ವೈಟ್​ಹೌಸ್​ ಬಳಿ ಭಾರೀ ಆತಂಕ.. ಶಸ್ತ್ರಸಜ್ಜಿತ ವ್ಯಕ್ತಿ ಮೇಲೆ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ!

author-image
Bheemappa
Updated On
ವೈಟ್​ಹೌಸ್​ ಬಳಿ ಭಾರೀ ಆತಂಕ.. ಶಸ್ತ್ರಸಜ್ಜಿತ ವ್ಯಕ್ತಿ ಮೇಲೆ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ!
Advertisment
  • ಅಮೆರಿಕದ ಶ್ವೇತಭವನದ ಮೇಲೆ ದಾಳಿಗೆ ಸಂಚು ನಡೆದಿತ್ತಾ?
  • ಶಸ್ತ್ರಸಜ್ಜಿತವಾಗಿ ವೈಟ್​ಹೌಸ್​ ಕಡೆಗೆ ಬರುತ್ತಿದ್ದ ವ್ಯಕ್ತಿ ಇನ್ನಿಲ್ಲ
  • ಪ್ರಾಣ ಕಳೆದುಕೊಂಡಿರುವ ವ್ಯಕ್ತಿ ಯಾರು, ಅಲ್ಲಿಗೆ ಬಂದಿದ್ದೇಗೆ?

ಯುಎಸ್​ ಸಿಕ್ರೇಟ್​ ಸರ್ವೀಸ್​ ಏಜೆಂಟ್​ ಅಧಿಕಾರಿಗಳು ಶ್ವೇತಭವನದ ಬಳಿ ಶಸ್ತ್ರಸಜ್ಜಿತ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಜೀವ ತೆಗೆದಿದೆ. ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇಲ್ಲದೇ ಇದ್ದಾಗ ಈ ಘಟನೆ ನಡೆದಿದ್ದು ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ಹೇಳಲಾಗಿದೆ​.

ಅಮೆರಿಕದ ಇಂಡಿಯಾನಾದಿಂದ ಶ್ವೇತಭವನದ ಕಡೆಗೆ ಪ್ರಯಾಣಿಸುತ್ತಿದ್ದ ಶಸ್ತ್ರಸಜ್ಜಿತ ವ್ಯಕ್ತಿಯನ್ನು ಯುಎಸ್​ ಸಿಕ್ರೇಟ್​ ಸರ್ವೀಸ್​ ಏಜೆಂಟ್ ಅಧಿಕಾರಿಗಳು ಗುರುತಿಸಿದ್ದಾರೆ. ಆತನ ಬಳಿ ಮಾರಕ ಶಸ್ತ್ರಗಳು ಇವೆ ಎಂದು ನಂಬಲಾಗಿದೆ. ಈ ಸಂಬಂಧ ಯುಎಸ್​ ಅಧಿಕಾರಿಗಳು ಗುಂಡು ಹಾರಿಸಿ ಆತನ ಪ್ರಾಣ ತೆಗೆದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಇನ್ನೊಬ್ಬ ಯುವತಿ ಜೊತೆ ಸ್ಟಾರ್ ಕ್ರಿಕೆಟರ್ ಚಹಲ್.. ಆ ಹುಡುಗಿ ಯಾರು?

publive-image

ಈ ಘಟನೆಯು ಶ್ವೇತಭವನದ ಬಳಿಯೇ ಮಧ್ಯರಾತ್ರಿ ನಡೆದಿದೆ. ಗುಂಡು ಹಾರಿಸುವಾಗ ಯಾವುದೇ ಅಧಿಕಾರಿ, ಜನರಿಗೆ ಯಾವುದೇ ಹಾನಿಯಾಗಿಲ್ಲ. ಶಸ್ತ್ರಗಳನ್ನು ಹೊಂದಿದವ ಮಧ್ಯವಯಸ್ಕನಾಗಿದ್ದನು. ಅಲ್ಲಿನ ಪೊಲೀಸ್ ಅಧಿಕಾರಿಗಳು ವ್ಯಕ್ತಿಯ ಕುರಿತು ಇನ್ನಷ್ಟು ತನಿಖೆ ಆರಂಭಿಸಿದ್ದಾರೆ. ಇನ್ನು ಈ ಘಟನೆ ನಡೆಯುವಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು ಫ್ಲೋರಿಡಾದಲ್ಲಿ ಇದ್ದರು ಎಂದು ಯುಎಸ್​ ಸಿಕ್ರೇಟ್​ ಸರ್ವೀಸ್​ ಏಜೆಂಟ್​ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment