newsfirstkannada.com

ಭಾರತದಲ್ಲಿ ರಕ್ತದೋಕುಳಿ ಹರಡಲು Al-Qaeda ಪ್ಲಾನ್.. ಅದಕ್ಕಾಗಿ ಕಾಶ್ಮೀರದಲ್ಲಿ ಪ್ರಾದೇಶಿಕ ಅಂಗಸಂಸ್ಥೆ ತೆರೆಯಲು ಹಾಕಿದ್ಯಂತೆ ಸ್ಕೆಚ್

Share :

Published July 30, 2023 at 11:39am

Update July 30, 2023 at 11:57am

    ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಿಂದ ಸ್ಫೋಟಕ ವರದಿ

    ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರ ಪ್ಲಾನ್

    ಬಾಂಗ್ಲಾದೇಶ, ಮಯನ್ಮಾರ್​ ದೇಶಗಳೂ ಟಾರ್ಗೆಟ್

ರಕ್ತ ಮೆತ್ತಿಸಿಕೊಳ್ಳುವಲ್ಲೇ ಹೆಸರುವಾಸಿಯಾಗಿರುವ ರಾಕ್ಷಸೀ ಉಗ್ರ ಸಂಘಟನೆ Al-Qaeda ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಮೆಗಾ ಪ್ಲಾನ್ ಮಾಡಿದೆ. ಜಮ್ಮು-ಕಾಶ್ಮೀರ, ಬಾಂಗ್ಲಾದೇಶ ಮತ್ತು ಮಯನ್ಮಾರ್​​ನಲ್ಲಿ ತನ್ನ ಕ್ರೂರ ಚಟುವಟಿಕೆ ನಡೆಸಲು ಭಾರತದಲ್ಲಿ ತನ್ನ ಅಂಗಸಂಸ್ಥೆಯನ್ನು ತೆರೆಯಲು ಪ್ಲಾನ್ ಮಾಡಿದೆ ಎಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ತಿಳಿಸಿದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 32ನೇ ವರದಿಯನ್ನು ಕಳೆದ ವಾರ ಬಿಡುಗಡೆ ಮಾಡಿದೆ. ಈ ಉಗ್ರ ಸಂಘಟನೆಯು, ತನ್ನ ಉಗ್ರಜಾಲವನ್ನು ಹರಡಲು ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್-ಖೊರಾಸನ್ (ISIL) ಸಹಕಾರ ಪಡೆದುಕೊಂಡಿದೆ. ಜಮ್ಮು-ಕಾಶ್ಮೀರದಲ್ಲಿ ತನ್ನ ಅಂಗ ಸಂಸ್ಥೆಗಳನ್ನು ತೆರೆದು ಭಾರತ, ಬಾಂಗ್ಲದೇಶ, ಮಯನ್ಮಾರ್​​ಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸ್ಕೆಚ್ ಹಾಕಿದೆ ಎಂದು ಹೇಳಿದೆ.

ಅಪ್ಘಾನಿಸ್ತಾನದಲ್ಲಿ ಅಲ್-ಖೈದಾ ಸಂಘಟನೆಯ ಉಗ್ರರು 30 ರಿಂದ 60 ಸದಸ್ಯರು ಮಾತ್ರ ಇದ್ದಾರೆ. ಇವರಿಗಾಗಿ ಸುಮಾರು 400 ಮಂದಿ ಹಾರಾಟ ಮಾಡುತ್ತಿದ್ದಾರೆ. ಜೊತೆಗೆ ಕೇವಲ 2 ಸಾವಿರ ಮಂದಿ ಮಾತ್ರ ಬೆಂಬಲ ನೀಡುತ್ತಿದ್ದಾರೆ. ಇನ್ನು ಅಫ್ಘಾನ್​ನಲ್ಲಿ ತಾಲಿಬಾನ್ ಸರ್ಕಾರ ಇದ್ದರೂ, ಅಲ್​ಖೈದಾಗೆ ಯಾವುದೇ ಬಂಬಲ ಸಿಗುತ್ತಿಲ್ಲ. ಅಫ್ಘಾನಿಸ್ತಾನದಲ್ಲಿ ಸುಮಾರು 20ಕ್ಕೂ ಹೆಚ್ಚು ಉಗ್ರ ಸಂಘಟನೆಗಳಿವೆ ಎಂದು ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದಲ್ಲಿ ರಕ್ತದೋಕುಳಿ ಹರಡಲು Al-Qaeda ಪ್ಲಾನ್.. ಅದಕ್ಕಾಗಿ ಕಾಶ್ಮೀರದಲ್ಲಿ ಪ್ರಾದೇಶಿಕ ಅಂಗಸಂಸ್ಥೆ ತೆರೆಯಲು ಹಾಕಿದ್ಯಂತೆ ಸ್ಕೆಚ್

https://newsfirstlive.com/wp-content/uploads/2023/07/Terror.jpg

Load More