/newsfirstlive-kannada/media/post_attachments/wp-content/uploads/2025/05/SMART-PHONE.jpg)
ಸ್ಮಾರ್ಟ್ಫೋನ್ ಕಂಪನಿಗಳು ಈ ವಾರ ಮಾರುಕಟ್ಟೆಗೆ ಹೊಸ ಹೊಸ ಫೋನ್ ಪರಿಚಯಿಸ್ತಿವೆ. ಮೇ 26 ರಿಂದ ಮೇ 31 ರ ನಡುವೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿವೆ. ಕಡಿಮೆ ಬೆಲೆಯ ಫೋನ್‌ಗಳಿಂದ ಹಿಡಿದು ಉನ್ನತ ಮಟ್ಟದ ಫ್ಲ್ಯಾಗ್‌ಶಿಪ್ ಐಟಂಗಳೂ ಸೇರಿವೆ.
ಐಕ್ಯೂಒ ನಿಯೋ 10
iQOO ನಿಂದ ಈ ಹೊಸ Mid-range smartphone ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ ಮತ್ತು iQOO Q1 ಚಿಪ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 12GB RAM, 1256GB ಸಂಗ್ರಹ, 7,000mAh ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ವ್ಯವಸ್ಥೆ ಹೊಂದಿರುತ್ತದೆ. 144Hz AMOLED ಡಿಸ್ಪ್ಲೆ ಹೊಂದಿದೆ. ಮಾಹಿತಿ ಪ್ರಕಾರ ಇವತ್ತು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ.
Realme GT7 ಮತ್ತು GT 7T
ರಿಯಲ್‌ಮಿ ಎರಡು ಹೊಸ ಫೋನ್ ಪರಿಚಯಿಸಲಿದೆ. GT7 ಮತ್ತು GT 7T. GT7 ಡೈಮೆನ್ಸಿಟಿ 9400+ ಪ್ರೊಸೆಸರ್, 7,000mAh ಬ್ಯಾಟರಿ ಮತ್ತು 144Hz OLED ಡಿಸ್ಪ್ಲೇ ಒಳಗೊಂಡಿರಲಿದೆ. GT 7T ಯಲ್ಲಿ ಡೈಮೆನ್ಸಿಟಿ 8400 ಮ್ಯಾಕ್ಸ್ ಚಿಪ್, 12GB RAM, 6.8 ಇಂಚಿನ 1.5K ಡಿಸ್ಪ್ಲೇ ಮತ್ತು ಸೋನಿ IMX896 ಕ್ಯಾಮೆರಾ ಸೆನ್ಸರ್ ವ್ಯವಸ್ಥೆ ಇರಲಿದೆ. ಇದು ನಾಳೆ ಮಾರುಕಟ್ಟೆಗೆ ಬರಲಿದೆ.
ಅಲ್ಕಾಟೆಲ್ V3 ಸೀರೀಸ್
ಈ ದಿನದಂದು ಅಲ್ಕಾಟೆಲ್‌ನ (Alcatel) V3 ಅಲ್ಟ್ರಾ, V3 ಪ್ರೊ ಮತ್ತು V3 ಕ್ಲಾಸಿಕ್ ಬಿಡುಗಡೆಯಾಗಲಿವೆ. V3 ಅಲ್ಟ್ರಾ ಡೈಮೆನ್ಸಿಟಿ 6300 ಚಿಪ್‌ಸೆಟ್, 108MP ಕ್ಯಾಮೆರಾ ಮತ್ತು NXTPAPER ಸ್ಕ್ರೀನ್ ಹೊಂದಿದೆ. V3 ಪ್ರೊ ಮತ್ತು V3 ಕ್ಲಾಸಿಕ್ 6.7-ಇಂಚಿನ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 5200mAh ಬ್ಯಾಟರಿ ಒಳಗೊಂಡಿದೆ. ಇದು ನಾಳೆ ಬಿಡುಗಡೆ ಆಗುವ ನಿರೀಕ್ಷೆ ಇದೆ.
OnePlus Ace 5 ಸರಣಿ
ಚೀನಾದಲ್ಲಿ ಬಿಡುಗಡೆ ಆಗ್ತಿರುವ OnePlus Ace 5 ಮತ್ತು Ace 5 Ultra ಡೈಮೆನ್ಸಿಟಿ 9400e/9400+ ಪ್ರೊಸೆಸರ್, 16GB RAM, 7,000mAh ಬ್ಯಾಟರಿ ಮತ್ತು 100W ಚಾರ್ಜಿಂಗ್‌ನಂತಹ ಫೀಚರ್ಸ್ ಹೊಂದಿದೆ. ಇದು ಮೇ 28 ರಂದು ಚೀನಾ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ.
ಮೊಟೊರೊಲಾ ರೇಜರ್ 60
ಮೊಟೊರೊಲಾ ಪೋಲ್ಡಿಂಗ್ ಫೋನ್ ರೇಜರ್ 60 ಭಾರತಕ್ಕೆ ಬರ್ತಿದೆ. 6.96-ಇಂಚಿನ ಮೇನ್ ಡಿಸ್ಪ್ಲೇ, 3.63-ಇಂಚಿನ ಕವರ್ ಡಿಸ್ಪ್ಲೇ ಹೊಂದಿರಲಿದೆ. ಡೈಮೆನ್ಸಿಟಿ 7400X ಚಿಪ್, 50MP ಕ್ಯಾಮೆರಾ ಮತ್ತು 4500mAh ಬ್ಯಾಟರಿ ವ್ಯವಸ್ಥೆ ಇದೆ. ಮೇ 28 ರಂದು ಬಿಡುಗಡೆ ಆಗಲಿದೆ.
ವಿವೋ ಎಸ್30 ಸರಣಿ
ವಿವೋ ಎಸ್ 30 ಮತ್ತು ಎಸ್ 30 ಪ್ರೊ ಮಿನಿ ಚೀನಾದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್‌ಗಳಲ್ಲಿ ಒಂದು ಸ್ನಾಪ್‌ಡ್ರಾಗನ್ 7 Gen 4 ಆಧರಿಸಿದೆ. ಡೈಮೆನ್ಸಿಟಿ 9400e ಚಿಪ್‌ಸೆಟ್ ಇದರಲ್ಲಿ ಇರಲಿದೆ. S30 Pro Miniಗೆ 6.5K ಬ್ಯಾಟರಿ ಮತ್ತು 50MP ಕ್ಯಾಮೆರಾ ಸೇರಿಸಬಹುದು. ಈ ವಾರ ಮೊಬೈಲ್ ಪ್ರಿಯರಿಗೆ ಹಲವು ಉತ್ತಮ ಆಯ್ಕೆಗಳು ಸಿಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ