ಬಾಲಿವುಡ್​ ನಟನನ್ನ ಭೇಟಿಯಾದ ಸ್ಯಾಂಡಲ್​ವುಡ್ ರಿಯಲ್​ ಸ್ಟಾರ್​ ದಂಪತಿ; PHOTOS

author-image
Veena Gangani
Updated On
ಬಾಲಿವುಡ್​ ನಟನನ್ನ ಭೇಟಿಯಾದ ಸ್ಯಾಂಡಲ್​ವುಡ್ ರಿಯಲ್​ ಸ್ಟಾರ್​ ದಂಪತಿ; PHOTOS
Advertisment
  • ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರನ್ನು ಭೇಟಿಯಾದ ದಂಪತಿ
  • ದಿಢೀರ್​ ಅಂತ ಪ್ರಿಯಾಂಕ ಹಾಗೂ ಉಪೇಂದ್ರ ನಟನನ್ನು ಭೇಟಿ ಆಗಿದ್ದೇಕೆ?
  • ಸೋಷಿಯಲ್​ ಮೀಡಿಯಾದಲ್ಲಿ ಌಕ್ಟೀವ್ ಆಗಿರೋ ಪ್ರಿಯಾಂಕ ಉಪೇಂದ್ರ

ಸ್ಯಾಂಡಲ್‌ವುಡ್‌ ಸ್ಟಾರ್​ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ  ಬಾಲಿವುಡ್ ಸ್ಟಾರ್​ ನಟನನ್ನು ಭೇಟಿಯಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರೋ ನಟಿ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಟಾಪ್​ 6ರಲ್ಲಿ ಯಾರ ಕೈಗೆ ಸೇರಲಿದೆ Sa Re Ga Ma Pa ಟ್ರೋಫಿ.. ವೀಕ್ಷಕರ ಚಿತ್ತ ಯಾರತ್ತ?

publive-image

ಶೇರ್​ ಮಾಡಿಕೊಂಡ ಫೋಟೋದಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರನ್ನ ಭೇಟಿಯಾಗಿ ಖುಷಿಪಟ್ಟಿದ್ದಾರೆ. ಆದ್ರೆ ಇದೇ ಫೋಟೋ ನೋಡಿದ ಅಭಿಮಾನಿಗಳು ದಿಢೀರ್​ ಅಂತ ಪ್ರಿಯಾಂಕ ಹಾಗೂ ಉಪೇಂದ್ರ ನಟನನ್ನು ಭೇಟಿ ಮಾಡಿದ್ದು ಏಕೆ ಅಂತ ಪ್ರಶ್ನೆಯನ್ನು ಹುಟ್ಟು ಹಾಕಿದೆ.

publive-image

ಬೆಂಗಳೂರಿನಲ್ಲಿರೋ ಮಿಥುನ್ ಚಕ್ರವರ್ತಿ ಅವರ Monarch ಹೋಟೆಲ್​ನಲ್ಲಿ ಪ್ರಿಯಾಂಕ ಉಪೇಂದ್ರ ಭೇಟಿ ಮಾಡಿದ್ದಾರೆ. ಈ ಹಿಂದೆ ಪ್ರಿಯಾಂಕ ಉಪೇಂದ್ರ ಅವರು ನಟ ಮಿಥುನ್ ಚಕ್ರವರ್ತಿ ಅವರ ಜೊತೆಗೆ ಕೆಲಸ ಮಾಡಿದ್ದರಂತೆ.

publive-imageಪ್ರಿಯಾಂಕಾ ಉಪೇಂದ್ರ ಈ ಹಿಂದೆ ಸೌತೆಲಾ (Sautela) ಎಂಬ ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದರು. ಇದೇ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಜೊತೆಗೆ ನಟಿ ಪ್ರಿಯಾಂಕಾ ಅವರು ಕೆಲಸ ಮಾಡಿದ್ದರು. ಹೀಗಾಗಿ ಅವರ ಮಧ್ಯೆ ಉತ್ತಮ ಒಡನಾಟ ಬೆಳೆದಿದೆ. ಒಂದು ರೀತಿಯಲ್ಲಿ ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment