/newsfirstlive-kannada/media/post_attachments/wp-content/uploads/2025/01/KUMBHA_CM_YOGI.jpg)
ಪ್ರಯಾಗ್‌ರಾಜ್ ಮಹಾಕುಂಭ ಮೇಳಕ್ಕೆ ದೇಶ ವಿದೇಶದಿಂದ ಜನ ಭೇಟಿ ನೀಡುತ್ತಿದ್ದು ಪವಿತ್ರ ಸ್ನಾನದಿಂದ ಪುಣ್ಯ ಪ್ರಾಪ್ತಿ ಪಡೆಯುವ ನಿರೀಕ್ಷೆಯಲ್ಲಿ ಜನರಿದ್ದಾರೆ. ನದಿಗೆ ಹೂ, ಹಣ್ಣು, ದವಸ, ಧಾನ್ಯ, ಬಟ್ಟೆ, ತೆಂಗಿನ ಕಾಯಿ, ಎಂದೆಲ್ಲಾ ಅನೇಕ ವಸ್ತುಗಳನ್ನು ಬಾಗಿನ ರೂಪದಲ್ಲಿ ನೀರಿಗೆ ಬಿಡುತ್ತಿದ್ದು ನಿತ್ಯ ಅವೇ ಮಲೀನಕಾರಕವಾಗಿ ಮಾರ್ಪಡುತ್ತಿದೆ ಎನ್ನುವ ಚರ್ಚೆ ಇದೀಗ ಉಂಟಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಕೊನೆಯ ಘಟದತ್ತ ತಲುಪಿದೆ. ಫೆಬ್ರವರಿ 26ರಂದು ಈ ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ಇದುವರೆಗೆ ಸುಮಾರು 56 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.
ಕುಂಭಮೇಳದ ತೀರ್ಥಸ್ನಾನದಿಂದ ಶ್ವಾಸಕೋಶದ ಸೋಂಕು!
ಫೆಬ್ರವರಿ 26 ಮಹಾಶಿವರಾತ್ರಿ ಇರೋ ಕಾರಣ ಮಹಾ ಕುಂಭಮೇಳಕ್ಕೆ ಭಕ್ತ ಸಾಗರ ಹರಿದು ಬರುವ ಸಾಧ್ಯತೆ ಇದೆ. ಈಗಾಗ್ಲೆ ಕಾಲ್ತುಳಿತದಂತಹ ಕಹಿ ಘಟನೆ ಅನುಭವಿಸಿ, ನಾನಾ ಟೀಕೆಗಳಿಗೆ ಗುರಿಯಾಗಿರೋ ಉತ್ತರ ಪ್ರದೇಶದ ಸರ್ಕಾರ ಅನೇಕ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿ ಕೊಳ್ಳೋದಕ್ಕೆ ಸಜ್ಜಾಗಿದೆ. ಈ ಮಧ್ಯೆ ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ಕೊಟ್ಟ ವರದಿ ಸಾಕಷ್ಟು ಚರ್ಚೆಗೆ ಕಾರಣ ವಾಗಿದೆ.
ಮಹಿಳೆಗೆ ಶ್ವಾಸಕೋಶದ ಸೋಂಕು.. ವೈದ್ಯರ ಪೋಸ್ಟ್ ವೈರಲ್
ಪ್ರಯಾಗ್‌ರಾಜ್ ಭೇಟಿ ನೀಡಿದ್ದ ಮಹಿಳೆಯೊಬ್ಬರು ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದು, ತೀರ್ಥ ಸ್ನಾನ ಮಾಡುವಾಗ ಮೂಗಿನ ಹೊಳ್ಳೆಗಳಿಂದ ನೀರು ಶ್ವಾಸಕೋಶ ಪ್ರವೇಶಿಸಿದೆ. ಪರಿಣಾಮ ಶ್ವಾಸಕೋಶದ ಸೋಂಕು ಉಂಟಾಗಿ ಮಹಿಳೆಗೆ ಉಸಿರಾಟ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ವೈದ್ಯರ ಪೋಸ್ಟ್‌ವೊಂದು ಭಾರೀ ವೈರಲ್ ಆಗ್ತಿದೆ.
ಇದೆಲ್ಲಾ ಒಂದೆತ್ತಾದ್ರೆ.. ತ್ರಿವೇಣಿ ಸಂಗಮದ ನೀರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ. ಇದು ಸ್ನಾನ ಮಾಡಲು ಯೋಗ್ಯವಲ್ಲ ಎಂಬ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಯುಪಿ ಸರ್ಕಾರದ ಕೈ ಸೇರಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಯೋಗಿ ವರದಿಯನ್ನ ಅಲ್ಲಗಳೆದಿದ್ದಾರೆ. ತ್ರಿವೇಣಿ ಸಂಗಮದ ನೀರು ಕುಡಿಯಲು ಯೋಗ್ಯ ಎಂದು ಯೋಗಿ ಪ್ರತಿಪಾದಿಸಿದ್ದಾರೆ.
56 ಕೋಟಿ ಭಕ್ತರ ನಂಬಿಕೆ ಜೊತೆ ಆಟ ಬೇಡ- ಯೋಗಿ ಎಚ್ಚರಿಕೆ
ಈಗಾಗಲೇ ಕುಂಭಮೇಳದಲ್ಲಿ 56 ಕೋಟಿಗೂ ಅಧಿಕ ಭಕ್ತರು ಮಿಂದೆದಿದ್ದಾರೆ. ಯಾರಿಗೂ ಏನು ಆಗಿಲ್ಲ. ನಾವು ಇಂತಹ ಆಧಾರ ರಹಿತ ಆರೋಪ ಒಪ್ಪಲ್ಲ. ಸನಾತನ ಧರ್ಮದ ಬಗ್ಗೆ, ಕುಂಭಮೇಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸೋದನ್ನು ಸಹಿಸಲ್ಲ. ಅವರು 56 ಕೋಟಿ ಭಕ್ತರ ನಂಬಿಕೆಗಳ ಜೊತೆ ಆಟ ಆಡ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಸಿಎಂ ಯೋಗಿ ಗುಡುಗಿದ್ದಾರೆ.
ಇದನ್ನೂ ಓದಿ: ಮನೆ ಪಕ್ಕದಲ್ಲಿ ಗುಂಡಿ ಇದ್ರೆ ಹುಷಾರ್..! ಚೆನ್ನಾಗಿದ್ದ ಬಿಲ್ಡಿಂಗ್ನ ಬೇಸ್ಮೆಂಟ್ ಏಕಾಏಕಿ ವಾಲಿದ್ದಕ್ಕೆ ಡೆಮಾಲಿಷನ್
ಇನ್ನೂ ಮಹಾ ಕುಂಭಮೇಳದ ಅಂಗವಾಗಿ ಉತ್ತರ ಪ್ರದೇಶದ 75 ಜೈಲುಗಳಲ್ಲಿರುವ 90,000ಕ್ಕೂ ಹೆಚ್ಚು ಕೈದಿಗಳಿಗೆ ಪವಿತ್ರ ಗಂಗಾ ನದಿಯ ನೀರಿನಲ್ಲಿ ಸ್ನಾನ ಮಾಡುವ ಸೌಭಾಗ್ಯ ಒದಗಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರಯಾಗ್ರಾಜ್ನಿಂದ ಗಂಗಾ ನದಿಯ ನೀರನ್ನ ಈ ಎಲ್ಲಾ ಜೈಲುಗಳಿಗೆ ಪೂರೈಕೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಫೆಬ್ರವರಿ 21ರಂದು ಬೆಳಗ್ಗೆ 9.30ರಿಂದ 10ರವರೆಗೆ ಎಲ್ಲಾ ಜೈಲುಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಯಾರು ಏನಾದ್ರೂ ಮಾತಾಡಲಿ ಮಹಾ ಕುಂಭಮೇಳ 144 ವರ್ಷದ ಬಳಿಕ ಬಂದಿದೆ ಅಂತಾ ಜನ ತ್ರಿವೇಣಿ ಸಂಗಮದಲ್ಲಿ ಮಿಂದೇಳ್ತಾ ಭಕ್ತಯಲ್ಲಿ ನೆಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ