/newsfirstlive-kannada/media/post_attachments/wp-content/uploads/2025/03/Indian-constable.jpg)
ನನ್ನ ಹೆಂಡತಿ ನನ್ನ ಎದೆಯ ಮೇಲೆ ಕುಳಿತು ನನ್ನ ರಕ್ತವನ್ನು ಕುಡಿದು ನನ್ನ ಸಾಯಿಸಲು ಬರುತ್ತಾಳೆ. ಕಾನ್ಸ್‌ಟೇಬಲ್ ಒಬ್ಬರು ಬರೆದ ಈ ಪತ್ರ ಸಂಚಲನ ಮೂಡಿಸಿದೆ. ಹಿರಿಯ ಅಧಿಕಾರಿಗಳಿಗೆ ಈ ಕುರಿತು ಸುದೀರ್ಘವಾದ ಪತ್ರ ಬರೆಯಲಾಗಿದ್ದು, ಎಲ್ಲರೂ ದಂಗಾಗುವಂತೆ ಮಾಡಿದೆ.
ಮೀರತ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC) ಕಾನ್ಸ್‌ಟೇಬಲ್ ಈ ಒಂದು ವಿಲಕ್ಷಣ ಚರ್ಚೆಗೆ ಕಾರಣವಾಗಿದ್ದಾರೆ. ಕಳೆದ ಫೆಬ್ರವರಿ 16, 17ರಂದು ಕಾನ್ಸ್‌ಟೇಬಲ್ ಸರಿಯಾದ ಸಮಯಕ್ಕೆ ಅಧಿಕಾರಿಗಳ ಮೀಟಿಂಗ್‌ಗೆ ಬಂದಿರಲಿಲ್ಲ. ಕರ್ತವ್ಯದಲ್ಲಿ ಪದೇ, ಪದೇ ನಿರ್ಲಕ್ಷ್ಯ ಧೋರಣೆಯಿಂದ ಶಿಸ್ತು ಉಲ್ಲಂಘನೆಯಾಗುತ್ತಿದೆ ಎಂದು ಪರಿಗಣಿಸಲಾಗಿತ್ತು.
ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದ ಕಾನ್ಸ್‌ಟೇಬಲ್‌ಗೆ PAC ಬೆಟಾಲಿಯನ್ ಇನ್‌ಚಾರ್ಜ್ ಡಾಲ್ನಾಯಕ್ ಮಧುಸೂದನ್ ಶರ್ಮಾ ಅವರು ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾನ್ಸ್‌ಟೇಬಲ್ ಪತ್ರ ಬರೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ದೊಡ್ಡ ಚರ್ಚೆಗೆ ಆಹಾರವಾಗಿದೆ.
ಇದನ್ನೂ ಓದಿ: ನಟ್ಟು, ಬೋಲ್ಟ್ ಹೇಳಿಕೆಯ ಎಫೆಕ್ಟ್.. ತರುಣ್ ಸುಧೀರ್, ರಾಣಾ ಸಿನಿಮಾ ಶೂಟಿಂಗ್ ಮೇಲೆ ಏಕಾಏಕಿ ದಾಳಿ!
ಕಾನ್ಸ್‌ಟೇಬಲ್ ಬರೆದ ಪತ್ರದಲ್ಲಿ ಏನಿದೆ?
ತಾನು ಡ್ಯೂಟಿಗೆ ಯಾಕೆ ಸರಿಯಾದ ಸಮಯಕ್ಕೆ ಬರಲು ಆಗುತ್ತಿಲ್ಲ ಅನ್ನೋ ಈ ನೋಟಿಸ್‌ಗೆ ಕಾನ್ಸ್‌ಟೇಬಲ್ ಉತ್ತರಿಸಿದ್ದಾರೆ. ನನ್ನ ಹೆಂಡತಿ ನನಗೆ ದುಃಸ್ವಪ್ನವಾಗಿ ಕಾಡುತ್ತಿದ್ದಾಳೆ. ಕನಸಿನಲ್ಲಿ ನನ್ನ ಹೆಂಡತಿ ನನ್ನ ಎದೆಯ ಮೇಲೆ ಕುಳಿತು ನನ್ನ ರಕ್ತವನ್ನು ಕುಡಿಯಲು ಪ್ರಯತ್ನಿಸುತ್ತಾಳೆ. ಈ ಕನಸಿನಿಂದ ರಾತ್ರಿ ವೇಳೆ ನಾನು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಹೀಗಾಗಿ ಮೀಟಿಂಗ್‌ಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ನಾನು ಮತ್ತು ನನ್ನ ಹೆಂಡತಿಯ ಮಧ್ಯೆ ನಡೆಯುತ್ತಿರುವ ಕೌಟುಂಬಿಕ ಕಲಹ ನನಗೆ ತೊಂದರೆಯಾಗಿದೆ. ಕನಸಿನಲ್ಲಿ ನನ್ನ ಹೆಂಡತಿ ನನ್ನ ಸಾಯಿಸಲು ಬರುತ್ತಾಳೆ. ರಾತ್ರಿ ನನ್ನ ಹೆಂಡತಿ ಕನಸಿನಲ್ಲಿ ಬರುವುದರಿಂದ ನಿದ್ರಾಹೀನತೆಗೆ ಒಳಗಾಗಿದ್ದೇನೆ. ಹೀಗಾಗಿ ಬೆಳಗ್ಗೆ ಆಫೀಸ್‌ಗೆ ಬರಲು ತಡವಾಗುತ್ತಿದೆ. ನನಗೆ ಮಾನಸಿಕ ಖಿನ್ನತೆ ಇದ್ದು ಚಿಕಿತ್ಸೆಯ ಅಗತ್ಯವಿದೆ. ನನಗೆ ಆಧ್ಯಾತ್ಮಿಕತೆಯ ಕಡೆಗೆ ಒಲವಿದ್ದು, ನಾನು ಆ ದೇವರ ಪಾದ ಸೇರಲು ಬಯಸುತ್ತಿದ್ದೇನೆ ಎಂದು ಭಾವನಾತ್ಮಕವಾಗಿ ವಿವರಿಸಿದ್ದಾರೆ.
ಮೇಲಾಧಿಕಾರಿಗಳಿಗೆ ಕಾನ್ಸ್‌ಟೇಬಲ್ ಬರೆದ ಪತ್ರ ಹಾಗೂ ಹೆಂಡತಿ ಕಿರುಕುಳದ ಬಗ್ಗೆ ಬರೆದಿರುವ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC) ಗಂಭೀರವಾಗಿ ಪರಿಗಣಿಸಿದ್ದು, ಆಡಳಿತಾತ್ಮಕ ತನಿಖೆಗೆ ಆದೇಶಿಸಿದೆ. ಮೇಲಾಧಿಕಾರಿಗಳಿಗೆ ಬರೆದ ಪತ್ರ ವೈರಲ್ ಆಗಿದ್ದಕ್ಕೂ ಕಾನ್ಸ್‌ಟೇಬಲ್‌ಗೆ ತಕ್ಕ ಶಿಕ್ಷೆಯಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ