newsfirstkannada.com

ಭಾರತ, ಮಾಲ್ಡೀವ್ಸ್‌ ಮಧ್ಯೆ ಬಗೆಹರಿಯದ ಬಿಕ್ಕಟ್ಟು; ಮೊದಲ ಕೋರ್‌ ಗ್ರೂಪ್ ಸಭೆಯಲ್ಲಿ ಆಗಿದ್ದೇನು?

Share :

Published January 15, 2024 at 5:52am

    ಲಕ್ಷದ್ವೀಪ ಪ್ರವಾಸಕ್ಕೆ ಅಭಿಯಾನ ಕೈಗೊಂಡ ಬಳಿಕ ಎದುರಾದ ಬಿಕ್ಕಟ್ಟು

    ಭಾರತೀಯ ಸೇನೆಯನ್ನು ಮಾಲ್ಡೀವ್ಸ್‌ನಿಂದ ವಾಪಸ್ ಪಡೆಯಲು ಸೂಚನೆ

    ಮಾಲ್ಡೀವ್ಸ್‌ಗೆ ಡ್ರ್ಯಾಗನ್ ಚೀನಾ ಪರೋಕ್ಷ ಕುಮ್ಮಕ್ಕು

ಭಾರತೀಯರು ಲಕ್ಷದ್ವೀಪ ಪ್ರವಾಸದ ಅಭಿಯಾನ ಕೈಗೊಂಡ ಬಳಿಕ ಭಾರತ, ಮಾಲ್ಡೀವ್ಸ್ ಮಧ್ಯೆ ಅತಿದೊಡ್ಡ ಬಿಕ್ಕಟ್ಟು ಏರ್ಪಟ್ಟಿದೆ. ದಿನ ಕಳೆದಂತೆ ಈ ರಾಜತಾಂತ್ರಿಕ ಸಮಸ್ಯೆ ಹೊಸ ತಿರುವುಗಳನ್ನ ಪಡೆದುಕೊಳ್ತಿದೆ. ಎರಡೂ ದೇಶದ ಮಧ್ಯೆ ಚೀನಾ ದೇಶ ಕೂಡ ಪರೋಕ್ಷವಾಗಿ ಮೂಗು ತೂರಿಸುವ ಕೆಲಸ ಮಾಡ್ತಿರೋದು ಬಿಕ್ಕಟ್ಟು ಮತ್ತಷ್ಟು ಜಟಿಲವಾಗುವಂತೆ ಮಾಡ್ತಿದೆ.

ಭಾರತ, ಮಾಲ್ಡೀವ್ಸ್ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟ ಬಳಿಕ ಮೊದಲ ಬಾರಿಗೆ ಕೋರ್ ಗ್ರೂಪ್ ಸಭೆ ನಡೆದಿದೆ. ಮಾಲ್ಡೀವ್ಸ್ ರಾಜಧಾನಿ ಮಾಲೆಯ ವಿದೇಶಾಂಗ ಇಲಾಖೆಯ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ಎರಡು ದೇಶಗಳ ನಡುವಿನ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಾಗಿದೆ.

ಕೋರ್ ಗ್ರೂಪ್ ಸಭೆಯಲ್ಲಿ ಪ್ರಮುಖವಾಗಿ ಭಾರತದ ಏವಿಯೇಷನ್‌ ಪ್ಲಾಟ್ ಫಾರಂಗಳ ಕಾರ್ಯಚರಣೆ ಮುಂದುವರಿಕೆ ಬಗ್ಗೆ ಚರ್ಚಿಸಲಾಗಿದೆ. ಎರಡು ಕಡೆಯಿಂದಲೂ ಕಾರ್ಯಸಾಧು ಪರಿಹಾರದ ಬಗ್ಗೆ ಮಾತುಕತೆ ನಡೆದಿದೆ. ಅಭಿವೃದ್ಧಿ ಸಹಕಾರ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದು ಸೇರಿದಂತೆ ಪಾಲುದಾರಿಕೆಯನ್ನು ಹೆಚ್ಚಿಸುವ ಹಂತಗಳನ್ನು ಗುರುತಿಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ವ್ಯಾಪಕ ವಿಷಯಗಳ ಕುರಿತು ಎರಡೂ ಕಡೆಯವರು ಚರ್ಚೆ ನಡೆಸಿದರು.

ಇದನ್ನೂ ಓದಿ: ನಮ್ಮದು ಚಿಕ್ಕ ದೇಶವಾಗಿರಬಹುದು, ನಮ್ಮನ್ನು ಬೆದರಿಸೋ ಹಕ್ಕು ನಿಮಗಿಲ್ಲ; ಮಾಲ್ಡೀವ್ಸ್​ ​ಅಧ್ಯಕ್ಷ ಮೊಹಮದ್ ಮುಯಿಝ್ಝು

ಇದೇ ವೇಳೆ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೇನೆಯ ತ್ವರಿತಗತಿ ಹಿಂತೆಗೆತದ ಬಗ್ಗೆ ಮಾಲ್ಡೀವ್ಸ್ ಪಟ್ಟು ಹಿಡಿದಿದೆ. ಕೋರ್ ಗ್ರೂಪ್ ಸಭೆಯಲ್ಲಿ ಭಾರತವು ಮಾಲ್ಡೀವ್ಸ್‌ನ ಬೇಡಿಕೆಗೆ ಒಪ್ಪಿಗೆ ಸೂಚಿಸಿದೆ ಎಂದು ಮಾಲ್ಡೀವ್ಸ್ ತನ್ನ ವಿದೇಶಾಂಗ ಇಲಾಖೆಯ ಪತ್ರಿಕಾ ಹೇಳಿಕೆಯಲ್ಲಿ ಬಿಡುಗಡೆ ಮಾಡಿದೆ.

ಡೆಡ್‌ಲೈನ್‌ ಕೊಟ್ಟಿದ್ದ ಮಾಲ್ಡೀವ್ಸ್‌!
ಇತ್ತೀಚೆಗಷ್ಟೇ ಚೀನಾ ಪ್ರವಾಸ ಕೈಗೊಂಡಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತದ ಮೇಲೆ ತೀಕ್ಷ್ಮವಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದ ಬಳಿಕ ಮಾಲ್ಡೀವ್ಸ್ ಸರ್ಕಾರ, ಭಾರತೀಯ ಸೇನೆಯನ್ನು ಮಾಲ್ಡೀವ್ಸ್‌ನಿಂದ ವಾಪಸ್ ಪಡೆಯುವಂತೆ ಖಡಕ್ ಸೂಚನೆ ನೀಡಿತ್ತು. ತನ್ನ ಮಿಲಿಟರಿ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಮಾರ್ಚ್ 15ರ ಗುಡುವು ಕೂಡ ನೀಡಿದೆ. ಈ ಎಲ್ಲಾ ಬೆಳವಣಿಗೆಗಳ ಬಳಿಕವೂ ಭಾರತ, ಮಾಲ್ಡೀವ್ಸ್ ಮಧ್ಯೆ ದ್ವೀಪಕ್ಷಿಯ ಮಾತುಕತೆ ನಡೆದಿದ್ದು, ಎರಡು ಕಡೆಯಿಂದಲೂ ಸಮಸ್ಯೆ ಪರಿಹಾರದ ಬಗ್ಗೆ ಚರ್ಚಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತ, ಮಾಲ್ಡೀವ್ಸ್‌ ಮಧ್ಯೆ ಬಗೆಹರಿಯದ ಬಿಕ್ಕಟ್ಟು; ಮೊದಲ ಕೋರ್‌ ಗ್ರೂಪ್ ಸಭೆಯಲ್ಲಿ ಆಗಿದ್ದೇನು?

https://newsfirstlive.com/wp-content/uploads/2024/01/Modi-Maldives.jpg

Load More