/newsfirstlive-kannada/media/post_attachments/wp-content/uploads/2025/04/bank-janardhan14.jpg)
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (76) ಅವರು ನಿಧನರಾಗಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್ ಅವರು ಕೊನೆಯುಸಿರೆಳೆದಿದ್ದಾರೆ. ಈಗಾಗಲೇ ಬ್ಯಾಂಕ್ ಜನಾರ್ಧನ್ ಅವರ ಮನೆ ಬಳಿಕ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: 3 ಬಾರಿ ಹೃದಯಾಘಾತ.. 500ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದ ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ವಿಧಿವಶ
ನಟ ಬ್ಯಾಂಕ್ ಜನಾರ್ಧನ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸ್ಯಾಂಡಲ್ವುಡ್ ಸ್ಟಾರ್ ನಟರು ಅವರ ನಿವಾಸದ ಬಳಿ ದೌಡಾಯಿಸಿ ಅಂತಿಮ ದರ್ಶನ್ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಬ್ಯಾಂಕ್ ಜನಾರ್ಧನ್ ಅವರ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ.
ನಟ ಉಪೇಂದ್ರ ಹೇಳಿದ್ದೇನು?
ಕಾಶಿನಾಥ್ ಸಿನಿಮಾ ಮೂಲಕ ನಾವು ಆತ್ಮೀಯರಾಗಿದ್ವಿ. ತುಂಬಾ ಒಳ್ಳೆಯ ಕಲಾವಿದ. ಆವಾಗ ನಾವೆಲ್ಲ ಹೊಸಬ್ರು. ತುಂಬಾ ಚೆನ್ನಾಗಿ ಮಾತನಾಡಿಸ್ತಿದ್ರು. ಈ ರೀತಿ ಆಗಿರೋದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಯಾರ ಬಗ್ಗೆನೂ ಮಾತಾಡುತ್ತಾ ಇರಲಿಲ್ಲ. ಡೈರೆಕ್ಟರ್ಗೆ ಅವರು ಇದ್ರೆ ಸಾಕು ಅದೇ ಖುಷಿ. ಅವರು ಮತ್ತೇ ಹುಟ್ಟಿ ಬರ್ತಾರೆ ಅಂತ ಹೇಳಿದ್ದಾರೆ.
ನಟ ಧ್ರುವ ಸರ್ಜಾ ಭಾವುಕ ನುಡಿ
ಸಾಕಾಷ್ಟು ಭಾರೀ ಮನೆಗೆ ಬಂದಾಗ ಮಾತನಾಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇದು ತುಂಬಾ ದುಖಃಕರ ವಿಷಯವಾಗಿದೆ ಎಂದಿದ್ದಾರೆ.
ನಟ ಸಾಧುಕೋಕಿಲ ಏನಂದ್ರು?
ಯಾರ ಬಗ್ಗೆನೂ ನೆಗೆಟಿವ್ ಮಾತನಾಡದ ವ್ಯಕ್ತಿ. ಅವರ ವಾಕಿಂಗ್ ಸ್ಟೈಲ್ ನನಗೆ ಈಗಲೂ ಹಾಗೇ ನೆನಪಾಗತ್ತೆ. ಅವರಿಗೆ ಅಂಥ ಒಂದು ಕಾರ್ಯಕ್ರಮ ಮಾಡೇ ಮಾಡ್ತೀವಿ. ಮೊನ್ನೆ ರಾಜ್ಯೋತ್ಸವ ಪ್ರಶಸ್ತಿ ಸಂದರ್ಭದಲ್ಲೂ ನಾನು ಜನಾರ್ಧನ್ ಅವರಿಗೆ ಕೊಡ್ಬೇಕು ಅಂಥ ನಾನೇ ಹೇಳಿದ್ದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ