Advertisment

ಮಲಗುವ ಮುನ್ನ ಗಂಡಾಗಿದ್ದ.. ಏಳುವಷ್ಟರಲ್ಲಿ ಹೆಣ್ಣಾದ; ಅಸಲಿಗೆ ಆಗಿದ್ದೇನು?

author-image
Veena Gangani
Updated On
ಮಲಗುವ ಮುನ್ನ ಗಂಡಾಗಿದ್ದ.. ಏಳುವಷ್ಟರಲ್ಲಿ ಹೆಣ್ಣಾದ; ಅಸಲಿಗೆ ಆಗಿದ್ದೇನು?
Advertisment
  • ಸಂತ್ರಸ್ತ ಯುವಕ ಪೊಲೀಸ್​ ಠಾಣೆಗೆ ನೀಡಿದ ದೂರಿನಲ್ಲಿ ಏನಿದೆ ಗೊತ್ತಾ?
  • ನಾನು ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದೇನೆ ಎಂದ ಯುವಕ
  • ಓಂಪ್ರಕಾಶ್‌ ಎಂಬಾತ ಮುಜಾಹಿದ್‌ ಆಸ್ತಿಯ ಮೇಲೆ ಕಣ್ಣು ಹಾಕಿದ್ದ

ವ್ಯಕ್ತಿಯೊಬ್ಬ ಮಲಗುವ ವೇಳೆ ಗಂಡಾಗಿದ್ದ ಆದರೆ ಏಳುವಷ್ಟರಲ್ಲಿ ಹೆಣ್ಣಾಗಿ ಬಿಟ್ಟಿದ್ದಾನೆ. ಹೌದು, ಈ ಘಟನೆ ಮನ್ಸೂರ್‌ಪುರದ ಬೇಗ್ರಾಜ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಸಂಜಕ್ ಗ್ರಾಮದ ನಿವಾಸಿ ಮುಜಾಹಿದ್ (20) ಹೆಣ್ಣಾಗಿ ಬದಲಾಗಿದ್ದಾನೆ.

Advertisment

ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಲಿಂಗ ಪುನರ್ವಿತರಣೆ ಮಾಡಿ ಆತನನ್ನು ಹೆಣ್ಣಾಗಿ ಬದಲಿಸಿದ್ದಾರೆ. ಈ ಘಟನೆಯಲ್ಲಿ ಆತನ ಸ್ನೇಹಿತ ಕೂಡ ವೈದ್ಯರ ಜೊತೆ ಶಾಮಿಲಾಗಿರುವುದು ಬೆಳಕಿಗೆ ಬಂದಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಂದು ಭಾರತ ತಂಡದಲ್ಲಿ 7 ಮಂದಿ ಕರ್ನಾಟಕದವರು.. ಕನ್ನಡಿಗ ಜಾನ್ಸನ್ ಅವ್ರ ಕ್ರಿಕೆಟ್ ಬದುಕಿಗೆ ಮುಳುವಾಗಿದ್ದೇ ಅಲ್ಲಿ..!

ಅಷ್ಟಕ್ಕೂ ಆಗಿದ್ದೇನು..?

ಓಂಪ್ರಕಾಶ್‌ ಎಂಬಾತ ಮುಜಾಹಿದ್‌ ಆಸ್ತಿಯ ಮೇಲೆ ಕಣ್ಣು ಹಾಕಿದ್ದ. ಮುಜಾಹಿದ್​ನನ್ನು ಹೇಗಾದರೂ ಹೆಣ್ಣಾಗಿ ಬದಲಿಸಿ ಆತನನ್ನು ಮದುವೆಯಾಗಿ ಆಸ್ತಿ ಕಬಳಿಸಿ ಲಕ್ನೋಗೆ ಹೋಗಬೇಕೇಂದು ಪ್ಲಾನ್​ ಮಾಡಿದ್ದನಂತೆ. ಹೀಗಾಗಿ ಓಂಪ್ರಕಾಶ್‌ ವೈದ್ಯರ ಜೊತೆ ಸೇರಿ ಮುಜಾಹಿದ್​ ಲಿಂಗವನ್ನು ಬದಲಾಯಿಸಿ ಬಿಟ್ಟಿದ್ದಾನೆ. ಇನ್ನು ಈ ಘಟನೆ ಬಗ್ಗೆ ಮುಜಾಹಿದ್‌ ಪೊಲೀಸರಿಗೆ ದೂರು ನೀಡಿದ್ದಾನೆ. ಆ ದೂರಿನಲ್ಲಿ ಕಳೆದ ಎರಡು ವರ್ಷಗಳಿಂದ ಓಂಪ್ರಕಾಶ್ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದ. ನಾನು ನಿನ್ನನ್ನು ಗಂಡಿನಿಂದ ಹೆಣ್ಣಾಗಿ ಬದಲಿಸಿದ್ದೇನೆ. ಇನ್ನು ನೀನು ನನ್ನ ಜೊತೆಯೇ ವಾಸ ಮಾಡಬೇಕು. ನಾನು ಒಬ್ಬರು ವಕೀಲರ ಜೊತೆ ಮಾತನಾಡಿದ್ದು, ನಿನಗಾಗಿ ಕೋರ್ಟ್ ಮ್ಯಾರೇಜ್‌ಗೆ ವ್ಯವಸ್ಥೆ ಮಾಡಿದ್ದೇನೆ. ಅಲ್ಲದೇ ನಾನು ನಿನ್ನ ತಂದೆಯನ್ನು ಶೂಟ್ ಮಾಡ್ತೇನೆ. ನಂತರ ನಿನ್ನ ಹೆಸರಿಗೆ ಬರುವ ಆಸ್ತಿ ನನಗೂ ಬರುತ್ತದೆ. ನಾನು ಆಸ್ತಿ ಮಾರಿ ಲಕ್ನೋಗೆ ಹೋಗುವೆ ಅಂತ ಓಂಪ್ರಕಾಶ್‌ ನನಗೆ ಹೇಳಿದ್ದಾನೆ ಎಂದು ಮುಜಾಹಿದ್ ಉಲ್ಲೇಖಿಸಿದ್ದಾನೆ.

Advertisment

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರೈತ ಮುಖಂಡ ಶ್ಯಾಮ್ ಪಾಲ್ ನೇತೃತ್ವದ ಬಿಕೆಯು ಸಂಘಟನೆಯ ಸದಸ್ಯರು ಮೆಡಿಕಲ್ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದ್ದರು. ಓಂ ಪ್ರಕಾಶ್ ಹಾಗೂ ಈ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಸಂತ್ರಸ್ತನಾದ ಮುಜಾಹಿದ್‌ಗೆ 2 ಕೋಟಿ ರೂ ಪರಿಹಾರ ನೀಡುವಂತೆ ರೈತ ಮುಖಂಡ ಶ್ಯಾಮ್ ಪಾಲ್ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment