನಿ ಮೋದಿ ಅವರ ನೂತನ ಸರ್ಕಾರದ ಸಂಪುಟದಲ್ಲಿ 24 ರಾಜ್ಯದ ವಿವಿಧ ಸಮುದಾಯಕ್ಕೆ ಸೇರಿದ ನಾಯಕರಿಗೆ ಅವಕಾಶ ನೀಡಲಾಗಿದೆ. 27 ಹಿಂದುಳಿದ ವರ್ಗ, 10 ಪರಿಶಿಷ್ಟ ಜಾತಿ, 5 ಪರಿಶಿಷ್ಟ ವರ್ಗ, 5 ಅಲ್ಪಸಂಖ್ಯಾತರು, 18 ಹಿರಿಯ ಸಚಿವರಿಗೆ ಅವಕಾಶ ನೀಡಲಾಗಿದೆ.

Advertisment

ಇದನ್ನೂ ಓದಿ:ನರೇಂದ್ರ ಮೋದಿ 3.O ದರ್ಬಾರ್‌.. ಅದ್ಧೂರಿ ಪದಗ್ರಹಣ ಸಮಾರಂಭದ ಟಾಪ್ 10 ಫೋಟೋ ಇಲ್ಲಿವೆ 

ಎನ್‌ಡಿಎ ಸರ್ಕಾರದಲ್ಲಿ 11 NDA ಮಿತ್ರಪಕ್ಷದ ನಾಯಕರಿಗೆ ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ. 43 ಸಚಿವರು 3ಕ್ಕೂ ಹೆಚ್ಚು ಬಾರಿ ಸಂಸತ್‌ಗೆ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಲಾಗಿದೆ. 39 ಸಚಿವರು ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಹಲವು ಮಾಜಿ ಸಿಎಂಗಳು, ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ನಿಭಾಯಿಸಿದ ಅನುಭವಿಗಳನ್ನೇ ನರೇಂದ್ರ ಮೋದಿ ಅವರ ಸಂಪುಟಕ್ಕೆ ಆಯ್ಕೆ ಮಾಡಲಾಗಿದೆ.

ಮೊದಲ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 71 ಕೇಂದ್ರ ಸಚಿವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ಸರ್ಕಾರದಲ್ಲಿ ಒಟ್ಟು 80 ಮಂದಿ ಕೇಂದ್ರ ಸಚಿವರನ್ನು ಆಯ್ಕೆ ಮಾಡಲು ಅವಕಾಶವಿದೆ. ಇನ್ನು 8 ಸಚಿವ ಸ್ಥಾನಗಳು ಖಾಲಿ ಇದ್ದು ಮಿತ್ರಪಕ್ಷದ ನಾಯಕರ ಬೇಡಿಕೆ ಮೇರೆಗೆ ಸಚಿವ ಸ್ಥಾನ ಹಂಚಲು ಬಿಜೆಪಿ ನಾಯಕರು ತೀರ್ಮಾನ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment