newsfirstkannada.com

ಪಕ್ಕದ ಮನೆಯ ಕಾರಿನ ಗ್ಲಾಸ್​ಗಳನ್ನ ಒಡೆದು ಹಾಕಿದ ಸ್ಕೂಲ್ ಟೀಚರ್​.. ಕಾರಣವೇನು?

Share :

Published April 28, 2024 at 9:37am

Update April 28, 2024 at 10:13am

    ನಿಲ್ಲಿಸಿದ್ದ ಕಾರಿನ ಗ್ಲಾಸ್​ಗಳನ್ನು ಒಡೆಯುವಂತಹ ದ್ವೇಷ ಏನಿತ್ತು?

    ಯಾರು ಇಲ್ಲದ ವೇಳೆ ಕಾರು ಪಾರ್ಕಿಂಗ್​ಗೆ ನುಗ್ಗಿ ಮಹಿಳೆಯಿಂದ ಕೃತ್ಯ

    ಸದ್ಯ ಮಹಿಳೆ ಮಾಡಿದ ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸಿತ್ತಿರುವ ಜನರು

ಲಕ್ನೋ: ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಪಕ್ಕದ ಮನೆಯ ಪಾರ್ಕಿಂಗ್​​ಗೆ ನುಗ್ಗಿ ಅವರ ಕಾರಿನ ಗಾಜುಗಳನ್ನು ಒಡೆದು ಹಾಕಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.

ಶಾಲಾ ಶಿಕ್ಷಕಿ ಪಾರುಲ್ ಶರ್ಮಾ ಪಕ್ಕದ ಮನೆಯ ಪ್ರಿಯಾ ಗೋಯಲ್ ಎಂಬುವರ ಮನೆಯ ಹೊರಗೆ ​ ನಿಲ್ಲಿಸಿದ್ದ ಕಾರಿನ ಗ್ಲಾಸ್​ಗಳನ್ನು ಇಟ್ಟಿಗೆಯಿಂದ ಹೊಡೆದು ಹಾಕಿದ್ದಾರೆ. ಕಾರ್​ನ ಪಾರ್ಕಿಂಗ್​ ಪ್ರದೇಶಕ್ಕೆ ರಾತ್ರಿ 3 ಗಂಟೆ ಸುಮಾರಿಗೆ ನುಗ್ಗಿದ ಶಿಕ್ಷಕಿ ಗ್ಲಾಸ್​ಗಳನ್ನೆಲ್ಲ ಇಟ್ಟಿಗೆಯಿಂದ ಹೊಡೆದು ಪುಡಿ-ಪುಡಿ ಮಾಡಿದ್ದಾಳೆ. ಇನ್ನೂ ಶಿಕ್ಷಕಿಯ ಈ ದುರ್ವರ್ತನೆಯ ದೃಶ್ಯವನ್ನು ಅಲ್ಲಿದ್ದ ಸ್ಥಳೀಯರು ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಮಹಿಳೆಯು ಕಾರಿನ ಗ್ಲಾಸ್​​ಗಳನ್ನು ಹೊಡೆದು ಹಾಕುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ನೆಟ್ಟಿಗರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ದಾಳಿಗೆ ಎರಡೂ ಕುಟುಂಬಗಳ ನಡುವಿನ ಕಲಹವೇ ಕಾರಣ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಕ್ಕದ ಮನೆಯ ಕಾರಿನ ಗ್ಲಾಸ್​ಗಳನ್ನ ಒಡೆದು ಹಾಕಿದ ಸ್ಕೂಲ್ ಟೀಚರ್​.. ಕಾರಣವೇನು?

https://newsfirstlive.com/wp-content/uploads/2024/04/UP_WOMAN-1.jpg

Load More