ಮಹಾಕುಂಭಮೇಳಕ್ಕಾಗಿ 76ನೇ ಜಿಲ್ಲೆ ಘೋಷಣೆ ಮಾಡಿದ ಉತ್ತರ ಪ್ರದೇಶ ಸರ್ಕಾರ; ಇದರ ವಿಶೇಷ ಏನು?

author-image
Gopal Kulkarni
Updated On
ಮಹಾಕುಂಭಮೇಳಕ್ಕಾಗಿ 76ನೇ ಜಿಲ್ಲೆ ಘೋಷಣೆ ಮಾಡಿದ ಉತ್ತರ ಪ್ರದೇಶ ಸರ್ಕಾರ; ಇದರ ವಿಶೇಷ ಏನು?
Advertisment
  • ಉತ್ತರಪ್ರದೇಶದ 76ನೇ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ ಮಹಾಕುಂಭಮೇಳ
  • ಕುಂಭಮೇಳ ಆಯೋಜನೆಯನ್ನು ಸಮರ್ಥವಾಗಿ ನಿರ್ವಹಿಸಲು ಈ ನಿರ್ಧಾರ
  • ಸಿಎಂ ಯೋಗಿ ಆದಿತ್ಯನಾಥ ಸರ್ಕಾರದಿಂದ ಘೋಷಣೆಯಾದ ಹೊಸ ಜಿಲ್ಲೆ

ಉತ್ತರ ಪ್ರದೇಶ ದೇಶದಲ್ಲಿಯೇ ಅತಿದೊಡ್ಡ ರಾಜ್ಯವಾಗಿ ಗುರುತಿಸಿಕೊಂಡಿದೆ. ಈ ರಾಜ್ಯದ ಒಡಲಲ್ಲಿ ಒಟ್ಟು 75 ಜಿಲ್ಲೆಗಳಿವೆ. ಈಗ ಮತ್ತೊಂದು ಹೊಸ ಜಿಲ್ಲೆಯನ್ನು ಸೃಷ್ಟಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಚಿಂತನೆ ನಡೆಸಿದೆ. ಪ್ರಯಾಗರಾಜ್​ ಜಿಲ್ಲೆಯಲ್ಲಿ ನಡೆಯುವ ಮಹಾಕುಂಭಮೇಳ ಪ್ರದೇಶವನ್ನೇ ಹೊಸ ಜಿಲ್ಲೆಯನ್ನಾಗಿ ಘೋಷಿಸಲು ಯೋಗಿ ಸರ್ಕಾರ ನಿರ್ಧರಿಸಿದೆ. ಜಿಲ್ಲೆಗೆ ಮಹಾಕುಂಭಮೇಳ ಎಂದೇ ಹೆಸರಿಡಲು ಸಿದ್ಧತೆಗಳು ನಡೆಇದೆ. ಈಗಾಗಲೇ 75 ಜಿಲ್ಲೆಗಳನ್ನು ಹೊಂದಿರುವ ಉತ್ತರಪ್ರದೇಶ ಮಹಾಕುಂಭಮೇಳದ ಮೂಲಕ 76 ಜಿಲ್ಲೆಗಳನ್ನು ಹೊಂದಿದ ರಾಜ್ಯವಾಗಲಿದೆ.

ಇದನ್ನೂ ಓದಿ:ಇಲ್ಲೊಂದು ಅದ್ಭುತ ಹಳ್ಳಿ! ಇಲ್ಲಿ ಎಣ್ಣೆ ಕುಡಿಯಂಗಿಲ್ಲ.. ಚಟಕ್ಕೆ ಬಿದ್ದವ್ರಿಗೆ ಎಂಟ್ರಿಯೇ ಇಲ್ಲ..

ಪ್ರತಿ ಬಾರಿ ನಡೆಯುವು ಮಹಾಕುಂಭಮೇಳವನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ನಿರ್ವಹಿಸಲು ಅಂತಲೇ ಈ ಒಂದು ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ಆಡಳಿತ ವ್ಯವಸ್ಥೆಗೆ ಚುರುಕುಮುಟ್ಟಿಸುವ ಕಾರ್ಯ ಮಾಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ. ಮಹಾಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. 2025ರ ಜನವರಿಯಲ್ಲಿ ಮಹಾಕುಂಭಮೇಳವನ್ನು ನಡೆಸಲಾಗುವುದು ಹೀಗಾಗಿ ಈ ಒಂದು ಮಹಾ ಸಂಭ್ರಮವನ್ನು ಸಮರ್ಥವಾಗಿ ನಿಭಾಯಿಸಲು ಹೊಸ ಜಿಲ್ಲೆಯನ್ನು ಘೋಷಿಸಲು ಯುಪಿ ಸರ್ಕಾರ ಸಜ್ಜಾಗಿದೆ.

ಮಹಾಕುಂಭಮೇಳ ಜಿಲ್ಲೆಯ ವ್ಯಾಪ್ತಿಯು ಈ ರೀತಿಯಾಗಿದೆ.
ಮಹಾಕುಂಭಮೇಳ ನಡೆಯುವ ಪ್ರದೇಶ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳನ್ನು ಸೇರಿ ಅನುಬಂಧ 1 ರ ಅನ್ವಯ ಜಿಲ್ಲೆಯೆಂದು ಘೋಷಿಸಲಾಗಿದೆ.

ಜಿಲ್ಲಾ ಮ್ಯಾಜಿಸ್ಟ್ರೆಟ್​, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್​ನ ಎಲ್ಲ ಅಧಿಕಾರಗಳು ಪ್ರಯಾಗರಾಜ್ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತವೆ. ಸೆಕ್ಷನ್ 14 (1) ಸಿವಿಲ್ ಡಿಫೆನ್ಸ್ ಕೋಡ್​ 2023ರ ಇತರ ಸೆಕ್ಷನ್​ಗಳ ಅನ್ವಯ ಈ ನಿರ್ಧಾರಕ್ಕೆ ಬರಲಾಗಿದೆ.

ದೇಶದ ಎಲ್ಲಾ ರಾಜ್ಯದ ಸಿಎಂಗಳಿಗೆ ಆಹ್ವಾನ
ಈ ಬಾರಿ ಅಂದ್ರೆ 2025ರಲ್ಲಿ ನಡೆಯುವ ಮಹಾಕುಂಭಮೇಳದ ವೈಭವನ್ನು ನೋಡಲು ದೇಶದ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಆಹ್ವಾನ ನೀಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಲಖನೌನ ಲೋಕಸಭಾ ಭವನದಲ್ಲಿ ನವೆಂಬರ್ 29 ರಂದು ನಡೆದ ಸಭೆಯಲ್ಲಿ ಈ ಒಂದು ನಿರ್ಧಾರಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಬಂದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:Fengal Cyclone; ಬೆಟ್ಟದಿಂದ ಮನೆಗಳ ಮೇಲೆ ಉರುಳಿದ ಬೃಹತ್​ ಬಂಡೆಗಳು.. ಮಕ್ಕಳು ಸಿಲುಕಿರುವ ಶಂಕೆ

ಕುಂಭಮೇಳೆ ಪ್ರತಿ ಮೂರು ವರ್ಷಕ್ಕೊಮ್ಮೆ , ಅರ್ಧ ಕುಂಭಮೇಲೆ ಪ್ರತಿ ಆರು ವರ್ಷಕ್ಕೊಮ್ಮೆ ಮತ್ತು ಮಹಾಕುಂಭಮೇಳ ಪ್ರತಿ 12 ವರ್ಷಕ್ಕೊಮ್ಮೆ ನಡೆಯುತ್ತವೆ. 2013ರಲ್ಲಿ ಈ ಹಿಂದೆ ಮಹಾಕುಂಭಮೇಳ ನಡೆದಿತ್ತು. ಇದಾದ ಮೇಲೆ 2019ರಲ್ಲಿ ಅರ್ಧಕುಂಭಮೇಳ ನಡೆಸಲಾಗಿತ್ತು. 2025 ಜನವರಿಯಲ್ಲಿ ಮಹಾಕುಂಭಮೇಳ ಆಯೋಜನೆ ಮಾಡಲಾಗುತ್ತದೆ. ಕಳೆದ ಬಾರಿ ನಡೆದ ಮಹಾಕುಂಭಮೇಳದಲ್ಲಿ ಸುಮಾರು 5 ಕೋಟಿಗೂ ಅಧಿಕ ಜನರು ಭಾಗಿಯಾಗಿ ಪುನೀತರಾಗಿದ್ದರು. ಈ ಬಾರಿಯೂ ಕೂಡ ದೇಶದ ಮೂಲೆ ಮೂಲೆಯಿಂದ, ವಿದೇಶದಿಂದ ಈ ಮಹಾಕುಂಭಮೇಳಕ್ಕೆ ಭಕ್ತಾದಿಗಳು ಸಾಕ್ಷಿಯಾಗಲಿದ್ದಾರೆ. ಹೀಗಾಗಿ ಇದನ್ನು ಮಹಾಸಂಗಮ ಎಂತಲೂ ಕರೆಯುತ್ತಾರೆ. ಜನವರಿ 13 2025ರಿಂದ ಮಹಾಕುಂಭಮೇಳ ಮಹೋತ್ಸವ ಶುರುವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment