/newsfirstlive-kannada/media/post_attachments/wp-content/uploads/2025/06/GILL_TEAM.jpg)
ಟೀಮ್ ಇಂಡಿಯಾ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆಲುವಿನ ಕನಸು ಕಾಣ್ತಿದೆ. ಈ ಕನಸು ನನಸಾಗಬೇಕಾದ್ರೆ, ಟೀಮ್ ಇಂಡಿಯಾ ಇಂಗ್ಲೆಂಡ್​ನ ರನ್ ಮಷಿನ್ ಜೋ ರೂಟ್​​ ದಿಕ್ಕು ತಪ್ಪಿಸಬೇಕಿದೆ. ಕ್ರಿಸ್​ ಬಂದಷ್ಟೇ ವೇಗವಾಗಿ ವಾಪಾಸ್ ಕಳಿಸಬೇಕು. ಕ್ರೀಸ್​​ನಲ್ಲಿ ದೀರ್ಘಕಾಲ ಆಡಲು ಬಿಟ್ರೆ, ರೂಟ್​ ಟೀಮ್​ ಇಂಡಿಯಾಗೆ ಸಂಕಷ್ಟ ತಪ್ಪಿದ್ದಲ್ಲ.
ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ಉಭಯ ತಂಡಗಳ ಪ್ರಿಪರೇಷನ್ ಜೋರಾಗಿದೆ. ಟೆಸ್ಟ್​ ಸರಣಿ ಗೆಲುವಿಗಾಗಿ ಎರಡೂ ತಂಡಗಳು ನಾನಾ ಕಸರತ್ತುಗಳನ್ನ ಮಾಡ್ತಿವೆ. ಕೊಹ್ಲಿ, ರೋಹಿತ್​ ಅಲಭ್ಯತೆಯಲ್ಲಿ ಇಂಗ್ಲೆಂಡ್​ನ ಅನುಭವಿ ಬ್ಯಾಟರ್​ ಜೋ ರೂಟ್​ ಈ ಪ್ರತಿಷ್ಠಿತ ಟೆಸ್ಟ್ ಸರಣಿಯ ಸೆಂಟರ್ ಆಫ್ ಅಟ್ರಾಕ್ಷನ್ ಎನಿಸಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್, ಲೀಡಿಂಗ್ ರನ್ ಸ್ಕೋರರ್​. ರನ್ ಮಷಿನ್. ಟೆಸ್ಟ್ ಸ್ಪೆಷಲಿಸ್ಟ್​ ಜೋ ರೂಟ್​​, ಈ ಟೆಸ್ಟ್ ಸರಣಿಯ ಸೆಂಟರ್ ಆಫ್ ಅಟ್ರಾಕ್ಷನ್. ಇಂಗ್ಲೆಂಡ್​ ತಂಡಕ್ಕೆ ಈ ರೂಟ್​ ಬಲವಾಗಿದ್ರೆ, ಟೀಮ್ ಇಂಡಿಯಾಗೆ ಈ ಒಬ್ಬನದ್ದೇ ಟೆನ್ಶನ್​.!
ಟೀಮ್ ಇಂಡಿಯಾ VS ಜೋ ರೂಟ್​ ಸಮರ.!
ನೀವ್​ ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿ ಭಾರತ, ಇಂಗ್ಲೆಂಡ್ ನಡುವಿನ ಬ್ಯಾಟಲ್ ಎನ್ನುವುದರಕ್ಕಿಂತ ಜೋ ರೂಟ್​ ವರ್ಸಸ್ ಟೀಮ್ ಇಂಡಿಯಾ ನಡುವಿನ ಬ್ಯಾಟಲ್​ ಅಂತಾನೇ ಬಿಂಬಿತವಾಗ್ತಿದೆ. ಇದಕ್ಕೆ ಕಾರಣ ಜೋ ರೂಟ್​​ ದರ್ಬಾರ್​.
ಹೋಮ್ ಕಂಡೀಷನ್ಸ್​ನಲ್ಲಿ ರೂಟ್​​​​​​ ಡೇಂಜರ್​.!
2023- 2025ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​ ಸೈಕಲ್​ನಲ್ಲಿ ಅಕ್ಷರಶಃ ರೂಟ್ ದರ್ಬಾರ್ ನಡೆದಿದೆ​. ಪ್ರತಿ ಸರಣಿ, ಪ್ರತಿ ಎದುರಾಳಿ ಮೇಲೆ ರನ್ ಶಿಖರ ಕಟ್ಟಿದ್ದ ಜೋ ರೂಟ್​, 2023-25ರ ಅವಧಿಯಲ್ಲಿ ಬರೋಬ್ಬರಿ 1968 ರನ್ ಗಳಿಸಿ ಟಾಪ್ ಸ್ಕೋರರ್ ಆಗಿದ್ದರು. ಅಷ್ಟೇ ಅಲ್ಲ, ಹೋಮ್ ಕಂಡೀಷನ್ಸ್​ನಲ್ಲಿ ಮೋಸ್ಟ್ ಡೇಂಜರ್ ಆಗಿರುವ ಜೋ ರೂಟ್​, 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾಗೆ ಮುಪ್ಪಾದರು ಅಚ್ಚರಿ ಇಲ್ಲ.
2023-25ರ WTCನಲ್ಲಿ ಜೋ ರೂಟ್ ಆಟ
2023-25ರ ಅವಧಿಯಲ್ಲಿ 22 ಟೆಸ್ಟ್​ ಪಂದ್ಯಗಳ 40 ಇನ್ನಿಂಗ್ಸ್​​ಗಳಿಂದ 1968 ರನ್ ಕೊಳ್ಳೆ ಹೊಡೆದಿರುವ ರೂಟ್​, 54.66ರ ಬ್ಯಾಟಿಂಗ್ ಅವರೇಜ್​ನಲ್ಲಿ ರನ್​​ ಗಳಿಸಿದ್ದಾರೆ. ಈ ಪೈಕಿ 7 ಅರ್ಧಶತಕ, 7 ಶತಕ ಸಿಡಿಸಿದ್ದಾರೆ.
ಇಂಟ್ರೆಸ್ಟಿಂಗ್​ ಅಂದ್ರೆ, ಇಂಗ್ಲೆಂಡ್​​ ನೆಲದಲ್ಲಿ ಆಡಿರುವ 79 ಟೆಸ್ಟ್​ಗಳಿಂದ 6,792 ರನ್ ಗಳಿಸಿರುವ ರೂಟ್, ಬರೋಬ್ಬರಿ 21 ಶತಕ, 32 ಅರ್ಧಶತಕ ಗಳಿಸಿದ್ದಾರೆ. 138 ಇನ್ನಿಂಗ್ಸ್​ಗಳ ಪೈಕಿ ಕೇವಲ 6 ಬಾರಿ ಮಾತ್ರವೇ ಡಕೌಟ್ ಆಗಿದ್ದಾರೆ. ಜೋ ರೂಟ್ ಎಷ್ಟು ಅಪಾಯಕಾರಿ ಅನ್ನೋದನ್ನ ಇದು ಸಾರಿ ಸಾರಿ ಹೇಳುತ್ತೆ.
ಟೀಮ್ ಇಂಡಿಯಾ ಜೋ ರೂಟ್​​​​ ಫೇವರಿಟ್​​ ಎದುರಾಳಿ..!
ಟೀಮ್ ಇಂಡಿಯಾ ಅಂದ್ರೆ, ಜೋ ರೂಟ್​​ಗೆ ಎಲ್ಲಿಲ್ಲದ ಪ್ರೀತಿ. ಟೀಮ್ ಇಂಡಿಯಾ ಎದುರು ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ಹೊಂದಿರುವ ರೂಟ್​, ಇಂಗ್ಲೆಂಡ್​ ನೆಲದಲ್ಲಂತೂ ಭಾರತವನ್ನ ಕಾಡಿದ್ದಾರೆ. ಟೀಮ್ ಇಂಡಿಯಾ ಗೆಲುವಿಗೆ ವಿಲನ್ ಆಗಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿಅಂಶಗಳು.
ಟೀಮ್ ಇಂಡಿಯಾ ಎದುರು ಜೋ ರೂಟ್
ಟೀಮ್ ಇಂಡಿಯಾ ಎದುರು ಇದುವರೆಗೆ 30 ಟೆಸ್ಟ್​ ಪಂದ್ಯಗಳನ್ನಾಡಿರುವ ರೂಟ್​, 58.08ರ ಬ್ಯಾಟಿಂಗ್ ಅವರೇಜ್​ನಲ್ಲಿ 2,846 ರನ್ ಗಳಿಸಿದ್ದಾರೆ. ಈ ಪೈಕಿ ತಲಾ 10 ಶತಕ, 11 ಅರ್ಧಶತಕ ಗಳಿಸಿದ್ದಾರೆ.
ಭಾರತದ ಎದುರು ಇಂಗ್ಲೆಂಡ್​ನಲ್ಲಿ ರೂಟ್
ಇನ್ನು ಇಂಗ್ಲೆಂಡ್​ನಲ್ಲಿ ಟೀಮ್ ಇಂಡಿಯಾ ಎದುರು 15 ಟೆಸ್ಟ್​ ಪಂದ್ಯಗಳನ್ನಾಡಿರುವ ರೂಟ್​, ಬರೋಬ್ಬರಿ 74.95ರ ಬ್ಯಾಟಿಂಗ್ ಅವರೇಜ್​ನಲ್ಲಿ 1574 ರನ್ ಗಳಿಸಿದ್ದಾರೆ. ಈ ಪೈಕಿ ತಲಾ 7 ಶತಕ, 5 ಅರ್ಧಶತಕ ಗಳಿಸಿದ್ದಾರೆ.
ಇದನ್ನೂ ಓದಿ: 29ನೇ ವಯಸ್ಸಿನಲ್ಲೇ ವಿರಾಟ್​ ಕೊಹ್ಲಿನ ಮದುವೆ ಆಗಿದ್ದು ಏಕೆ.. ಕಾರಣ ಹೇಳಿದ ಪತ್ನಿ ಅನುಷ್ಕಾ ಶರ್ಮಾ!
ಈ ಬ್ರಹ್ಮಾಸ್ತ್ರ ಬೇಧಿಸಿದರಷ್ಟೇ ಶುಭ್​ಮನ್ ಕನಸು ನನಸು..!
ಟೀಮ್ ಇಂಡಿಯಾ​​ ಟೆಸ್ಟ್ ಸರಣಿ ಗೆಲುವಿನ ಕನಸು ಕಾಣ್ತಿದೆ. ಆದ್ರೆ, ಈ ಗೆಲುವು ಸುಲಭದ ಮಾತಲ್ಲ. ಯಾಕಂದ್ರೆ, ಪ್ರತಿ ಕಂಡೀಷನ್ಸ್​ಗೂ ಸಲ್ಲುವ ಜೋ ರೂಟ್​, ಟೀಮ್ ಇಂಡಿಯಾಗೆ ಬಿಗ್ ಥ್ರೆಟ್ ಆಗ್ತಾರೆ ಅನ್ನೋದನ್ನ ಅಂಕಿಅಂಶಗಳೇ ಹೇಳ್ತಿವೆ. ಹೀಗಾಗಿ ಶುಭ್​ಗಿಲ್ ನಾಯಕತ್ವದ ಟೀಮ್ ಇಂಡಿಯಾಗೆ ಜೋ ರೂಟ್​ನ ರೂಟ್ ತಪ್ಪಿಸುವುದು ದೊಡ್ಡ ಸವಾಲಾಗಲಿದೆ. ಅದ್ರಲ್ಲೂ ನೆಚ್ಚಿನ ಕಂಡೀಷನ್ಸ್​ನಲ್ಲಿ ಜೋ ರೂಟ್ ವಿಕೆಟ್ ಬೇಟೆಯಾಡಬೇಕಾದ್ರೆ, ಜಸ್​ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಭಾರೀ ವರ್ಕೌಟ್ ಮಾಡಬೇಕಿದೆ.
ಟೀಮ್ ಇಂಡಿಯಾ​ ವಿರುದ್ಧ ಅದ್ಭುತ ಟ್ರ್ಯಾಕ್​ ರೆಕಾರ್ಡ್​ ಹೊಂದಿರೋ ಜೋ ರೂಟ್​, 2025-27ರ ನಯಾ ಟೆಸ್ಟ್ ಚಾಂಪಿಯನ್ ಶಿಪ್​ನಲ್ಲಿ ಚಾಂಪಿಯನ್ ಆಟವಾಡುವ ಕನಸಿನಲ್ಲಿದ್ದಾರೆ. ಇದಕ್ಕೆ ಟೀಮ್ ಇಂಡಿಯಾ ಯಾವ ರೀತಿಯಾಗಿ ಬ್ರೇಕ್ ಹಾಕುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ