newsfirstkannada.com

ರಾಮನೂರಿನಲ್ಲಿ ಹೆಚ್ಚಿದ ಭದ್ರತೆ; 10 ಸಾವಿರ ಕ್ಯಾಮೆರಾ ಅಳವಡಿಕೆ.. ಅಪರಿಚಿತ ಡ್ರೋನ್​ಗೆ ಏನ್ ಮಾಡ್ತಾರೆ?

Share :

Published January 13, 2024 at 8:15am

    ಜನವರಿ 22ರ ರಾಮನ ಸಮಾರಂಭಕ್ಕಾಗಿ ಕಾಯುತ್ತಿರುವ ಭಕ್ತರು

    ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚು ಮಾಡಿದ ಪೊಲೀಸ್ ಇಲಾಖೆ

    ಬೇರೆ ಜಿಲ್ಲೆ, ರಾಜ್ಯ, ವಿದೇಶಗಳಿಂದ ಭಕ್ತರು ಆಗಮನದ ನಿರೀಕ್ಷೆ

ಲಕ್ನೋ: ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆಯಿಂದ ರಾಮಭಕ್ತರು ಅಯೋಧ್ಯೆಯತ್ತ ಪ್ರಯಾಣಿಸುತ್ತಿರುವ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಲ್ಲಿನ ಪೊಲೀಸ್​ ಇಲಾಖೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಈ ಸಂಬಂಧ ರಾಮನೂರಿನ ಬೀದಿ ಬೀದಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ.

ಜನವರಿ 22ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭದ್ರತೆ ದೃಷ್ಟಿಯಿಂದ ಸುಮಾರು 10 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ. ಬೇರೆಬೇರೆ ಜಿಲ್ಲೆ, ರಾಜ್ಯ, ವಿದೇಶಗಳಿಂದ ರಾಮ ಭಕ್ತರು ಆಗಮಿಸುವುದರಿಂದ ಸಮಸ್ಯೆಗಳು ಉದ್ಭವಿಸದಂತೆ ಪೊಲೀಸರು ಹೆಚ್ಚಿನ ನಿಗಾ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದು ಅಲ್ಲದೇ ಅಯೋಧ್ಯೆ ಜಿಲ್ಲೆಯಾದ್ಯಂತ ಯಾವುದೇ ಅಪರಿಚಿತ ಡ್ರೋನ್​​ ಹಾರಾಟ ಕಂಡುಬಂದರೆ ಅದರ ಮೇಲೆ ನಿಯಂತ್ರಣ ಸಾಧಿಸಲು ಡ್ರೋನ್​ ನಿಗ್ರಹ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಲಾಗಿದೆ. ಇದರ ಜೊತೆಗೆ ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಸಹ ಅಳವಡಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್​​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನೂರಿನಲ್ಲಿ ಹೆಚ್ಚಿದ ಭದ್ರತೆ; 10 ಸಾವಿರ ಕ್ಯಾಮೆರಾ ಅಳವಡಿಕೆ.. ಅಪರಿಚಿತ ಡ್ರೋನ್​ಗೆ ಏನ್ ಮಾಡ್ತಾರೆ?

https://newsfirstlive.com/wp-content/uploads/2024/01/RAM_TEMPLE-1.jpg

Load More