newsfirstkannada.com

ಅಯೋಧ್ಯೆಗೆ 1 ಸಾವಿರ ಕೆಜಿ ಬೆಲ್ಲ ಕಳುಹಿಸಿದ ರಾಮಭಕ್ತ.. ಆತನ ಮುಂದಿನ ಆಲೋಚನೆ ಎನು ಗೊತ್ತಾ?

Share :

Published January 19, 2024 at 5:57am

    ರಾಮ ದೇವರಿಗೆ ಬೆಲ್ಲವನ್ನ ಕಳುಹಿಸಿದ ಸಾಮಾಜಿಕ ಕಾರ್ಯಕರ್ತ

    ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ

    ಸದ್ಯ ಬೆಲ್ಲ ಕಳುಹಿಸಿರುವ ರಾಮಭಕ್ತ ಯಾವ ಊರಿನವರು ಗೊತ್ತಾ?

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ. ವಿವಿಧ, ಪೂಜೆಗಳು ನಡೆಯುತ್ತಿದ್ದು ಸರಯೂ ನದಿ ತೀರದಿಂದ ಜಲಯಾತ್ರೆ ಮನಮೋಹಕವಾಗಿ ನೆರವೇರಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ದಿನಗಣನೆ ಶುರುವಾದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತರೊಬ್ಬರು 1 ಸಾವಿರ ಕೆ.ಜಿ ಬೆಲ್ಲ ರಾಮನ ಸನ್ನಿಧಿಗೆ ಕಳುಹಿಸಿಕೊಟ್ಟಿದ್ದಾರೆ.

ಜನವರಿ 22 ರಂದು ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕಾಗಿ ಉತ್ತರ ಪ್ರದೇಶದ ಮುಜಾಫರ್‌ನಗರದ ಸಾಮಾಜಿಕ ಕಾರ್ಯಕರ್ತ ಸತ್ಯ ಪ್ರಕಾಶ್ ರೇಶು ಎನ್ನುವರು 1 ಸಾವಿರ ಕೆಜಿ (10 ಕ್ವಿಂಟಾಲ್) ಬೆಲ್ಲ ಮಂದಿರಕ್ಕೆ ಈಗಾಗಲೇ ರವಾನಿಸಿದ್ದಾರೆ. ಏಷ್ಯಾದ ಅತಿ ದೊಡ್ಡ ಬೆಲ್ಲದ ಮಾರ್ಕೆಟ್ ಮುಜಾಫರ್‌ನಗರ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ 101 ಕ್ವಿಂಟಾಲ್ (10,100 kg) ಬೆಲ್ಲ ಕಳುಹಿಸುವ ಯೋಜನೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಆಯೋಧ್ಯೆಗೆ ರವಾನೆಯಾಗಿರುವ ಬೆಲ್ಲವನ್ನು ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಬಳಕೆ ಮಾಡಲಾಗುತ್ತದೆ. ಪೂಜೆಯ ಸಮಯದಲ್ಲಿ ಭಕ್ತರಿಗೆ ಪ್ರಸಾದವಾಗಿ ಬೆಲ್ಲ ನೀಡಬಹುದು. ಇತರೆ ಕಾರ್ಯಕ್ರಮಗಳಲ್ಲಿ ಜನರಿಗೆ ಬೆಲ್ಲ ವಿತರಿಸಲಾಗುತ್ತದೆ. ನಾವು ಕಳುಹಿಸಿರುವ ಬೆಲ್ಲವನ್ನು ಖೀರ್, ಟೀ, ಹಾಲು ಮತ್ತು ಹಲ್ವಾದೊಂದಿಗೆ ಬೆರೆಸಬಹುದು ಎಂದು ಸಾಮಾಜಿಕ ಕಾರ್ಯಕರ್ತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಗೆ 1 ಸಾವಿರ ಕೆಜಿ ಬೆಲ್ಲ ಕಳುಹಿಸಿದ ರಾಮಭಕ್ತ.. ಆತನ ಮುಂದಿನ ಆಲೋಚನೆ ಎನು ಗೊತ್ತಾ?

https://newsfirstlive.com/wp-content/uploads/2024/01/UP_BELLA.jpg

Load More