/newsfirstlive-kannada/media/post_attachments/wp-content/uploads/2025/03/WIFE-AND-LOVER.jpg)
ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಅದೊಂದು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮುಸ್ಕಾನ್ ಎಂಬ ಮಹಿಳೆ ಪ್ರಿಯಕರನ ಜೊತೆ ಸೇರಿ ತುಂಡು ತುಂಡಾಗಿ ಕೊಲೆಗೈದು ಡ್ರಮ್ವೊಂದರಲ್ಲಿ ಹಾಕಿ ಸಿಮೆಂಟ್ ಮಾಡಿದ್ದಳು. ಕೊಲೆ ಪ್ರಕರಣ ಬೆಳಕಿಗೆ ಬರ್ತಿದ್ದಂತೆ. ಉತ್ತರ ಪ್ರದೇಶದಲ್ಲೊಬ್ಬ ವ್ಯಕ್ತಿ. ಜೀವ ಭಯದಿಂದ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿ ಕಳಿಸಿಕೊಟ್ಟಿದ್ದ.. ಆದ್ರೀಗ ಈ ಕೇಸ್‌ಗೆ ಬಿಗ್ಟ್ವಿಸ್ಟ್ ಸಿಕ್ಕಿದೆ.
ಲವರ್ ಜೊತೆ ಪತ್ನಿಯ ವಿವಾಹ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಉತ್ತರ ಪ್ರದೇಶದಲ್ಲಿ ಪತ್ನಿಯನ್ನು ಆಕೆಯ ಪತಿಯೇ ಪ್ರಿಯಕರನ ಜೊತೆ ಮದುವೆ ಮಾಡಿಕೊಟ್ಟ ಪ್ರಕರಣ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ಪತಿಯ ಔದಾರ್ಯಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರನ ಜೊತೆ ಮದುವೆಯಾಗಿದ್ದ ಮಹಿಳೆ ಕೇವಲ ನಾಲ್ಕೇ ದಿನಕ್ಕೆ ಮರಳಿ ಮೊದಲ ಗಂಡನ ಮನೆ ಸೇರಿದ್ದಾಳೆ.
ಇದನ್ನೂ ಓದಿ:15 ಕಿ.ಮೀ ಚೇಸಿಂಗ್.. ಜೀವ ಪಣಕ್ಕಿಟ್ಟು ಟ್ರಕ್ ಚಾಲಕನ ಪ್ರಾಣ ಉಳಿಸಿದ ಲೇಡಿ ಸಿಂಗಂ; ವಿಡಿಯೋ ಇಲ್ಲಿದೆ!
ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ಬಬ್ಲೂ ಎಂಬವರು ಮಾರ್ಚ್ 25ರಂದು ತನ್ನ ಪತ್ನಿ ರಾಧಿಕಾಳನ್ನು ಆಕೆಯ ಪ್ರೇಮಿ ವಿಕಾಸ್ ಜೊತೆ ಮದುವೆ ಮಾಡಿಸಿದ್ದರು. ಅಲ್ಲದೆ, ತನ್ನ ಇಬ್ಬರು ಮಕ್ಕಳನ್ನು ತಾನೇ ಬೆಳೆಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಆದ್ರೆ ಮದುವೆಯಾಗಿ ತನ್ನ ಎರಡನೇ ಗಂಡನ ಮನೆಗೆ ತೆರಳಿದ ಮಹಿಳೆಯನ್ನು ಅವಳ ಅತ್ತೆ ಒಪ್ಪಿಕೊಂಡಿಲ್ಲ. ಈ ಮದುವೆಯಿಂದಾಗಿ ಬಬ್ಲೂ ಹಾಗೂ ಆತನ ಮಕ್ಕಳು ಅನುಭವಿಸುತ್ತಿರುವ ನೋವನ್ನು ಸಹಿಸಲಾಗುತ್ತಿಲ್ಲ ಎಂದು ಯೋಚಿಸಿ, ಸೊಸೆಯನ್ನು ಆಕೆಯ ಮೊದಲ ಗಂಡನ ಬಳಿಗೆ ಮರಳಿ ಕಳುಹಿಸಿದ್ದಾರೆ. ಅಷ್ಟೇ ಅಲ್ಲ ಮಗ ವಿಕಾಸ್ಗೂ ಆತನ ತಾಯಿ, ಬಬ್ಲೂವಿನ ಮುಂದಿನ ಜೀವನದ ಬಗ್ಗೆ ಮನವರಿಕೆ ಮಾಡಿ, ರಾಧಿಕಾಳನ್ನು ಬಬ್ಲೂ ಮನೆಗೆ ಕಳಿಸುವಂತೆ ಮನವೊಲಿಸಿದ್ದಾರೆ.
ಇದನ್ನೂ ಓದಿ:1 ಮುತ್ತಿಗೆ ₹50 ಸಾವಿರ.. ಕಿಸ್ ಕೊಟ್ಟ ಟೀಚರ್ ಕೇಸ್‌ಗೆ 7 ಮುಖಗಳು; ಕಂಪ್ಲೀಟ್ ಹನಿ ಕಹಾನಿ ಇಲ್ಲಿದೆ!
ಪ್ರಿಯಕರನ ಜೊತೆ ಮದುವೆ ಆಗಿ ಹೋದ ಮಹಿಳೆ ವಾಪಸ್ ಬಂದಿದ್ದನ್ನು ನೋಡಿ, ಇಡೀ ಗ್ರಾಮವೇ ಶಾಕ್ ಆಗಿದೆ. ಬಳಿಕ ಗ್ರಾಮದಲ್ಲಿ ಪಂಚಾಯತ್ ಸಭೆ ನಡೆಸಿ ರಾಧಿಕಾ ಮತ್ತು ಆಕೆಯ ಮೊದಲ ಪತಿ ಬಬ್ಲೂನನ್ನು ಒಂದು ಮಾಡಿದ್ದಾರೆ.ರಾಧಿಕಾ ಇನ್ನು ಮುಂದೆ ಮತ್ತೆ ಬಬ್ಲೂ ಜೊತೆ ಇರುತ್ತಾಳೆ. ಬಬ್ಲೂ, ಪತ್ನಿ ಹಾಗೂ ಅವರ ಮಕ್ಕಳನ್ನು ನೋಡಿಕೊಳ್ಳುತ್ತಾನೆ ಎಂದು ಪಂಚಾಯ್ತಿಯಲ್ಲಿ ತೀರ್ಮಾನ ಆಗಿದೆ. ಇದನ್ನು ಬಬ್ಲೂ ಮನಪೂರ್ವಕ ಪಂಚಾಯತ್ ನಿರ್ಧಾರವನ್ನು ಒಪ್ಪಿದ್ದು, ರಾಧಿಕಾಳ ಜವಾಬ್ದಾರಿ ಹೊರಲು ಕೂಡ ಸಹಮತ ವ್ಯಕ್ತಪಡಿಸಿದ್ದಾನೆ. ಅಷ್ಟೇ ಅಲ್ಲ ಭವಿಷ್ಯದಲ್ಲಿ ರಾಧಿಕಾಗೆ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ತಾನೇ ಜವಾಬ್ದಾರಿ ಎಂದು ಪಂಚಾಯತ್ ಮುಂದೆ ಪ್ರತಿಜ್ಞೆ ಮಾಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ