/newsfirstlive-kannada/media/post_attachments/wp-content/uploads/2025/01/LOVER-AND-DAUGHTER.jpg)
ಮಾಡಿದ ಘಟನೆ ಲಖನೌನ ಮಲ್ಲಿಹಾಬಾದ್​​ನ ಇಸಪುರ್ ಗ್ರಾಮದಲ್ಲಿ ನಡೆದಿದೆ. ಪ್ರೇಯಸಿ ತನ್ನನ್ನು ನಿರ್ಲಕ್ಷಿಸಿದಳು ಎಂಬ ಒಂದೇ ಕಾರಣದಿಂದಾಗಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ವಿಕಾಸ್ ಜೈಸ್ವಾಲ್ ಎಂಬ ನೀಚ. 24 ವರ್ಷದ ಗೀತಾ ವಿಕಾಸ್​​ಗೆ ದೂರದಿಂದ ಸಂಬಂಧಿಯಾಗಬೇಕು ಆಕೆ ತನ್ನೊಂದಿಗೆ ನಡೆದುಕೊಂಡ ರೀತಿಯಿಂದಾಗಿ ನಾನು ಆಕೆಯ ಜೀವವನ್ನು ತೆಗೆದುಕೊಂಡಿದ್ದಾನೆ ಎಂದು ವಿಕಾಸ್ ಪೊಲೀಸರೆದುರು ಹೇಳಿಕೊಂಡಿದ್ದಾನೆ.
ಇತ್ತೀಚೆಗೆ ಗೀತಾ ಹಣಕಾಸು ಹಾಗೂ ಭಾವನಾತ್ಮಕ ವಿಷಯವಾಗಿ ವಿಕಾಸ್ ಜೈಸ್ವಾಲ್​ನನ್ನು ನಿರ್ಲಕ್ಷಿಸಲು ಆರಂಭಿಸಿದ್ದಳು. ಗೀತಾಳ ಪತಿ ಪ್ರಕಾಶ್​ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಮಕ್ಕಳನ್ನು ನೋಡಿಕೊಳ್ಳುವಂತೆ ಗೀತಾಳನ್ನು ಊರಲ್ಲಿಯೇ ಬಿಟ್ಟು ಮುಂಬೈಗೆ ತೆರಳಿದ್ದರು. ಗೀತಾ ದೀಪಿಕಾ ಹಾಗೂ ನಾಲ್ಕು ವರ್ಷದ ದೀಪಾಂಶು ಎಂಬ ಮಕ್ಕಳೊಂದಿಗೆ ಗೀತಾ ವಾಸವಿದ್ದಳು. ಜನವರಿ 15 ರಂದು ದೀಪಾಂಶು ಸಂಬಂಧಿಕರ ಮನೆಗೆ ತೆರಳಿದ್ದ. ಗೀತಾ ಮತ್ತು ದೀಪಿಕಾ ಇಬ್ಬರೇ ಮನೆಯಲ್ಲಿದ್ದರು. ಸಂಬಂಧಿಕರು ಹಲವು ಬಾರಿ ಆಕೆಯನ್ನು ಸಂಪರ್ಕಿಸಲು ನೋಡಿದಾಗ ಸಂಪರ್ಕಕ್ಕೆ ಸಿಗದೇ ಇದ್ದ ಸಂದರ್ಭದಲ್ಲಿ ಸಂಬಂಧಿಕರು ಮನೆಗೆ ಧಾವಿಸಿದ ಬಂದಿದ್ದಾರೆ. ಮನೆಯ ಅಟ್ಟದ ಮೇಲೆ ದೀಪಿಕಾ ಹಾಗೂ ಗೀತಾಳ ಮೃತದೇಹ ಬಿದ್ದಿದ್ದನ್ನು ಕಂಡು ಪೊಲೀಸರಿಗೆ ಕರೆ ಮಾಡಿದ್ದಾರೆ.
ಇನ್ನು ತನಿಖೆಗೆ ಇಳಿದ ಪೊಲೀಸರು ಗೀತಾಳ ಮೊಬೈಲ್ ಚೆಕ್ ಮಾಡಿ ನೋಡದಾಗಿ ಜಸ್ವಾಲ್ ಕಳೆದ 11 ತಿಂಗಳಲ್ಲಿ ಆಕೆಗೆ 1600 ಕರೆಗಳನ್ನು ಮಾಡಿದ್ದ. ಇದಾದ ಬಳಿಕ ಗೀತಾಳ ಮಗ ದೀಪಾಂಶು ಜೈಸ್ವಾಲ ಆಗಾಗ ತಮ್ಮ ಮನೆಗೆ ಬಂದು ಹೋಗುತ್ತಿರುವುದನ್ನು ಹೇಳಿದ ಇದರ ಆಧಾರದ ಮೇಲೆ ಪೊಲೀಸರು ವಿಕಾಸ್​ ಜೈಸ್ವಾಲ್​ನನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಗೀತಾ ಜೊತೆ ಸಂಬಂಧ ಇದ್ದಿದ್ದನ್ನು ಒಪ್ಪಿಕೊಂಡಿದ್ದಾನೆ. ಕೋವಿಡ್ 19 ಲಾಕ್​ಡೌನ್ ಸಂದರ್ಭದಲ್ಲಿ ಆಕೆ ಗಂಡನೊಂದಿಗೆ ತುಂಬಾ ದೂರವಿದ್ದಳು. ಈ ವೇಳೆ ಆಕೆಗೆ ತನ್ನ ಗಳಿಕೆಯ ಸಾಕಷ್ಟು ದುಡ್ಡನ್ನು ನೀಡಿದ್ದೆ. ಆಕೆ ಹೇಳಿದ್ದರಿಂದಲೇ ನಾನು ಕುವೈತ್​ನಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಬಂದೆ ನಂತರ ಆಕೆ ನನ್ನನ್ನು ಇಗ್ನೋರ್ ಮಾಡಲು ಆರಂಭಿಸಿದಳು ಅದಕ್ಕೆ ಕೋಪ ಬಂದು ನಾನು ಈ ಕೃತ್ಯ ಮಾಡಿದೆ ಎಂದು ಹೇಳಿದ್ದಾನೆ.
ಜನವರಿ 15 ರಂದು ಜೈಸ್ವಾಲ್ ಮನೆಯ ಪೈಪ್​ನನ್ನು ಏರಿ ಗೀತಾಳ ಮನೆಯನ್ನು ಸೇರಿದ್ದಾನೆ. ಆಕೆಯನ್ನು ಎಬ್ಬಿಸಿದ್ದಾನೆ. ಆಕೆ ಕಿರುಚಾಡುತ್ತಾ ತನ್ನನ್ನು ಬಿಟ್ಟು ಬಿಡುವಂತೆ ಕೇಳಿದ್ದಾಳೆ. ಕೂಡಲೇ ಅಲ್ಲಿಯೇ ಇದ್ದ ದೊಣ್ಣೆಯಿಂದ ಗೀತಾಳ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಗೀತಾಳ ಮಗು ದೀಪಿಕಾ ಕೂಡ ಎಚ್ಚರಗೊಂಡಿದೆ ಆಕೆಯನ್ನು ಈ ನೀಚ ಉಸಿರು ನಿಲ್ಲಿಸಿದ್ದಾನೆ. ನಂತರ ಅಡುಗೆ ಮನೆಗೆ ಹೋಗಿ ಚಾಕುವನ್ನು ತಂದು ಇಬ್ಬರ ನಾಲಿಗೆಯನ್ನು ಕೂಡ ಕತ್ತರಿಸಿದ್ದಾನೆ.
ಇದನ್ನೂ ಓದಿ:ಗೋಮೂತ್ರದ ಪ್ರಯೋಜನಗಳನ್ನು ಹೊಗಳಿದ ಮದ್ರಾಸ್​ನ ಐಐಟಿ ನಿರ್ದೇಶಕ; ಹೊತ್ತಿಕೊಂಡ ವಿವಾದ
ಕೊಲೆ ಮಾಡದ ಬಳಿಕ ವಿಕಾಸ್ ಜೈಸ್ವಾಲ್​ ತನ್ನ ಕೈಯನ್ನು ತೊಳೆದುಕೊಂಡು ಈ ಹಿಂದೆ ಗೀತಾಳಿಗೆ ನೀಡಿದ್ದ ಬಂಗಾರದ ಗಿಫ್ಟ್​ಗಳನ್ನ ಕದ್ದು ಬಳಿಕ ತನ್ನ ಬೈಕ್ ಮೇಲೆ ಎಸ್ಕೇಪ್ ಆಗಿದ್ದಾನೆ. ಮಾರನೆ ದಿನ ಕ್ರೈಂ ನಡೆದ ಸ್ಥಳಕ್ಕೆ ತನಗೇನೂ ಗೊತ್ತೆ ಇಲ್ಲ ಎಂಬಂತೆ ಬಂದು ನಾಟಕವಾಡಿ ಕೇಸ್​ನ ದಿಕ್ಕು ತಪ್ಪಿಸಲು ನೋಡಿದ್ದಾನೆ. ಕೊನೆಗೆ ಜೈಸ್ವಾಲ್​ನನ್ನು ಬಂಧಿಸಿದ ಪೊಲೀಸರು ಆತನಿಂದ ಗೀತಾಗೆ ಗಿಫ್ಟ್ ಕೊಟ್ಟಿದ್ದ ಚಿನ್ನಾಭರಣಗಳನ್ನು, 760 ರೂಪಾಯಿ ದುಡ್ಡು, ಹತ್ಯೆಗೆ ಬಳಸಿದ ಆಯುಧಗಳು ಹಾಗೂ 760 ರೂಪಾಯಿ ದುಡ್ಡನ್ನು ವಶಕ್ಕೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us