/newsfirstlive-kannada/media/post_attachments/wp-content/uploads/2024/11/Most-Wanted-Criminal.jpg)
ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಆರೋಪಿ ಫಹೀಮ್ ಅಲಿಯಾಸ್ ಎಟಿಎಂನನ್ನು ಯುಪಿಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಿ ಆತನ ಮನೆಯನ್ನು ಬುಲ್ಡೋಜರ್​ನಿಂದ ನೆಲಸಮ ಮಾಡಲಾಗಿದೆ. ಇಡೀ ಭಾರತದಾದ್ಯಂತ ಮನೆಗಳ್ಳತನ ಮಾಡಿದ್ದ ಆರೋಪವನ್ನು ಈ ಆಸಾಮಿ ಫಹೀಮ್ ಹೊಂದಿದ್ದಾನೆ. ಈತನಿಗಾಗಿ ಕರ್ನಾಟಕ ಸೇರಿ ವಿವಿಧ ರಾಜ್ಯದ ಪೊಲೀಸರು ಹುಡುಕಾಟ ನಡೆಸಿದ್ದರು.
ಜೈಲು ಸೇರಿ ಪರೋಲ್ ಮೇಲೆ ಆಚೆ ಬಂದಿದ್ದ ಫಹೀಮ್ ಬಳಿಕ ಎಸ್ಕೇಪ್ ಆಗಿ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಏಪ್ರಿಲ್ 24 ರಂದು ಸಹಕಾರ ನಗರದಲ್ಲಿ ಮನೆಗಳ್ಳತನ ಮಾಡಿದ್ದ. ಮುಸುಕುಧಾರಿಯಾಗಿ ಬಂದು ಮನೆಗಳ್ಳತನ ಮಾಡಿತ್ತು ಇವನ ಜೊತೆ ಇವನ ಗ್ಯಾಂಗ್
ವೈದ್ಯ ಉಮಾಶಂಕರ್ ಎಂಬುವವರ ಮನೆಗೆ ನುಗ್ಗಿ 40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಕಳ್ಳತನದ ವೇಳೆ ಬಂದ ವೈದ್ಯನಿಗೆ ಗನ್ ತೋರಿಸಿ ಎಸ್ಕೇಪ್ ಆಗಿತ್ತು ಈ ಗ್ಯಾಂಗ್. ಪ್ರಕರಣದಲ್ಲಿ ಎ 1 ಆರೋಪಿಯಾಗಿದ್ದ ಫಹೀಮ್​. ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು . ಆದರೆ ಬೆಂಗಳೂರು ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ ಫಹೀಮ್​ನನ್ನು ಸದ್ಯ ಉತ್ತರಪ್ರದೇಶದ ಮೊರದಾಬಾದ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಆತನ ಮನೆಯನ್ನು ನೆಲಸಮಗೊಳಿಸಿದ್ದಾರೆ.
ಈತನ ಬಂಧನದಿಂದ ಈಗ ದೇಶಾದ್ಯಂತ ಒಟ್ಟು 65 ಪ್ರಕರಣಗಳು ಬೆಳಕಿಗೆ ಬಂದಿವೆ. ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯಲು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us