Advertisment

VIDEO: ಇಬ್ಬರೂ ಚೆನ್ನಾಗಿರಿ.. ಮಡದಿಯನ್ನ ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿ!

author-image
Gopal Kulkarni
Updated On
VIDEO: ಇಬ್ಬರೂ ಚೆನ್ನಾಗಿರಿ.. ಮಡದಿಯನ್ನ ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿ!
Advertisment
  • 8 ವರ್ಷ ಪತಿಯೊಂದಿಗೆ ದಾಂಪತ್ಯ ನಿರ್ವಹಿಸಿದ ಪತ್ನಿ
  • ಬಳಿಕ ಆಕೆಯ ಬದುಕಲ್ಲಿ ಬಂದ ಮತ್ತೊಬ್ಬ ಪ್ರಿಯಕರ
  • ಅವಳ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿ

ನೀವು ಹಿಂದಿ ಸಿನಿಮಾದ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾ ನೋಡಿದ್ದರೆ ಅರ್ಥವಾಗುತ್ತೆ. ಇಷ್ಟವಿಲ್ಲದವನನ್ನು ಮದುವೆಯಾದ ತನ್ನ ಪತ್ನಿಯನ್ನು ಆತ ಆಕೆಯ ಪ್ರೇಮಿಯೊಂದಿಗೆ ಒಂದು ಮಾಡಲು ಒದ್ದಾಡುವ ಕಥೆಯದು. ಕೊನೆಗೆ ಪ್ರೇಮಿಯನ್ನು ತೊರೆದು ಪತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ ನಾಯಕಿ. ಇದೇ ಮಾದರಿಯ ಕಥೆ ಉತ್ತರಪ್ರದೇಶದಲ್ಲಿ ನಡೆದಿದೆ. ಆದರೆ ಕ್ಲೈಮ್ಯಾಕ್ಸ್ ಚೆಂಜ್​, ಸ್ವಲ್ಪ ಸ್ಟೋರಿಯಲ್ಲೂ ಟ್ವಿಸ್ಟ್ ಇದೆ.

Advertisment

ಇದನ್ನೂ ಓದಿ:ನನ್ನ ಪತಿ ಸಲಿಂಗಕಾಮಿ, ಅವರಿಗೆ ಹುಡುಗರಂದ್ರೆ ಇಷ್ಟ.. ದೀಪಕ್ ಹೂಡಾ ವಿರುದ್ಧ ಇದೆಂಥ ಆರೋಪ..!

ಬಬಲೂ ಮತ್ತು ರಾಧಿಕಾ 2017ರಲ್ಲಿಯೇ ಮದುವೆಯಾಗಿರುತ್ತಾರೆ. ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಎರಡು ಮಕ್ಕಳು ಕೂಡ ಇವೆ. ಮದುವೆಯಾಗಿ 8 ವರ್ಷ ಕಳೆದ ದಾಂಪತ್ಯದಲ್ಲಿ ಎಲ್ಲಿಯೂ ಒಬ್ಬ ಅನುಮಾನ ಎಂಬ ಆಗಂತುಕ ಬಂದು ಕೂರುತ್ತಾನೆ. ಬಬಲೂ, ಸಂಸಾರವೆಂಬ ಬದುಕಿನ ಬಂಡಿ ಸಾಗಿಸಲು ಮನೆಯಿಂದ ದೂರ ಹೋಗಿ ದುಡಿಯುತ್ತಿರುತ್ತಾನೆ. ಇದೇ ವೇಳೆ ರಾಧಿಕಾಗೆ ಅದೇ ಊರಿನಲ್ಲಿ ಒಬ್ಬನ ಜೊತೆ ಪ್ರೇಮಾಂಕುರವಾಗಿ ಅವನೊಂದಿಗೆ ಸಂಬಂಧವನ್ನು ಬಹಳ ವರ್ಷದಿಂದಲೇ ನಡೆಸುತ್ತಾ ಬಂದಿರುತ್ತಾಳೆ. ಇದು ಬಬಲೂ ಕುಟುಂಬದ ಗಮನಕ್ಕೆ ಬಂದಾಗ ಅವರು ಅದನ್ನು ಬಬಲೂಗೆ ತಿಳಿಸುತ್ತಾರೆ.

ಇದನ್ನೂ ಓದಿ:ಐಶ್ವರ್ಯ ರೈ ಕಾರು ಅಪಘಾತ; ಆತಂಕ ವ್ಯಕ್ತಪಡಿಸಿದ ಅಭಿಮಾನಿಗಳು, ಮುಂದೇನಾಯ್ತು?

Advertisment

ಇದನ್ನು ಬಗೆಹರಿಸಲು ಬಬಲೂ ಸಾಕಷ್ಟು ಪ್ರಯತ್ನ ಮಾಡುತ್ತಾನೆ. ಪತ್ನಿಯ ಮನವೊಲಿಸಲು ಪ್ರಯತ್ನಿಸಿ ಸೋತಾಗ, ಕೊನೆಗೆ ಬಬಲೂ ಬೇರೆ ದಾರಿ ಕಾಣದೇ ತನ್ನ ಪತ್ನಿಯನ್ನು ಆತನ ಪ್ರಿಯಕರನೊಂದಿಗೆ ವಿವಾಹ ಮಾಡಿಸಲು ಸಿದ್ಧನಾಗುತ್ತಾನೆ. ಮೊದಲು ಕೋರ್ಟ್​​ಗೆ ಹೋದ ಬಬಲೂ ನಂತರ ಬಂದು ತನ್ನ ಪತ್ನಿಯ ವಿವಾಹವನ್ನು ಆಕೆಯ ಪ್ರಿಯಕರನೊಂದಿಗೆ ಒಂದು ಮಂದಿರದಲ್ಲಿ ಮಾಡಿಸುತ್ತಾನೆ. ಇಬ್ಬರೂ ಪ್ರೇಮಿಗಳು ಹಾರವನ್ನು ಬದಲಾಯಿಸಿಕೊಂಡು ಮದುವೆಯಾಗುತ್ತಾರೆ.


">March 26, 2025

ಇಷ್ಟೆಲ್ಲಾ ಮಾಡಿದ ಪತಿ ಕೊನೆಗೆ ಪತ್ನಿ ರಾಧಿಕಾಗಳಲ್ಲಿ ಒಂದೇ ಒಂದು ವಿನಂತಿ ಮಾಡಿಕೊಳ್ಳುತ್ತಾನೆ. ನೀನು ಅವನನ್ನು ಮದುವೆಯಾಗಿದ್ದೀಯಾ, ಇಬ್ಬರೂ ಚೆನ್ನಾಗಿರಿ. ಆದ್ರೆ ನನ್ನ ಎರಡೂ ಮಕ್ಕಳನ್ನು ನನ್ನ ಬಳಿಯೇ ಬಿಡು. ಕಷ್ಟವೋ ಸುಖವೋ ಅವೆರಡನ್ನು ನಾನು ಸಾಕಿಕೊಳ್ಳುತ್ತೇನೆ. ಇದೊಂದೇ ನಾನು ನಿನ್ನಲ್ಲಿ ಬೇಡಿಕೊಳ್ಳುವ ಕೊನೆಯ ಬೇಡಿಕೆ ಎಂದು ಕೇಳಿಕೊಳ್ಳುತ್ತಾನೆ. ಕೊನೆಗೆ ಅದಕ್ಕೆ ರಾಧಿಕಾ ಒಪ್ಪಿಗೆ ನೀಡಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ಹೊರಡುತ್ತಾಳೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment