/newsfirstlive-kannada/media/post_attachments/wp-content/uploads/2025/05/UP_NEWS.jpg)
ಲಕ್ನೋ: ಮದುವೆಯಾದ ಕೆಲವೇ ಕೆಲವು ಕ್ಷಣಗಳಲ್ಲಿ ವರ ಜೀವ ಬಿಟ್ಟಿರುವಂತಹ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಬಿಂಡ್ಕಿ ತಹಸಿಲ್ ಪ್ರದೇಶದಲ್ಲಿ ನಡೆದಿದೆ.
ಬಿಂಡ್ಕಿ ತಹಸಿಲ್ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಛಿವಾಲಿ ಗ್ರಾಮದ ನಿವಾಸಿ ಸುರೇಶ್ ಕುಮಾರ್ ಎನ್ನುವರು ತಮ್ಮ ಮಗಳು ಸಂಜನಾಳ ಮದುವೆಯನ್ನು ಕಾನ್ಪುರ ನಗರದ ನೌಬಸ್ತಾ ಗ್ರಾಮದ ನಿವಾಸಿ ಶ್ಯಾಮ್ ಸುಂದರ್ ಅವರ ಮಗ ಮೋನು ಗೌತಮ್ ಜೊತೆ ನಿಶ್ಚಯಿಸಿದ್ದರು. ಅಂದುಕೊಂಡಂತೆ ಮದುವೆ ಸಮಾರಂಭ ಎಲ್ಲ ಯಾವುದೇ ಅಡೆತಡೆ ಇಲ್ಲದೇ ಸಡಗರದಿಂದ, ಅದ್ಧೂರಿಯಾಗಿ ನೆರವೇರಿತ್ತು.
ರಾತ್ರಿಯ ವೇಳೆಗೆ ವಿವಾಹದ ಬಹುತೇಕ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡಿದ್ದರಿಂದ ಮದುವೆ ಊಟ ಕೂಡ ಭರ್ಜರಿಯಾಗಿ ಸಾಗಿತ್ತು. ಇತ್ತ ವಧುವನ್ನು ಅವರ ತವರು ಮನೆಗೆ ಕಳುಹಿಸಿ ಕೊಡುವ ಶಾಸ್ತ್ರ ನಡೆಯುತ್ತಿತ್ತು. ಆದರೆ ಈ ವೇಳೆ ಇದ್ದಕ್ಕೆ ಇದ್ದಾಗೆ ಮೋನು ಗೌತಮ್ ಪ್ರಜ್ಞೆ ತಪ್ಪಿ ಕುಸಿದು ನೆಲಕ್ಕೆ ಬಿದ್ದಿದ್ದಾನೆ. ಸ್ಥಳದಲ್ಲಿದ್ದ ಎಲ್ಲರೂ ಗಾಬರಿಯಿಂದ ಆತಂಕ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:RCBಗೆ ಶಾಕ್ ಕೊಡ್ತಾರಾ ಕ್ಯಾಪ್ಟನ್ ರಜತ್.. ಕೊಹ್ಲಿ ಅಲ್ಲ, ವಿಕೆಟ್ ಕೀಪರ್ಗೆ ನಾಯಕನ ಪಟ್ಟ?
ತಕ್ಷಣ ವರನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ವರನ ಸ್ಥಿತಿ ಪರೀಕ್ಷಿಸಿ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕಾನ್ಪುರಕ್ಕೆ ಕರೆದೊಯ್ಯಲು ಸೂಚಿಸಿದರು. ಕುಟುಂಬವು ವರನನ್ನು ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕರೆದೊಯ್ಯುತ್ತಿದ್ದಾಗ, ದಾರಿಯಲ್ಲೇ ವರ ಉಸಿರು ಚೆಲ್ಲಿದ್ದಾನೆ. ಇದರಿಂದ ವಧುವನ್ನು ಅಲ್ಲಿಂದ ತವರಿಗೆ ಕಳುಹಿಸಲು ಆಗಿಲ್ಲ. ಗಂಡ ಪ್ರಾಣ ಬಿಟ್ಟಿದ್ದು, ತವರಿಗೆ ಹಿಂದಿರಗಲು ಆಗದಿರುವುದಕ್ಕೆ ವಧು ಕಣ್ಣೀರು ಹಾಕಿದ್ದಾಳೆ ಎಂದು ಹೇಳಲಾಗುತ್ತಿದೆ.
ಇನ್ನು ಮದುವೆಗೂ ಮೊದಲೇ ವರನ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದಕ್ಕೆ ಈ ಘಟನೆಗೆ ಕಾರಣವಾಗಿದೆ. ಹೀಗಾಗಿ ವರನ ಕಡೆಯವರು ವರದಕ್ಷಿಣೆ ಮತ್ತು ಮದುವೆ ಖರ್ಚು ಕೊಡಬೇಕು ಎಂದರೆ ಒತ್ತಾಯ ಮಾಡಿದ್ದಾರೆ. ಸದ್ಯ ಈ ಪಂಚಾಯತಿ ಪೊಲೀಸರ ಬಳಿಗೆ ಹೋಗಿದ್ದು ಎರಡು ಕಡೆಯ ಹಿರಿಯರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ