/newsfirstlive-kannada/media/post_attachments/wp-content/uploads/2025/07/UP-Woman.jpg)
ಉತ್ತರ ಪ್ರದೇಶದ ಝಾನ್ಸಿಯ ಒಂದೇ ಮನೆಯಲ್ಲಿ ಅಕ್ರಮ ಸಂಬಂಧಗಳು, ಚಿನ್ನ ಕಳ್ಳತನ ಮತ್ತು ಹತ್ಯೆ ನಡೆದಿದೆ. 54 ವರ್ಷದ ಸುಶೀಲಾ ದೇವಿಯ ಹತ್ಯೆಯ ಹಿಂದಿನ ಪಿತೂರಿಯನ್ನು ಪೊಲೀಸರು ಈಗ ಬಯಲು ಮಾಡಿದ್ದಾರೆ. ತನಿಖೆಯ ಪರಿಣಾಮವಾಗಿ ಆಕೆಯ ಕಿರಿಯ ಸೊಸೆ ಪೂಜಾ ಮತ್ತು ಪೂಜಾಳ ಸಹೋದರಿ ಕಮಲಾಳ ಬಂಧನವಾಗಿದ್ದು, ಇಬ್ಬರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಂಗಳವಾರ ರಾತ್ರಿ, ಪೊಲೀಸರು ಕಮಲಾಳ ಪ್ರಿಯಕರ ಅನಿಲ್ ವರ್ಮಾನನ್ನು ಗುಂಡು ಹಾರಿಸಿ ಬಂಧಿಸಿದ್ದಾರೆ, ಕೊಲೆಯ ನಂತರ ಅವನು ನಾಪತ್ತೆಯಾಗಿದ್ದ.
ಇದನ್ನೂ ಓದಿ: ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಯಶ್ ತಾಯಿ; ಅಣ್ಣಾವ್ರ ಆಶೀರ್ವಾದ ಪಡೆದು ಹೇಳಿದ್ದೇನು..?
ಪೊಲೀಸರ ಪ್ರಕಾರ, ಮೂವರ ಕೊಲೆಗೆ ಸಂಚು ರೂಪಿಸಿದ್ದ ಪೂಜಾ, ತನ್ನ ಗಂಡನ ಮನೆಯಿಂದ ಸುಮಾರು 8 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದಾಳೆ. ಕದ್ದ ಆಭರಣಗಳನ್ನು ಸಂಬಂಧಿಕರೊಬ್ಬರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಅನಿಲ್ ವರ್ಮಾನನ್ನು ಪೊಲೀಸರು ಹಿಡಿದಿದ್ದಾರೆ. ಅನಿಲ್ ವರ್ಮಾ ಪೊಲೀಸರ ಮೇಲೆ ಗುಂಡು ಹಾರಿಸಿದಾಗ, ಪೊಲೀಸರು ಮತ್ತು ಅನಿಲ್ ವರ್ಮಾ ಮಧ್ಯೆ ಎನ್ ಕೌಂಟರ್ ನಡೆದಿದೆ. ಪೊಲೀಸರು ಅನಿಲ್ ವರ್ಮಾ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಈಗ ಅನಿಲ್ ವರ್ಮಾ ಝಾನ್ಸಿಯ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ.
ಜೂನ್ 24ರ ಬೆಳಿಗ್ಗೆ ಝಾನ್ಸಿಯ ಕುಮ್ಹರಿಯಾ ಗ್ರಾಮದಲ್ಲಿ ಸುಶೀಲಾ ದೇವಿಯ ಹತ್ಯೆಯು ನಡೆದಿದೆ. ಸುಶೀಲಾ ದೇವಿ ಅವರು ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಆಕೆ ಹೇಗೆ ಸಾವನ್ನಪ್ಪಿದ್ದಾಳೆಂದು ಪೊಲೀಸರು ತನಿಖೆ ನಡೆಸಿದ್ದಾರೆ. 48 ಗಂಟೆಗಳ ಒಳಗೆ, ವಿಧಿವಿಜ್ಞಾನ ಸಾಕ್ಷ್ಯಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ಕುಟುಂಬ ಸದಸ್ಯರ ವಿಚಾರಣೆಯ ಆಧಾರದ ಮೇಲೆ ಪೊಲೀಸರು ಪ್ರಮುಖ ಶಂಕಿತರನ್ನು ಪತ್ತೆ ಹಚ್ಚಿದ್ದಾರೆ. ಅದೇ ಮನೆಯಲ್ಲಿ ವಾಸಿಸುತ್ತಿದ್ದ ಪೂಜಾ, ಆಕೆಯ ಸಹೋದರಿ ಕಮಲಾಳನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಇಬ್ಬರ ಮೇಲೆ ಕೊಲೆ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?
ಪೊಲೀಸ್ ವರಿಷ್ಠಾಧಿಕಾರಿ (ನಗರ) ಜ್ಞಾನೇಂದ್ರ ಕುಮಾರ್ ಅವರು ವಿಚಾರಣೆಯ ಸಮಯದಲ್ಲಿ ಪೂಜಾ ತನ್ನ ಸಹೋದರಿ ಮತ್ತು ಸಹೋದರಿಯ ಪ್ರಿಯಕರ ಅನಿಲ್ ವರ್ಮಾ ಸಹಾಯದಿಂದ ಕೊಲೆಯನ್ನು ನಡೆಸಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ದೃಢಪಡಿಸಿದ್ದಾರೆ. ಕೊಲೆಯಾದ ಸ್ವಲ್ಪ ಸಮಯದ ನಂತರ ವರ್ಮಾ ಗ್ರಾಮದಿಂದ ಪರಾರಿಯಾಗಿದ್ದ. ಕದ್ದ ಚಿನ್ನ ಮತ್ತು ಆಭರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಪತ್ತೆಯಾಗಿದ್ದ. ಪೊಲೀಸರ ಪ್ರಕಾರ, ಪಿತ್ರಾರ್ಜಿತ ಆಸ್ತಿ ಮತ್ತು ಭೂಮಿಗೆ ಸಂಬಂಧಿಸಿದ ದೀರ್ಘಕಾಲದ ಕೌಟುಂಬಿಕ ವಿವಾದವೇ ಈ ಕೊಲೆಗೆ ಕಾರಣ.
ಪೂಜಾ ತನ್ನ ಪತಿಯ ಮರಣದ ನಂತರ, ಪತಿಯ ಸೋದರ ಹಾಗೂ ತನ್ನ ಭಾವ ಕಲ್ಯಾಣ್ ಸಿಂಗ್ ಅವರೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದಳು. ಕಲ್ಯಾಣ್ ಸಿಂಗ್ ಮರಣದ ನಂತರ, ಪೂಜಾ ತನ್ನ ಮಾವ ಅಂದರೇ, ಪತಿಯ ತಂದೆ ಅಜಯ್ ಸಿಂಗ್ ಮತ್ತು ಪತಿಯ ಮತ್ತೊಬ್ಬ ಸೋದರ ಸಂತೋಷ್ ಅವರ ಜೊತೆ ಕುಮ್ಹರಿಯಾದಲ್ಲಿರುವ ಅವರ ಪೂರ್ವಜರ ಮನೆಗೆ ಕರೆದೊಯ್ದಳು.
ಅಲ್ಲಿ ಪೂಜಾ ಈಗಾಗಲೇ ವಿವಾಹಿತರಾಗಿದ್ದ ತಮ್ಮ ಭಾವ ಹಾಗೂ ಪತಿಯ ಸೋದರ ಸಂತೋಷ್ ಜೊತೆ ಲಿವಿಂಗ್ ಟುಗೇದರ್ ಸಂಬಂಧ ಆರಂಭಿಸಿದ್ದಳು. ಇದರಿಂದ ಒಂದು ಹೆಣ್ಣು ಮಗು ಹುಟ್ಟಿತ್ತು. ಆದರೇ, ಸಂತೋಷ್ ಅವರ ಕಾನೂನುಬದ್ದ ಪತ್ನಿ ರಾಗಿಣಿ ಈ ಸಂಬಂಧವನ್ನು ವಿರೋಧಿಸಿದ್ದಳು. ರಾಗಿಣಿ ತನ್ನ 9 ತಿಂಗಳ ಹಿಂದೆ ತನ್ನ ತವರು ಮನೆಗೆ ಹೋದಳು. ಈಗ ಝಾನ್ಸಿ ಪೊಲೀಸರು ಇಬ್ಬರು ಸೋದರರ ಸಾವಿನ ಬಗ್ಗೆ ತನಿಖೆಯನ್ನು ರೀ ಓಪನ್ ಮಾಡಿದ್ದಾರೆ.
ಪೂಜಾ ಮನೆಯ ನಿರ್ಧಾರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಳು. ಕೃಷಿ ಭೂಮಿಯನ್ನು ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದಳು. ಕುಟುಂಬದ 6.5 ಎಕರೆ ಭೂಮಿಯನ್ನು ಮಾರಾಟ ಮಾಡಿ, ಮಧ್ಯಪ್ರದೇಶದ ಗ್ವಾಲಿಯರ್‌ನ ತನ್ನ ಊರಿಗೆ ವಾಪಸ್ ಹೋಗಬೇಕೆಂದು ಒತ್ತಾಯಿಸಿದ್ದಳು. ಇದಕ್ಕೆ ಮಾವ ಅಜಯ ಸಿಂಗ್, ಪತಿಯ ಸೋದರ ಸಂತೋಷ್ ಒಪ್ಪಿಕೊಂಡಿದ್ದರು. ಆದರೇ, ಅತ್ತೆ ಸುಶೀಲಾ ದೇವಿ ಒಪ್ಪಿರಲಿಲ್ಲ. ಹೀಗಾಗಿ ಅತ್ತೆಯನ್ನು ಸೊಸೆ ಪೂಜಾ ಕೊಲೆ ಮಾಡಿದ್ದಾಳೆ.
ಪೂಜಾ ಪತಿಯ ಸಾವು ಹೇಗೆ ಸಂಭವಿಸಿತು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೊತೆಗೆ ಪತಿಯ ಸೋದರ ಕಲ್ಯಾಣ್ ಸಿಂಗ್ ಸಾವಿನ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಇಬ್ಬರು ಸೋದರರ ಸಾವಿನ ಹಿಂದೆ ಪೂಜಾಳ ಪಾತ್ರ ಇದೆಯಾ ಎಂಬ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಪೂಜಾ ತನ್ನ ಪತಿಯ ಸಾವಿನ ಬಳಿಕ ಆತನ ಇಬ್ಬರು ಸೋದರರಾದ ಕಲ್ಯಾಣ್ ಸಿಂಗ್, ಸಂತೋಷ್ ಜೊತೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದಳು ಎಂಬುದನ್ನು ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ