/newsfirstlive-kannada/media/post_attachments/wp-content/uploads/2025/02/MAHAKUMBA-STAMP.jpg)
144 ವರ್ಷದ ಬಳಿಕ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭಕ್ತಾದಿಗಳು ಸಾಗರ, ಸಾಗರದಂತೆ ಹರಿದು ಬರುತ್ತಿದ್ದಾರೆ. ಸ್ಥಳೀಯ ಆಡಳಿತಕ್ಕೆ ನಿರ್ವಹಣೆ ಮಾಡುವುದೇ ಕಷ್ಟವಾಗಬೇಕು ಆ ಮಟ್ಟಿಗೆ ಭಕ್ತಾಕೋಟಿ ಪ್ರಯಾಗರಾಜ್ನತ್ತ ತೆರಳುತ್ತಿದ್ದಾರೆ. ಸರ್ಕಾರಿ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ಇನ್ನು ಎರಡು ಮೂರು ದಿನ ಪ್ರಯಾಗರಾಜ್ನತ್ತ ಪ್ರಯಾಣ ಬೆಳಸಬೇಡಿ ಈಗಾಗಲೇ ಭಕ್ತಕೋಟಿಯಿಂದ ಇದು ತುಂಬಿ ಹೋಗಿದೆ ಎಂದು ಹೇಳುವ ಮಟ್ಟಕ್ಕೆ ಜನರು ಸಾಗರೋಪಾದಿಯಲ್ಲಿ ಪ್ರಯಾಗರಾಜ್ನತ್ತ ಪವಿತ್ರ ಸ್ನಾನಕ್ಕೆ ಹರಿದು ಬರುತ್ತಿದ್ದಾರೆ.
ಪ್ರಯಾಗರಾಜ್ನ ಮಾಹಿತಿ ನಿರ್ದೇಶಕ ಶಿಶಿರ್ ಕುಮಾರ್ ಹೇಳುವ ಪ್ರಕಾರ ಈಗಾಗಲೇ ಅಂದ್ರೆ ಜನವರಿ 13 ರಿಂದ ಫೆಬ್ರುವರಿ 10ರವರೆಗೆ ಸುಮಾರು 43.57 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ದೇಶದ ಸುಮಾರು ಮೂರನೇ ಒಂದು ಭಾಗ ಜನಸಂಖ್ಯೆ ಕಳೆದ ಇಷ್ಟು ದಿನಗಳಲ್ಲಿ ಪ್ರಯಾಗ್ರಾಜ್ಗೆ ಭೇಟಿ ನೀಡಿ ಹೋಗಿದೆ. ಕೇವಲ 45 ದಿನಗಳಲ್ಲಿ ಇಷ್ಟೊಂದು ಭಕ್ತರು ಗಂಗೆಯಲ್ಲಿ ಮಿಂದು ಹೋಗಿದ್ದಾರೆ. ಮಹಾಕುಂಭ ಮುಗಿಯಲು ಇನ್ನೂ 16 ದಿನಗಳು ಬಾಕಿ ಇವೆ. ಅಲ್ಲಿಯವರೆಗೆ ಗಂಗೆಯಲ್ಲಿ ಪವಿತ್ರ ಸ್ನಾನ ಕೈಗೊಂಡವರ ಸಂಖ್ಯೆ ಸುಮಾರು 50 ಕೋಟಿಗೂ ಹೆಚ್ಚು ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕುಂಭಮೇಳದ ಆರಂಭದಲ್ಲಿ ಪ್ರಯಾಗರಾಜ್ಗೆ ಸುಮಾರು 40 ರಿಂದ 45 ಕೋಟಿ ಭಕ್ತಾದಿಗಳು ಭೇಟಿ ಕೊಡಬಹುದು ಎಂಬ ಊಹೆಯಿತ್ತು ಆ ಎಲ್ಲಾ ಊಹೆಗಳನ್ನು ಮೀರಿ ಭಕ್ತಕೋಟಿ ಪ್ರಯಾಗರಾಜ್ಗೆ ಆಗಮಿಸಿದೆ. ಹೀಗಾಗಿ ದಯವಿಟ್ಟು ನಿಮ್ಮ ಇಲ್ಲಿಗೆ ಈಗ ಬಂದಿರುವ ಭಕ್ತಾದಿಗಳು ತಮ್ಮ ಸಂಬಂಧಿಕರಿಗೆ ಪ್ರಯಾಗರಾಜ್ನತ್ತ ಇನ್ನೂ ಎರಡು ಮೂರು ದಿನ ಪ್ರಯಾಣ ಬೆಳೆಸದಂತೆ ಹೇಳಿ. ಏಕೆಂದರೆ ಈಗಾಗಲೇ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಜನರು ಆಗಮಿಸಿದ್ದಾರೆ. ವಸಂತ ಪಂಚಮಿ, ಅಮೃತ ಸ್ನಾನ ಮುಗಿದ ಬಳಿಕ ಭಕ್ತಾದಿಗಳ ಸಂಖ್ಯೆ ಕಡಿಮೆ ಆಗಬಹುದು ಎಂಬ ಊಹೆ ನಮ್ಮದಿತ್ತು ಆದ್ರೆ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಭಕ್ತಾದಿಗಳು ಈಗಲೂ ಆಗಮಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿದೆ.
ಇದನ್ನೂ ಓದಿ:300 ಕಿ.ಮೀ ಟ್ರಾಫಿಕ್ ಜಾಮ್; ವಿಶ್ವದಾಖಲೆ; ಮಹಾಕುಂಭಮೇಳಕ್ಕೆ ಕಾರಲ್ಲಿ ಹೋದ್ರೆ ನಿಮ್ಮ ಕಥೆ ಮುಗೀತು!
ಜನವರಿ 13 ರಂದ ಆರಂಭವಾದ ಕುಂಭಮೇಳದ ಪವಿತ್ರ ಸ್ನಾನ, ಮೊದಲನೇ ದಿನವೇ ಸುಮಾರು 1.70 ಕೋಟಿ ಜನರು ಭಕ್ತಾದಿಗಳು ಬಂದಿದ್ದರು. ಜನವರಿ 14 ಮಕರ ಸಂಕ್ರಾಂತಿಯಂದು 3.50 ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಜನವರಿ 26 ರಂದು 1.74 ಕೋಟಿ, ಜನವರಿ 27ರಂದು 1.55 ಕೋಟಿ, ಜನವರಿ 28 ರಂದು 4.99 ಕೋಟಿ, ಜನವರಿ 29 ಅಂದ್ರೆ ಮೌನಿ ಅಮಾವಾಸ್ಯೆಯಂದು 7.64 ಕೋಟಿ ಅಂದ್ರೆ ಇದೇ ದಿನ ಅತಿಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದು. ಜನವರಿ 30, 2.06 ಕೋಟಿ, ಜನವರಿ 31ರಂದು 1.82 ಕೋಟಿ, ಫೆಬ್ರುವರಿ 1 ರಂದು,2015ಕೋಟಿ, ವಸಂತ ಪಂಚಮಿ ಫೆಬ್ರುವರಿ 3 ರಂದು 2.57 ಕೋಟಿ ಹಾಗೂ ಫೆಬ್ರವರಿ 9 ರಂದು 1.57 ಕೋಟಿ ಭಕ್ತಾದಿಗಳು ಗಂಗೆಯಲ್ಲಿ ಮುಳುಗೆದ್ದಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ಮಹಾಕುಂಭಮೇಳದ ಕ್ರೇಜ್ ಹೇಗಿದೆ ಎಂದರೆ ಉತ್ತರಪ್ರದೇಶದ ಸುತ್ತಮುತ್ತಲಿನ ರಾಜ್ಯಗಳಲ್ಲಿ ಈ ಹಿಂದೆ ಎಂದೂ ಕಾಣದಂತಹ ಟ್ರಾಫಿಕ್ ಜಾಮ್ಗಳನ್ನು ಇಂದು ಕಂಡಿದೆ. ಇನ್ನೂ ಹದಿನಾರು ದಿನಗಳ ಕಾಲ ಕುಂಭಮೇಳ ಚಾಲ್ತಿಯಲ್ಲಿರಲಿದ್ದು. ಸಂದರ್ಭ ಹಾಗೂ ಸನ್ನಿವೇಶಗಳನ್ನು ನೋಡಿಕೊಂಡು ಪ್ರಯಾಣ ಬೆಳೆಸುವುದು ಉತ್ತಮ ಅದರಲ್ಲಿಯೂ ಸ್ವಂತ ವಾಹನದ ಮೂಲಕ ಪ್ರಯಾಗರಾಜ್ಗೆ ತೆರಳುವವರು ಎಲ್ಲ ರೀತಿಯ ಮಾಹಿತಿಯನ್ನು ಪಡೆದು. ಪ್ರಯಾಣ ಸುಗಮವಾಗುವಂತಹ ಸಂದರ್ಭವಿದ್ದರೆ ಮಾತ್ರ ಹೋಗುವುದು ಒಳಿತು ಎಂದು ಎಲ್ಲರೂ ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ