/newsfirstlive-kannada/media/post_attachments/wp-content/uploads/2023/08/yogi.jpg)
ಮಹಾ ಕುಂಭಮೇಳದಲ್ಲಿ ಘೋರ ದುರಂತ ಸಂಭವಿಸಿಬಿಟ್ಟಿದೆ. ಪುಣ್ಯಕ್ಷೇತ್ರದಲ್ಲಿ ಅಮೃತ ಸ್ನಾನ ಮಾಡಲು ಹೋದವರು ಶಿವನ ಪಾದ ಸೇರಿದ್ದಾರೆ. ದೇವರ ಸ್ಮರಣೆಗಳು ಕೇಳಬೇಕಿದ್ದ ಕ್ಷೇತ್ರದಲ್ಲಿ ಸಾವಿನ ಆರ್ತನಾದ ಕೇಳಿಸಿದೆ. ಪ್ರಯಾಗರಾಜ್ನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನ ಸಾವನ್ನಪ್ಪಿರುವುದನ್ನು ಯೋಗಿ ಸರ್ಕಾರ ಕನ್ಫರ್ಮ್ ಮಾಡಿದೆ.
ಕಾಲ್ತುಳಿತಕ್ಕೆ ಕಾರಣವೇನು?
- ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆ ಮುಗಿಬಿದ್ದಿದ್ರಿಂದ ದುರಂತ
- ಅಮೃತ ಸ್ನಾನದ ಹಿನ್ನೆಲೆಯಲ್ಲಿ ತಾತ್ಕಾಲಿಕ ಸೇತುವೆ ಬಂದ್
- ಸಂಗಮದ ಸನಿಹದ ಬ್ಯಾರಿಕೇಡ್ಗಳಲ್ಲಿ ಸಿಲುಕಿದ ಕೆಲವರು
- ತ್ರಿವೇಣಿ ಸಂಗಮದಲ್ಲಿ ಪ್ರತ್ಯೇಕ ಪ್ರವೇಶ, ನಿರ್ಗಮನ ಇಲ್ಲ
- ಭಕ್ತರು ಬಂದ ದಾರಿಯಲ್ಲೇ ಹಿಂದಿರುಗುವ ಅನಿವಾರ್ಯತೆ
- ಈ ವೇಳೆ ನೂಕುನುಗ್ಗಲು ಉಂಟಾಗಿ, ಬ್ಯಾರಿಕೇಡ್ ಧ್ವಂಸ
- ಬ್ಯಾರಿಕೇಡ್ನಿಂದ ಹೊರಬಂದ ಜನ ಮಲಗಿದ್ದವರ ಮೇಲೆ ಬಿದ್ದಿದ್ದಾರೆ
- ಒಬ್ಬರ ಮೇಲೆ ಒಬ್ಬರು ಬಿದ್ದಿದ್ರಿಂದ ಉಸಿರುಗಟ್ಟಿ ಸಾವು
ಘಾಟ್ ಮತ್ತು ಅಖಾಡದಲ್ಲಿರುವ ಬ್ಯಾರಿಗೇಟ್ಗಳಿವೆ, ಅದ್ರಲ್ಲಿ ಕೆಲ ಬ್ಯಾರಿಗೇಟ್ಗಳು ಮುರಿದವು, ಬ್ಯಾರಿಗೇಟ್ಗಳು ಮುರಿದ್ರಿಂದ, ಅಲ್ಲೆ ಕೆಳಗೆ ಇದ್ದ ಜಾಗದಲ್ಲಿ ಕೆಲ ಭಕ್ತರು, ಬ್ರಹ್ಮ ಮುಹೂರ್ತಕ್ಕಾಗಿ ಕಾಯುತ್ತಿದ್ದವರ ಮೇಲೆ, ನೂಕನೂಗ್ಗಲಿನಿಂದ ಜನರು ಕೆಳಗಿದ್ದವರ ಮೇಲೆ ಬಿದ್ದಿದ್ದಾರೆ.
ವೈಭವ್ ಕೃಷ್ಣ, ಡಿಐಜಿ, ಮಹಾಕುಂಭ
ಭೀಕರ ಕಾಲ್ತುಳಿತ.. ನ್ಯಾಯಾಂಗ ತನಿಖೆಗೆ ಆದೇಶ
ಶತಮಾನದ ಮಹಾ ಕುಂಭ ಮೇಳದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಸದ್ಯ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳುತ್ತಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ದುರಂತದವನ್ನು ಗಂಭಿರವಾಗಿ ಪರಿಗಣಿಸಿರುವ ಯೋಗಿ, ಅಸಲಿ ಸತ್ಯ ತಿಳಿಯಲು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಸದ್ಯ ಕುಂಭಮೇಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇನ್ನು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.
ಇದನ್ನೂ ಓದಿ:Maha Kumbh; ಕುಂಭ ಮೇಳ ದುರಂತ, ಬೆಳಗಾವಿಯಲ್ಲಿ ಶೋಕಸಾಗರ.. ಕಣ್ಣೀರಿಡುತ್ತ ಕೂತ ಕುಟುಂಬ
ಕಾಲ್ತುಳಿತದ ಮಧ್ಯೆಯೂ 5 ಕೋಟಿ ಭಕ್ತರಿಂದ ಅಮೃತ ಸ್ನಾನ
ನಿನ್ನೆ ಬೆಳಗ್ಗೆ ನಡೆದ ದುರಂತ ಘಟನೆಯಿಂದ ಸಾಧು-ಸಂತರ ಅಖಾಡಗಳು ಅಮೃತಸ್ನಾನವನ್ನ ತಾತ್ಕಾಲಿಕವಾಗಿ ಮುಂದೂಡಿದರು. ಆದ್ರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆ ಸಂಜೆ ಹೊತ್ತಿಗೆ ಸುಮಾರು 13 ಅಖಾಡಗಳ ಸ್ವಾಮೀಜಿಗಳು, ಸಾಧುಗಳು, ಬ್ರಾಹ್ಮಿ ಮೂಹರ್ತದಲ್ಲಿ ಮೌನಿ ಅಮಾವಾಸ್ಯೆಯ ಅಮೃತಸ್ನಾನ ಮಾಡಿದರು. ಸುಮಾರು 5.71 ಕೋಟಿ ಭಕ್ತರು ಗಂಗೆಯಲ್ಲು ಪುಣ್ಯಸ್ನಾನ ಮಾಡಿದ್ದು, ಇದುವರೆಗೂ ಪ್ರಯಾಗ್ರಾಜ್ಗೆ 20 ಕೋಟಿ ಭಕ್ತರು ಭೇಟಿ ಕೊಟ್ಟಿದ್ದಾರೆ ಅಂತ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಸದ್ಯ ಮಹಾಕುಂಭಮೇಳ ಸನ್ನಿಧಿ ಸಹಜ ಸ್ಥಿತಿಗೆ ಮರಳಿದೆ. ಅಮೃತಸ್ನಾನ ಅಡೆ-ತಡೆ ಇಲ್ಲದೆ ನಡೆದಿದೆ. ಅದೇನೆ ಇರಲಿ, ಶತಮಾನದ ಸಂಭ್ರಮದಲ್ಲಿ ಕಾಲ್ತುಳಿತ ಸಂಭವಿಸಿ ಹತ್ತಾರು ಜೀವಗಳು ಬಲಿಯಾಗಿದ್ದೂ ನಿಜಕ್ಕೂ ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ