/newsfirstlive-kannada/media/post_attachments/wp-content/uploads/2025/03/UN.jpg)
ವಿಶ್ವಸಂಸ್ಥೆ (UN: United Nation) ಎರಡನೇ ಮಹಾಯುದ್ಧದ ನಂತರ 1945ರಲ್ಲಿ ಸ್ಥಾಪನೆಯಾದ ಅಂತರರಾಷ್ಟ್ರೀಯ ಸಂಸ್ಥೆ. ಜಗತ್ತಿನಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ಅದರ ಮುಖ್ಯ ಉದ್ದೇಶ. ವಿಶ್ವಸಂಸ್ಥೆಯು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತದೆ. ಪ್ರತಿ ವರ್ಷ ಲಕ್ಷಾಂತರ ಜನರು ಅದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ನೀವು ಕೂಡ ಪ್ರತಿಷ್ಠಿತ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಬಹುದು.
ಹೇಗೆ..?
ಪ್ರಪಂಚದ ಹಲವು ಭಾಗಗಳಲ್ಲಿ ವಿಶ್ವಸಂಸ್ಥೆಯ ಕಚೇರಿಗಳಿವೆ. ಪ್ರಧಾನ ಕಚೇರಿಯು ನ್ಯೂಯಾರ್ಕ್‌ನಲ್ಲಿದೆ. ವಿವಿಧ ಭಾಗಗಳಲ್ಲಿರುವ ಕಚೇರಿಗಳಲ್ಲಿ ಅನೇಕರು ಉದ್ಯೋಗದಲ್ಲಿದ್ದಾರೆ. UNನಲ್ಲಿ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಸಲಹಾ (Advice), ಇಂಟರ್ನ್‌ಶಿಪ್ ಮತ್ತು ಸ್ವಯಂಸೇವೆ (Volunteer ) ಸೇರಿವೆ. ವಿಶ್ವಸಂಸ್ಥೆಗೆ ಸ್ವಯಂಸೇವಕರ ಅಗತ್ಯವಿದೆ. ಇದಕ್ಕಾಗಿ ಅದು ಆಗಾಗ ಆನ್‌ಲೈನ್ ಮೂಲಕ ಖಾಲಿ ಹುದ್ದೆಗಳಿಗೆ ಪ್ರಕಟಣೆ ಹೊರಡಿಸುತ್ತದೆ. ಇನ್ನೊಂದು ವಿಚಾರ ಏನೆಂದರೆ ಆನ್‌ಲೈನ್ ಸ್ವಯಂಸೇವಕ ಕೆಲಸವನ್ನು ನೀವು ಮನೆಯಿಂದಲೂ ಮಾಡಬಹುದು.
ಉಚಿತವಾಗಿ ಅರ್ಜಿ ಸಲ್ಲಿಸಬಹುದು
UN ಆನ್‌ಲೈನ್ ಸ್ವಯಂಸೇವಕ ಕಾರ್ಯಕ್ರಮದ ದೊಡ್ಡ ಪ್ರಯೋಜನ ಏನೆಂದರೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರಲ್ಲ. ಆಯ್ಕೆಯಾದರೆ ವಿವಿಧ ಸಂಸ್ಥೆಗಳೊಂದಿಗೆ, ದೊಡ್ಡ ದೊಡ್ಡ ಪ್ರಾಜೆಕ್ಟ್ಗಳ ಜೊತೆಗೆ ಕೆಲಸ ಮಾಡುವ ಅವಕಾಶ ಸಿಗಲಿದೆ. ಆನ್‌ಲೈನ್ ಮೂಲಕ ನಡೆಯುವ ಸ್ವಯಂಸೇವಕ ಕೆಲಸವು ನಿಮ್ಮ ಅನೂಲಕ್ಕೆ ತಕ್ಕಂತೆ ಇರಲಿದೆ. ಅಂದರೆ ವೈಯಕ್ತಿಕ ವೇಳಾಪಟ್ಟಿಯಲ್ಲಿ ನೀವು ಕೆಲಸ ಮಾಡಬಹುದು. ಇದರಿಂದ ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಗೆ ಮತ್ತು ಅಂತರರಾಷ್ಟ್ರೀಯ ಅನುಭವ ಪಡೆಯಲು ಅವಕಾಶ ಸಿಗಲಿದೆ.
ವಿಶ್ವಸಂಸ್ಥೆಯಲ್ಲಿ ಅನೇಕ ಸಂಸ್ಥೆಗಳು..
ವಿಶ್ವಸಂಸ್ಥೆಯಲ್ಲಿ UNESCO, WHO, UNICEF ಮತ್ತು WFP ನಂತಹ ಅನೇಕ ಸಂಸ್ಥೆಗಳಿವೆ. ಒಂದು ವೇಳೆ ನೀವು ಆನ್‌ಲೈನ್ ಸ್ವಯಂಸೇವಕರಾಗಲು ಬಯಸಿದರೆ, app.unv.org ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಲ್ಲಿ ವಿವಿಧ ಸಂಸ್ಥೆಗಳಲ್ಲಿ ಲಭ್ಯವಿರುವ ಸ್ವಯಂಸೇವಕ ಹುದ್ದೆಗಳ ಕುರಿತು ಮಾಹಿತಿ ಸಿಗಲಿದೆ. ಅರ್ಜಿ ಸಲ್ಲಿಸುವ ವೇಳೆ ಆನ್‌ಲೈನ್ ಸ್ವಯಂಸೇವಕ (online volunteer ) ಆಯ್ಕೆಯನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಅಗತ್ಯವಿರುವ ಅರ್ಹತೆ ಪರಿಶೀಲಿಸಿ. ಕೆಲವು ಸ್ವಯಂ ಸೇವಕ ಕಾರ್ಯಕ್ರಮಗಳಲ್ಲಿ ಆರ್ಥಿಕ ಸಹಾಯ ಕೂಡ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ