ಟೇಕ್​ಆಫ್​ ಆಗುತ್ತಿದ್ದಂತೆ ಹೊತ್ತಿ ಉರಿದ ವಿಮಾನ; ಆಮೇಲಾಗಿದ್ದೇನು?VIDEO

author-image
Gopal Kulkarni
Updated On
ಟೇಕ್​ಆಫ್​ ಆಗುತ್ತಿದ್ದಂತೆ ಹೊತ್ತಿ ಉರಿದ ವಿಮಾನ; ಆಮೇಲಾಗಿದ್ದೇನು?VIDEO
Advertisment
  • ಯುಎಸ್​ನಲ್ಲಿ ಕೊಂಚದರಲ್ಲಿ ತಪ್ಪಿದ ಮತ್ತೊಂದು ವಿಮಾನ ದುರಂತ
  • ಟೇಕಾಫ್ ಆಗಿದ್ದ ವಿಮಾನದಲ್ಲಿ ಇಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ
  • ಹೌಸ್ಟನ್​ನಿಂದ ನ್ಯೂಯಾರ್ಕ್​​ಗೆ ಹೊರಟಿದ್ದ ಯುಎಸ್ ಏರ್​ಲೈನ್ಸ್​

ಇತ್ತೀಚಿನ ಕೆಲ ದಿನದಳಿಂದ ಅಮೆರಿಕಾದಲ್ಲಿ ವಿಮಾನ ಪತನಗಳ ಹಾಗೂ ವಿಮಾನ ಅವಘಡಗಳ ಸುದ್ದಿಯೇ ಜಾಸ್ತಿ ಓಡಾಡುತ್ತಿವೆ. ಈಗ ಅಂತಹ ಮತ್ತೊಂದು ಪ್ರಕರಣ ಯುಎಸ್​ನ ನ್ಯೂಯಾರ್ಕ್​ನಲ್ಲಿ ನಡೆದಿದೆ. ಅಮೆರಿಕಾದ ಕಾಲಮಾನದ ಪ್ರಕಾರ ರವಿವಾರ ಮುಂಜಾನೆ ಯುನೈಟೆಡ್ ಏರ್​​ಲೈನ್ಸ್​ ವಿಮಾನ ಹೌಸ್ಟನ್​ನಿಂದ ನ್ಯೂಯಾರ್ಕ್​ಗೆ ಹೊರಟಿತ್ತು. ಇನ್ನೇನು ಟೇಕ್​​ಆಫ್ ಆಗಬೇಕು ಎನ್ನುವಷ್ಟರಲ್ಲಿ ವಿಮಾನ ಹೊತ್ತಿ ಉರಿಯಲು ಆರಂಭಿಸಿತು. ಎಫ್ಎಎ ಹೇಳುವ ಪ್ರಕಾರ ಇದು ಯುಎಸ್​ನಲ್ಲಿ ನಡೆದ ಎರಡು ಭಯಾನಕ ವಿಮಾನ ಅಪಘಾತದ ಎರಡು ದಿನದ ಬಳಿಕ ನಡೆದ ಭೀಕರ ಘಟನೆಯಂತೆ.

ಇದನ್ನೂ ಓದಿ:ಅಮೆರಿಕಾದಲ್ಲಿ ಮತ್ತೊಂದು ಭೀಕರ ವಿಮಾನ ದುರಂತ; ಬೆಂಕಿಯ ಕೆನ್ನಾಲಿಗೆಗೆ ಜನವಸತಿ ಪ್ರದೇಶ ಸರ್ವನಾಶ

ಯುನೈಟೆಡ್ ಏರ್​​ಲೈನ್ಸ್ ಫ್ಲೈಟ್​​ 1382 ಜಾರ್ಜ್ ಬುಷ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್​ಆಪ್ ಆಗುವ ವೇಳೆ ಇಂಜಿನ್​ನಲ್ಲಿ ಸಮಸ್ಯೆ ಕಂಡು ಬಂದಿದ್ದರಿಂದ, ರವಿವಾರ ಮುಂಜಾನೆ 8.35ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ಕಿರುಚಾಟ ಮುಗಿಲುಮುಟ್ಟಿದೆ. ಈ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಫ್ಲೈಟ್ ಅಟೆಂಡಂಟ್​ ಪ್ರಯಾಣಿಕರಿಗೆ ನಿಮ್ಮ ಆಸನದಲ್ಲಿಯೇ ಕುಳಿತಿರಿ, ಏನಿಲ್ಲ, ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿರುವುದು ಕೇಳಿ ಬಮದಿದೆ. ಕೂಡಲೇ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುವ ಮೂಲಕ ಎಲ್ಲಾ ಪ್ರಯಾಣಿಕರನ್ನು ಸುರುಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.


">February 2, 2025

ಹೌಸ್ಟನ್ ಫೈರ್ ಇಲಾಖೆ ಹೇಳುವ ಪ್ರಕಾರ ಘಟನೆಯಲ್ಲಿ ಯಾರಿಗೂ ಕೂಡ ಸಣ್ಣ ಗಾಯಗಳು ಆಗಿಲ್ಲ. ವಿಮಾನದಲ್ಲಿ ಒಟ್ಟು 104 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿ ವಿಮಾನದಿಂದ ಇಳಿದಿದ್ದಾರೆ. ಯಾವುದೇ ರೀತಿಯ ಅನಾಹುತಗಳು ಘಟಿಸಿಲ್ಲ ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment