newsfirstkannada.com

UI ಸಿನಿಮಾ ತಂಡದಿಂದ ಬಿಗ್ ಸರ್‌ಪ್ರೈಸ್‌​.. ರಿಯಲ್ ಸ್ಟಾರ್ ಉಪ್ಪಿ ಹೇಳಿದ್ದೇನು?

Share :

Published February 12, 2024 at 3:25pm

  ವ್ಯಾಲೆಂಟೈನ್ಸ್​ ಡೇ​ಗೆ ರಿಯಲ್ ಸ್ಟಾರ್ ಏನ್ ಸರ್‌ಪ್ರೈಸ್ ಕೊಡ್ತಾರೆ?

  ಉಪೇಂದ್ರ ಅವರೇ ನಿರ್ದೇಶನ ಮಾಡುತ್ತಿರುವ ಬಹು ನಿರೀಕ್ಷಿತ ಚಿತ್ರ

  ತಮ್ಮದೇ ಅದ್ಭುತವಾದ ಫೋಟೋ ಶೇರ್ ಮಾಡಿ ಉಪ್ಪಿ ಹೇಳಿದ್ದೇನು?

ಉಪೇಂದ್ರ ಅಂದರೆ ಯಾವಾಗಲೂ ಹೊಸದಾಗಿ ಯೋಚನೆ ಮಾಡುತ್ತಿರುತ್ತಾರೆ. ಅವರ ಸಿನಿಮಾದ ಟೈಟಲ್​ಗಳೇ ಭಿನ್ನ ವಿಭಿನ್ನವಾಗಿರುತ್ತವೆ. ಪ್ರೇಕ್ಷಕರಿಗೆ ಸಿನಿಮಾದ ಮೂಲಕವೇ ಸಮಾಜದ ಅರಿವನ್ನು ಮೂಡಿಸುವ ಶ್ರೇಷ್ಠ ಕನ್ನಡದ ನಟ. ಉಪೇಂದ್ರ ಅವರು ಭಾರೀ ಬಜೆಟ್​ನಲ್ಲಿ ಯುಐ ಸಿನಿಮಾ ಡೈರೆಕ್ಟ್​ ಮಾಡುವುದರ ಜೊತೆಗೆ ಅದರಲ್ಲಿ ತಾವೇ ಅಭಿನಯ ಮಾಡುತ್ತಿದ್ದಾರೆ. ಸದ್ಯದ ಹೊಸ ಸಂಗತಿ ಎಂದರೆ, ಯುಐ ಮೂವಿಯ ಪ್ರೋಮೋ ರಿಲೀಸ್​ಗೆ ರೆಡಿಯಾಗಿದೆ. ಯಾವಾಗ?

ವ್ಯಾಲೆಂಟೈನ್ಸ್​ ಡೇಯಂದು ಅಂದರೆ ಇದೇ ಫೆಬ್ರವರಿ 14ರಂದು ಯುಐ ಸಿನಿಮಾದ ಫಸ್ಟ್​ ಸಿಂಗಲ್​ ಪ್ರೋಮೋವನ್ನ ಚಿತ್ರತಂಡ ರಿಲೀಸ್ ಮಾಡುತ್ತಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿರುವ ಈ ಸಿನಿಮಾದ ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಉಪೇಂದ್ರ ಅವರೇ ನಿರ್ದೇಶನ ಮಾಡಿದ್ದರಿಂದ ಚಿತ್ರದಲ್ಲಿ ಹೊಸದಾಗಿ ಏನಿರಬಹುದು ಎಂಬುದು ಉಪ್ಪಿ ಫ್ಯಾನ್ಸ್​ ಕುತೂಹಲವಾಗಿದೆ.

ಸದ್ಯ ಉಪೇಂದ್ರ ಅವರು ಯುಐ ಫಸ್ಟ್​ ಸಿಂಗಲ್​ ಪ್ರೋಮೋ ರಿಲೀಸ್​ ಆಗುವ ಬಗ್ಗೆ ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿರುವ ತಮ್ಮ ನಟನೆಯ ಅದ್ಭುತವಾದ ಫೋಟೋ ಹಾಕಿದ್ದು ಅದಕ್ಕೆ ಈ ಪ್ರೇಮಿಗಳ ದಿನ ಫೆ.14 ರಂದು ಪ್ರೀತಿಯ ಅಲೆಯಲ್ಲಿರಿ ಎಂದು ಟ್ಯಾಗ್​ಲೈನ್ ಬರೆದಿದ್ದಾರೆ. ಅಲ್ಲದೇ ಫೆ.14 ರಂದು 10 ಗಂಟೆಗೆ ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಮ್ಯೂಸಿಕ್ ಸೆಲೆಬ್ರೆಟ್ ಮಾಡಿ ಎಂದು ಶೇರ್​ ಮಾಡಿದ ಪೋಸ್ಟ್​ನಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UI ಸಿನಿಮಾ ತಂಡದಿಂದ ಬಿಗ್ ಸರ್‌ಪ್ರೈಸ್‌​.. ರಿಯಲ್ ಸ್ಟಾರ್ ಉಪ್ಪಿ ಹೇಳಿದ್ದೇನು?

https://newsfirstlive.com/wp-content/uploads/2024/02/UPENDRA_UI_1.jpg

Load More