ಹೆಣ್ಣಿನ ಸೌಂದರ್ಯಕ್ಕೆ ಅನಗತ್ಯ ಕೂದಲುಗಳೇ ದಕ್ಕೆ.. ಇದಕ್ಕೆ ಪರಿಹಾರ ಏನು?

author-image
Ganesh
Updated On
ಹೆಣ್ಣಿನ ಸೌಂದರ್ಯಕ್ಕೆ ಅನಗತ್ಯ ಕೂದಲುಗಳೇ ದಕ್ಕೆ.. ಇದಕ್ಕೆ ಪರಿಹಾರ ಏನು?
Advertisment
  • ಕೆಲವು ಹೆಣ್ಮಕ್ಕಳಿಗೆ ಗಡ್ಡ ಬರುತ್ತೆ.. ಯಾಕೆ ಗೊತ್ತಾ?
  • ಮುಖದ ಸೌಂದರ್ಯ ಹಾಳು ಮಾಡುತ್ತವೆ ಕೂದಲುಗಳು
  • ಪರಿಹಾರಕ್ಕೆ ಇದೆ ಲೇಸರ್ ಚಿಕಿತ್ಸೆ.. ಇನ್ನೂ ಏನೇನು?

ಪುರುಷರಂತೆ ಮಹಿಳೆಯರು ಮುಖದಲ್ಲಿ ಗಡ್ಡ ಬೆಳೆಸಿಕೊಳ್ಳಲ್ಲ. ಆದರೂ ಕೆಲವು ಹೆಣ್ಮಕ್ಕಳ ಮುಖದ ಮೇಲೆ ಕೂದಲು ಅತಿಯಾಗಿ ಬೆಳೆಯುತ್ತದೆ. ಇದು ಸಹಜ ಅಲ್ಲ. ಅದೊಂದು ಸಮಸ್ಯೆ. ಈ ಸಮಸ್ಯೆಯನ್ನು ಹಿರ್ಸುಟಿಸಮ್ (Hirsutism) ಎಂದು ಕರೆಯುತ್ತಾರೆ.

ಇಂಥ ಸಮಸ್ಯೆಯಿಂದ ಬಳಲುತ್ತಿರುವ ಅನೇಕ ಮಹಿಳೆಯರ ಮುಖ, ತೋಳು, ಬೆನ್ನು, ಎದೆಯ ಮೇಲೆ ಅನಗತ್ಯ ಕೂದಲು ಬೆಳೆಯುತ್ತದೆ. ಇದರಿಂದ ಅವರ ಸೌಂದರ್ಯಕ್ಕೂ ದಕ್ಕೆ ಬರುತ್ತದೆ. ಹೆಣ್ಮಕ್ಕಳಿಗೆ ಮುಖದ ಮೇಲೆ ಅನಗತ್ಯ ಕೂದಲು ಬೆಳೆಯಲು ಕಾರಣ ಏನು? ಇದನ್ನು ಹೇಗೆ ರಿಮೂವ್ ಮಾಡಬೇಕು ಅನ್ನೋದ್ರ ವಿವರ ಇಲ್ಲಿದೆ.

ಕಾರಣ ಏನು..?

PCOS (Polycystic ovary syndrome): ಆ್ಯಂಡ್ರೋಜೆನ್​​​ ಎಂಬ ಹಾರ್ಮೋನ್ ಮಟ್ಟವು ಸಹಜಕ್ಕಿಂತ ಹೆಚ್ಚಾದರೆ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ. PCOSನಲ್ಲಿ ಆಂಡ್ರೋಜೆನ್ ಲೇವೆಲ್ ವೇಗವಾಗಿ ಹೆಚ್ಚುತ್ತ ಹೋದಂತೆ ಕೂದಲುಗಳು ಬೆಳೆಯುತ್ತವೆ. ಕೂದಲು ಬೆಳೆಯೋದು ಮಾತ್ರವಲ್ಲದೇ ಋತುಚಕ್ರದ ಮೇಲೂ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಕಿಡ್ನಿ ಕ್ಯಾನ್ಸರ್​ನಿಂದ ಬಚಾವ್ ಆಗಲು 5 ಸರಳ ಮಾರ್ಗಗಳು ಇಲ್ಲಿದೆ! ಇವುಗಳನ್ನು ನೀವು ಪಾಲಿಸಿದರೆ ಅಪಾಯವಿಲ್ಲ!

ಮೂತ್ರಜನಕಾಂಗದ ಸಮಸ್ಯೆ: ಮೂತ್ರಜನಕಾಂಗದ ಗ್ರಂಥಿಗಳು ಮೂತ್ರಪಿಂಡದಲ್ಲಿವೆ. ಅವುಗಳ ಮುಖ್ಯ ಕೆಲಸ ಏನೆಂದರೆ ಹಾರ್ಮೋನ್​ಗಳನ್ನು ಸ್ರವಿಸುವುದು (secrete hormones). Hyperplasia ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಹಾರ್ಮೋನ್​ಗಳನ್ನು ಉತ್ಪಾದಿಸುವ ಕಿಣ್ವಗಳ ಕೊರತೆ ಉಂಟಾಗುತ್ತದೆ. ಇದರಿಂದ ಕೆನ್ನೆಗಳಲ್ಲಿ ಕೂದಲು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ.

Cushing's syndrome: ದೇಹವು ಅತಿಯಾಗಿ ಕಾರ್ಟಿಸೋಲ್ (cortisol) ಉತ್ಪಾದಿಸಿದರೂ ಕೂದಲು ಬರುತ್ತದೆ. ಅತಿಯಾದ ಕಾರ್ಟಿಸೋಲ್ ಕೂದಲು, ಚರ್ಮ ಹಾಗೂ ಇತರೆ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ತ್ವರಿತಗತಿಯಲ್ಲಿ ತೂಕ ಹೆಚ್ಚಾಗುತ್ತದೆ. ರಕ್ತದೊತ್ತಡ, ಮಧುಮೇಹ ಕೂಡ ಶುರುವಾಗುತ್ತದೆ.

Pregnancy and Menopause: ಗರ್ಭಧಾರಣೆ ಮತ್ತು ಋತುಬಂಧ ಅವಧಿಯಲ್ಲಿ ಅನೇಕ ಮಹಿಳೆಯರ ದೇಹದಲ್ಲಿ ಹಾರ್ಮೋನ್​ಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇದರಿಂದಲೂ ಮುಖದ ಮೇಲೆ ಕೂದಲು ಬೆಳೆಯುತ್ತದೆ.

ಬೇಡದ ಕೂದಲು ತೆಗೆಯೋದು ಹೇಗೆ?

  • ಲೈಫ್​ಸ್ಟೈಲ್​ ಬದಲಾವಣೆ ಮಾಡಿಕೊಳ್ಳಬೇಕು
  • ಆಹಾರದ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ
  •  ಸರಿಯಾದ ಆಹಾರಕ್ರಮದಿಂದ ತೂಕ ನಿಯಂತ್ರಣಕ್ಕೆ ತರಬಹುದು
  •  ಮುಖದ ಕೂದಲು ಕಡಿಮೆ ಮಾಡಲು ಲೇಸರ್ ಚಿಕಿತ್ಸೆ ಪಡೆಯಬಹುದು
  •  ಮನೆಮದ್ದುಗಳ ಸಹಾಯದ ಮೊರೆ ಹೋಗಬಹುದು

ಇದನ್ನೂ ಓದಿ: ರಕ್ತದೊತ್ತಡ ನಿಯಂತ್ರಣ, ಹೃದಯದ ಸ್ವಾಸ್ಥ್ಯ ಹೆಚ್ಚಳ; ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment